ಬಂಟ್ವಾಳ: ಬೋಳಂತೂರುನಿಂದ ತೆರಳಿ ನಾಪತ್ತೆಯಾಗಿದ್ದ, ಸುರಿಬೈಲು ನಿವಾಸಿ ಸುಲೈಮಾನ್ ಅವರ ಪುತ್ರ ಅಬ್ದುಲ್ ಸಮದ್ ಅವರನ್ನು ಕೊಲೆ ಮಾಡಿರುವ ಆರೋಪಿ ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮನನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.ಅಬ್ದುಲ್ ಸಮದ್ ಅವರ ಶವವನ್ನು ಮೃತನ ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಕೆ.ಎಸ್.ಹೆಗ್ಡೆ ಮೆಡಿಕಲ್ ಆಸ್ಪತ್ರೆಯ ಮಹಾಬಲೇಶ್ವರ ಶೆಟ್ಟಿ ಹಾಗೂ ತಂಡದವರು ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಯಿತು.
ಸುರಿಬೈಲು ನಿವಾಸಿ ಸುಲೈಮಾನ್ ಅವರ ಪುತ್ರ ಅಬ್ದುಲ್ ಸಮದ್(19ವ.)ಅವರನ್ನು ನ.1ರಂದು ಕೊಲೆ ಮಾಡಲಾಗಿತ್ತು.ಸಾಲೆತ್ತೂರು ಸಮೀಪದ ಕಟ್ಟೆಪುನಿ ನಿವಾಸಿ ರಿಕ್ಷಾ ಚಾಲಕ ಅದ್ದು ಯಾನೆ ಅದ್ರಾಮ ಕೊಲೆ ಆರೋಪಿ. ಮೃತ ಅಬ್ದುಲ್ ಸಮದ್ ಹಾಗೂ ಆರೋಪಿ ಅದ್ದು ಯಾನೆ ಅದ್ರಾಮ ಇಬ್ಬರೂ ಸ್ನೇಹಿತರಾಗಿದ್ದು ಗಾಂಜಾ ವ್ಯಸನಿಗಳಾಗಿದ್ದಾರೆ, ಜೊತೆಗೆ ಇವರೊಳಗೆ ಅನೈತಿಕ ವ್ಯವಹಾರಗಳೂ ನಡೆಯುತ್ತಿದ್ದವು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಳಿಕ ಸಮದ್ರನ್ನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು.ಆದರೆ ಸಮದ್ ಬೆಂಗಳೂರುಗೆ ಉದ್ಯೋಗಕ್ಕಾಗಿ ಹೋಗುವುದು ಅದ್ರಾಮನಿಗೆ ಇಷ್ಟವಿರಲಿಲ್ಲ.ಹಾಗಾಗಿ ಅಲ್ಲಿಗೆ ಹೋಗುವುದಕ್ಕೆ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿದ್ದ.ಸಮದ್ನನ್ನು ಊರಿಗೆ ಬರುವಂತೆ ಅದ್ರಾಮ ಒತ್ತಾಯಿಸಿದ್ದು, ನ.1ರಂದು ಊರಿಗೆ ಬಂದಿದ್ದ ಸಮದ್ ಹಾಗೂ ಅದ್ರಾಮ ಇಬ್ಬರೂ ಇರಾ ಜನನಿಭಿಡ ಗುಡ್ಡವೊಂದಕ್ಕೆ ಅದ್ರಾಮನ ರಿಕ್ಷಾದಲ್ಲಿ ಹೋಗಿದ್ದರು.ಆ ಬಳಿಕ ಅಲ್ಲಿ ಅವರೊಳಗೆ ಏನು ವ್ಯವಹಾರ ನಡೆದಿತ್ತು ಎಂಬುದು ತನಿಖೆಯ ವೇಳೆ ಬಯಲಾಗಬೇಕಿದೆ.ಆದರೆ ಅರೋಪಿ ಪ್ರಾಥಮಿಕ ತನಿಖೆಯ ವೇಳೆ ಹೇಳಿದಂತೆ,ಇಬ್ಬರೂ ಗಾಂಜಾ ಸೇವಿಸಿದ ಬಳಿಕ ಸಮದ್ ಬೆಂಗಳೂರಿಗೆ ತೆರಳುವ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಜಗಳ ಆಗಿದೆ.ಬಳಿಕ ಇಬ್ಬರೂ ಗುಡ್ಡೆಯಲ್ಲಿ ಮಲಗಿದ್ದರು.ಅ ಸಂದರ್ಭದಲ್ಲಿ ಅದ್ರಾಮ ರಿಕ್ಷಾದಲ್ಲಿ ಇರಿಸಿದ್ದ ಸೀಮೆ ಎಣ್ಣೆಯನ್ನು ಸಮದ್ರವರ ಮೇಲೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಗಿ ಆರೋಪಿಯು ಪ್ರಾಥಮಿಕ ತನಿಖೆಯ ವೇಳೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಸಮದ್ರನ್ನು ಕೊಲೆ ಮಾಡಿರುವ ವಿಚಾರವನ್ನು ಆರೋಪಿ ಅದ್ದು ಯಾನೆ ಅದ್ರಾಮ ತನ್ನ ಸಂಬಧಿಕನಾಗಿರುವ ಬೋಳಂತೂರು ಕೊಕ್ಕೆಪುಣಿ ನಿವಾಸಿ ಸೆಲೀಂ ಎಂಬವರಿಗೆ ತಿಳಿಸಿ, ಮೃತದೇಹವನ್ನು ಗುಂಡಿಗೆ ಹಾಕಿ ಮುಚ್ಚಲು ಸಹಕಾರ ಕೇಳಿದ್ದರಿಂದಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಘಟನಾ ಸ್ಥಳದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆದ ಸಂದರ್ಭ ಅಡಿಷನಲ್ ಎಸ್.ಪಿ.ಕುಮಾರ್ ಚಂದ್ರ, ಗ್ರಾಮಾಂತರ ಪೋಲೀಸ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್, ಎಸ್.ಐ.ಹರೀಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.