ಪುತ್ತೂರು : ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
ಹಸುಗಳ ಸಾಕಾಣಿಕೆ ವೆಚ್ಚ, ಪಶು ಆಹಾರದ ದರ ಹೆಚ್ಚಳವಾಗಿರುವದರಿಂದ ಅಲ್ಲದೆ ಹೋರಿಗಳು, ಬಂಜೆ ರಾಸುಗಳನ್ನು ಜೀವನ ಪರ್ಯಂತ ಸಾಕಬೇಕಾಗಿರುವ ಕಾರಣ ಸರಕಾರದಿಂದ ಸಿಗುವ ಪ್ರೋತ್ಸಹಾ ಧನ ಸೇರಿ ಲೀ.ಗೆ ರೂ.50 ಉತ್ಪಾದಕರಿಗೆ ಸಿಗಬೇಕು. ಈ ಬಗ್ಗೆ ಸಂಘದ ಮಹಾಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಆದುದರಿಂದ ಹೈನುಗಾರರ ಮೇಲಿನ ಕಾಳಜಿಯಿಂದ ಹಾಲಿನ ದರ ಏರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷ ಕೆ.ವಾಸುದೇವ ಮಯ್ಯ, ಉಪಾಧ್ಯಕ್ಷ ಎಮ್.ರಾಮಜೋಯಿಷ, ನಿರ್ದೇಶಕ ಎನ್.ಎಸ್.ಸುಕುಮಾರ್ ರಾವ್ ಉಪಸ್ಥಿತರಿದ್ದರು.