ಜ.28:ಪುತ್ತೂರಿನಲ್ಲಿ 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ : ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ ಸಹಿತ ಗಣ್ಯರ ಆಹ್ವಾನಿಸಲು ನಿರ್ಧಾರ

0

  • ಸ್ಮರಣ ಸಂಚಿಕೆ ಹೊರತರಲು ನಿರ್ಧಾರ
  • ಚೆನ್ನ ಕೋಣಕ್ಕೆ ಸನ್ಮಾನಿಸಲು ತೀರ್ಮಾನ

ಚೆನ್ನ ಕೋಣಕ್ಕೆ, ಇತರ ಸಾಧಕರಿಗೆ ಸನ್ಮಾನ

ಈ ವರ್ಷ ವಿಶೇಷವಾಗಿ,ಹಗ್ಗ ಹಿರಿಯ ವಿಭಾಗದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುವ ಸುಕುಮಾರ್ ಶೆಟ್ಟಿಯವರ “ಚೆನ್ನ” ಕೋಣಕ್ಕೆ ಸನ್ಮಾನಿಸುವುದೆಂದು ತೀರ್ಮಾನಿಸಲಾಯಿತು.ಸಮಾಜ ಸೇವೆಗಾಗಿ ಈ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುವ ರವಿಕಿರಣ್ ಶೆಟ್ಟಿ ಮೂಡಂಬೈಲು ಸಹಿತ ಹಲವರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವಮಾರು ಗದ್ದೆಯಲ್ಲಿ ಇತಿಹಾಸ ಪ್ರಸಿದ್ಧ 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ಜ.28ರಂದು ನಡೆಸಲು ತೀರ್ಮಾನಿಸಲಾಯಿತು.ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿರುವ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ನೇತೃತ್ವದಲ್ಲಿ ಈ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.ಕಂಬಳ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿಯ ಅಧ್ಯಕ್ಷೆ ಪ್ರಿಯಾಂಕ ಖರ್ಗೆ ಸಹಿತ ಹಲವಾರು ಗಣ್ಯರನ್ನು, ಚಲನಚಿತ್ರ ನಟರನ್ನು ಅತಿಥಿಗಳಾಗಿ ಕರೆಯುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆದು ಬಂದ ಹಾದಿಯ ಬಗ್ಗೆ ಸ್ಮರಣ ಸಂಚಿಕೆಯನ್ನು ತರಲು ಸಭೆಯಲ್ಲಿ ನಿರ್ಧರಿಸಲಾಯಿತು.ಇದ್ದಕ್ಕಾಗಿ ವಸಂತ ಕುಮಾರ್ ರೈ ಜೆ.ಕೆ.ಅವರ ಸಂಪಾದಕತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.
ದೇವಳದಿಂದ ಅನುಮತಿ ಪಡೆದು ಕಂಬಳದ ಕರೆಯನ್ನು ಮಾಡಿಸುವುದು.ಇದಕ್ಕಾಗಿ ಎಲ್ಲರ ಸಹಕಾರದಿಂದ ಕಾರ್ಯ ಚಟುವಟಿಕೆಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಂಬಳ ಸಮಿತಿಯ ಗೌರವ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ ದಿ.ಮುತ್ತಪ್ಪ ರೈಯವರ ನೇತೃತ್ವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೆಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಪುತ್ತೂರು ಮಹಾಲಿಂಗೇಶ್ವರನ ಅನುಗ್ರಹದೊಂದಿಗೆ ದೇವಸ್ಥಾನದ ಗದ್ದೆಯಲ್ಲಿ ನಡೆಸಿಕೊಂಡು ಬರುತ್ತಿರುವ ಕಂಬಳ ಕ್ರೀಡೆಯು ಹಲವಾರು ಮಂದಿಯ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ವರ್ಷದಿಂದ ವರ್ಷಕ್ಕೆ ಭಾರೀ ಜನಪ್ರಿಯತೆಯಿಂದ ನಡೆದುಕೊಂಡು ಬರುತ್ತಾ ಇದೆ.ಕಂಬಳವೊಂದು ಪ್ರಸಿದ್ಧ ಕ್ರೀಡೆಯಾಗಿದ್ದು ಇದೀಗ ಕಾಂತಾರ ಸಿನಿಮಾದ ಮೂಲಕ ಅವಿಭಜಿತ ದ.ಕ ಜಿಲ್ಲೆಗೆ ಮಾತ್ರವಲ್ಲ, ಇಡೀ ದೇಶ-ವಿದೇಶಕ್ಕೆ ಒಂದು ವೈಬ್ರೇಶನ್ ತಂದು ಕೊಟ್ಟಿದೆ ಎಂದರು. ಪುತ್ತೂರಿನ ಕಂಬಳ ಒಂದು ಐತಿಹಾಸಿಕ ಕ್ರೀಡೆಯಾಗಿದ್ದು, ಜಾತಿ ಮತ ಭೇದಭಾವವನ್ನು ಮರೆತು ಸಮಾನ ಮನಸ್ಸಿನಿಂದ ಎಲ್ಲರೂ ಒಗ್ಗೂಡಿಕೊಂಡು ಇದರ ಯಶಸ್ಸಿಗೆ ಕಾರಣರಾಗಿದ್ದಾರೆ. ಇಂತಹ ಕ್ರೀಡೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದೆ ಬರಬೇಕು ಎಂದು ಅವರು ಹೇಳಿದರು.
ಕಂಬಳದ ಯಶಸ್ಸಿನ ನೇತೃತ್ವವನ್ನು ಹೊಂದಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಕಂಬಳ ಕ್ರೀಡೆಯು ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾಗಿದೆ.ಈ ಕ್ರೀಡೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪುತ್ತೂರಿನಲ್ಲಿ ಕಳೆದ 30 ವರ್ಷಗಳಿಂದ ವಿನಯ ಕುಮಾರ್ ಸೊರಕೆ ಸೇರಿದಂತೆ ಹಲವಾರು ಮಂದಿ ಗಣ್ಯರು ಕಂಬಳವನ್ನು ಇಲ್ಲಿನ ತನಕ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.ಪುತ್ತೂರಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಈ ಕಂಬಳ ಕ್ರೀಡೆಗೆ ಮಹಾಲಿಂಗೇಶ್ವರ ದೇವರ ಶಾಪ ಇದೆ ಎಂದು ಅಪಪ್ರಚಾರ ನಡೆಸಿಕೊಂಡು ಬಂದಿದ್ದರು. ಕಳೆದ ಬಾರಿ ನಡೆದ ಅಷ್ಟಮಂಗಲದಲ್ಲಿ ಇಲ್ಲಿ ನಡೆಯುವ ಕಂಬಳ ಕ್ರೀಡೆಯಿಂದ ಮಹಾಲಿಂಗೇಶ್ವರನು ಸಂತೋಷಗೊಂಡಿದ್ದಾನೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ಅಪಪ್ರಚಾರ ನಿಂತಿದೆ.ಏನಿದ್ದರೂ ಕಂಬಳ ಕ್ರೀಡೆಯ ಯಶಸ್ಸಿಗೆ ಎಲ್ಲರೂ ಹುಮ್ಮಸ್ಸಿನಿಂದ ಮುಂದೆ ಬರಬೇಕಾಗಿದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಕಳೆದ 29 ವರ್ಷಗಳಿಂದ ಕೋಟಿಚೆನ್ನಯ ಕಂಬಳ ನಡೆದುಕೊಂಡು ಬರುತ್ತಿದ್ದು, ಇದೀಗ 30ನೇ ವರ್ಷದಲ್ಲಿ ನಡೆಯುತ್ತಿರುವ ಈ ಕ್ರೀಡೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿರುವ ಈ ಕಂಬಳ ಕ್ರೀಡೆಯಲ್ಲಿ ಖರ್ಚು ವೆಚ್ಚಗಳು ಕೂಡಾ ಅದೇ ರೀತಿ ಹೆಚ್ಚಾಗುತ್ತಿದೆ.ಇದರ ಖರ್ಚುವೆಚ್ಚಕ್ಕಾಗಿ 30ನೇ ವರ್ಷದಲ್ಲಿ, ಕಂಬಳದ ಆಗು ಹೋಗುಗಳ ಸ್ಮರಣಿಕೆ ಸಂಚಿಕೆಯನ್ನು ತರಲು ಉದ್ದೇಶಿಸಲಾಗಿದೆ.ಈ ಕುರಿತು ಎಲ್ಲರ ಸಹಕಾರ, ಸಹಾಯ ಅತ್ಯಗತ್ಯವಾಗಿದ್ದು, ಎಲ್ಲಾ ಸದಸ್ಯರು ಕಂಬಳದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲು ಮುಂದೆ ಬರಬೇಕಾಗಿದೆ ಎಂದರು.
ಕಂಬಳ ಸಮಿತಿ ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್ ವಂದಿಸಿ ಎಲ್ಲರ ಸಹಕಾರ ಯಾಚಿಸಿದರು.ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಕಂಬಳ ಸಮಿತಿ ಪ್ರದಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ವಸಂತ ಕುಮಾರ್ ರೈ ಜೆ.ಕೆ, ಉಪಾಧ್ಯಕ್ಷ ಶಿವರಾಮ ಆಳ್ವ, ಉಪಾಧ್ಯಕ್ಷ ಜೋಕಿಂ ಡಿಸೋಜ, ಉಪಾಧ್ಯಕ್ಷ ಜಿನ್ನಪ್ಪ ಪೂಜಾರಿ ಮುರ, ಮಹಮ್ಮದ್ ಬಡಗನ್ನೂರು, ಎ.ಕೆ.ಜಯರಾಮ ರೈ, ಜೊತೆ ಕಾರ್ಯದರ್ಶಿ ಪ್ರೇಮಾನಂದ ನಾಯಕ್ , ಉಪಾಧ್ಯಕ್ಷ ಸುದರ್ಶನ ನಾಯಕ್ ಕಂಪ, ಪ್ರಶಾಂತ್ ಮುರ, ಮಾಜಿ ಅಧ್ಯಕ್ಷ ಪ್ರವೀಣ್ ನಾಯಕ್ ಕಂಪ, ವಿಲ್ಫ್ರೆಡ್ ಫೆರ್ನಾಂಡಿಸ್ ಉರ್ಲಾಂಡಿ, ಮಂಜುನಾಥ ಗೌಡ, ಹಸೈನಾರ್ ಬನಾರಿ, ಅಬ್ದುಲ್ ಖಾದರ್ ಪೋಳ್ಯ, ಸುಂದರ ಮುರ, ಉಮಾಶಂಕರ್ ನಾಯಕ್, ಶೀನಪ್ಪ ಪೂಜಾರಿ ಪಡ್ನೂರು, ದಿನೇಶ್‌ರಾಜ್ ಬಿಳಿಯೂರು, ಕೆ.ವಂಸತ ಕುಮಾರ್ ರೈ, ಸಂತೋಷ್ ಕುಮಾರ್ ಜೆ.ಪಿ, ಜಯಪ್ರಕಾಶ್ ಬದಿನಾರ್, ನಸೀಬ್ ಬೋರ್‌ವೇಲ್ ಮಾಲಕ ಅಬೂಬಕ್ಕರ್ ಮುಲಾರ್, ಪ್ರವೀಣ್‌ಚಂದ್ರ ಆಳ್ವ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಿಪ್ಪಾಡಿ, ಪದ್ಮನಾಭ, ವಿಕ್ರಂ ಶೆಟ್ಟಿ ಅಂತರ, ಶಿವಪ್ರಸಾದ್ ರೈ ಎನ್, ದಾಮೋದರ್ ಶೆಟ್ಟಿ, ಗಂಗಾಧರ್ ಶೆಟ್ಟಿ ಕೈಕಾರ, ರೋಶನ್ ರೈ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ರಾಜೇಶ್ ಬನಾರಿ, ಬಾಲಕೃಷ್ಣ ಶೆಟ್ಟಿ, ಶಶಿ ನೆಲ್ಲಿಕಟ್ಟೆ, ಪ್ರವೀಣ್ ಶೆಟ್ಟಿ ಅಳಕೆಮಜಲು, ಲಿಖಿತ್ ರೈ, ಭಾಗ್ಯೇಶ್ ರೈ, ಯೋಗೀಶ್ ಸಾಮಾನಿ, ವಿಜಯಕುಮಾರ್, ರಾಜೇಶ್ ಪುತ್ತೂರು, ಲೋಕೇಶ್ ಪಡ್ಡಾಯೂರು, ಉಮೇಶ್ ಕರ್ಕೇರ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಬಿಪಿನ್ ರೈ ಸವಣೂರು, ಶರೀ‌ಫ್ ಬಲ್ನಾಡು, ಎಂ.ಬಿ ಇಸ್ಮಾಯಿಲ್ ಬಲ್ನಾಡು, ಕೃಷ್ಣಪ್ರಸಾದ್ ಆಳ್ವ, ಬಿ.ಕೆ.ಅಬ್ದುಲ್ ರಹಿಮಾನ್ ಕೂರ್ನಡ್ಕ, ವಿಜೇತ್ ಗೌಡ, ಬಾಲಕೃಷ್ಣ ಶೆಟ್ಟಿ ಮಠಂತಬೆಟ್ಟು, ಸನತ್ ರೈ ವಳತ್ತಡ್ಕ, ಶ್ರೀಕಾಂತ್ ಬೆಳ್ಳಿಪ್ಪಾಡಿ, ರಾಜೇಶ್ ಮುಕ್ವೆ, ರಂಜಿತ್ ಬಂಗೇರ, ನೇಮಾಕ್ಷ ಸುವರ್ಣ, ಪ್ರಕಾಶ್ ಗೌಡ ನೆಕ್ಕಿಲಾಡಿ, ರಾಕೇಶ್ ರೈ ಬೆಳ್ಳಿಪ್ಪಾಡಿ, ಸುರೇಶ್, ಜಯಂತ ಪೂಜಾರಿ ಕೆಂಗುಡೇಲ್, ಭಾಸ್ಕರ್ ಗೌಡ ಕೋಡಿಂಬಾಳ, ದುರ್ಗಾಪ್ರಸಾದ್ ರೈ ಕುಂಬ್ರ ಮೊದಲಾದವರು ವಿವಿಧ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here