ಕಾವು:ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಶ್ರೀ ಕೆಂಪೇಗೌಡ ಕಂಚಿನ ಪ್ರತಿಮೆ ,ಥೀಮ್ ಪಾರ್ಕ್ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಾಜ್ಯಾದ್ಯಂತ ನಡೆಯುತ್ತಿದ್ದು ರಥವು ನ 3 ರಂದು ಕಾವು ಗೆ ಆಗಮಿಸಿತು.
ರಥಕ್ಕೆ ಪುತ್ತೂರು ತಾಲೂಕಿನ ಪರವಾಗಿ ಕಾವು ಈಶ್ವರಮಂಗಳ ಕ್ರಾಸ್ ಬಳಿ ಪುಷ್ಪಾರ್ಚನೆ ಮಾಡಿ,ಹೂ ಹಾರ ಹಾಕಿ ಸ್ವಾಗತಿಸಲಾಯಿತು.
ಅರಿಯಡ್ಕ ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪವಿತ್ರ ಸ್ಥಳಗಳ ಮೃತ್ತಿಕೆ ಸಮರ್ಪಿಸಲಾಯಿತು, ಈ ಸಂದರ್ಭದಲ್ಲಿ ಪುತ್ತೂರು ತಹಶೀಲ್ದಾರರು ನಿಸರ್ಗಪ್ರಿಯ ಜೆ,ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯ ಬಾಲಸುಬ್ರಹ್ಮಣ್ಯ,ನೆಟ್ಟಣಿಗೆ ಮುಡ್ನೂರು ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯ,ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ತಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರ ಶೇಖರ ರಾವ್ ನಿಧಿಮುಂದ, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯುರೂ,ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ,ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ,ಬೂಡಿಯರ್ ರಾಧಾಕೃಷ್ಣ ರೈ,ನಿತೀಶ್ ಕುಮಾರ್ ಶಾಂತಿವನ,ನಾಗಪ್ಪ ಗೌಡ ಬೊಮ್ಮೆಟ್ಟಿ, ಕೃಷ್ಣ ಪ್ರಸಾದ್ ಕೊಚ್ಚಿ ,ಎವಿ ನಾರಾಯಣ್, ಲೋಕೇಶ್ ಚಾಕೋಟೆ, ಸತೀಶ್ ಪಾಂಬರು, ವೆಂಕಟ್ರಮಣ ಗೌಡ ಕಳುವಾಜೆ,ಸುಬ್ರಾಯ ಗೌಡ ಪಾಲ್ತಾಡಿ, ತಿರುಮಲೇಶ್ವರ ಗೌಡ ದೊಡ್ಡಮನೆ,ಶ್ರೀಧರ್ ಗೌಡ ಅಂಗಡಿಹಿತ್ಳು,ಲೋಹಿತ್ ಆಮ್ಚಿನಡ್ಕ, ಅರಿಯಡ್ಕ ,ಕೊಳ್ತಿಗೆ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷರುಗಳು,ಸದಸ್ಯರು,ಸಿಬ್ಬಂದಿಳು,ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು ,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.