ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವದ ಅಂಗವಾಗಿ ಶ್ರೀ ಜಟಾಧಾರಿ ದೈವದ ಮಹಿಮೆ ನ. 9 ರಂದು ರಾತ್ರಿ ನಡೆಯಿತು. ರಾತ್ರಿ ದೇವಳದ ಪ್ರಧಾನ ಅರ್ಚಕ ದಿವಾಕರ ಭಟ್ ರವರ ನೇತೃತ್ವದಲ್ಲಿ ಮಹಾಪೂಜೆಯಾಗಿ, ದೈವಗಳ ತಂಬಿಲ ಸೇವೆ ನಡೆಯಿತು. ಬಳಿಕ ಭಂಡಾರ ತೆಗೆದು ಅನ್ನಸಂತರ್ಪಣೆ ಜರಗಿತು. ಮಧ್ಯರಾತ್ರಿ 2 ಗಂಟೆಯ ವೇಳೆಗೆ ಜಟಾಧಾರಿ ದೈವದ ಮಹಿಮೆ ಆರಂಭಗೊಂಡಿತು.
ಸಂಜೆ ಶ್ರೀ ಭ್ರಮರಾಂಬಿಕ ಭಜನಾ ಸಂಘ ಬೆಟ್ಟಂಪಾಡಿ ಇವರಿಂದ ‘ಭಕ್ತಿ ಭಜನ್ ಸಂಧ್ಯಾ’ ನಡೆಯಿತು. ರಾತ್ರಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಕಲಾವಿದರಿಂದ ‘ಶಿವಭಕ್ತ ವೀರಮಣಿ’ ಯಕ್ಷಗಾನ ತಾಳಮದ್ದಳೆ ನಡೆಯಿತು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅರ್ಚಕರು ಸೇರಿದಂತೆ ಭಕ್ತಾಭಿಮಾನಿಗಳು ಪಾಲ್ಗೊಂಡು ದೈವದ ಪ್ರಸಾದ ಸ್ವೀಕರಿಸಿದರು.