





ದಿನಾ ಬೆಳಗ್ಗೆ ಇವತ್ತೇನು ತಿಂಡಿ ಮಾಡೋದು ಅಂತಾ ಯೋಚಿಸೋದೇ ಒಂದು ಕೆಲಸ. ಮನೆಯವರಿಗೆ ರುಚಿಯ ಜೊತೆಗೆ ಆರೋಗ್ಯಕ್ಕೂ ಸೈ ಅನಿಸುವ ತಿನಸುಗಳನ್ನು ಮಾಡೋದೆ ಒಂದು ದೊಡ್ಡ ಕಸರತ್ತು. ಒಂದೇ ರೀತಿಯ ರೈಸ್ ಐಟಂಗಳು ತಿಂದು ನಾಲಿಗೆ ರುಚಿ ಕೆಟ್ಟಿದ್ರೆ ಡಿಫರೆಂಟ್ ಆಗಿರೋ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ…



ಇವತ್ತಿನ ರೆಸಿಪಿಯಲ್ಲಿ ಸಿಂಪಲ್ ಹಾಗೂ ವಿಭಿನ್ನ ರುಚಿಯನ್ನು ನೀಡುವ ಅನನಾಸು (ಪೈನಾಪಲ್) ರೈಸ್ ಮಾಡುವುದು ಹೇಗೆ ಎಂದು ನೋಡೋಣ..





ಬೇಕಾಗುವ ಪದಾರ್ಥಗಳು
- ಅಕ್ಕಿ – 1 ಕಪ್
- ಅನಾನಸ್ ತುಂಡುಗಳು – ಅರ್ಧ ಕಪ್
- ಈರುಳ್ಳಿ – 1
- ಹಸಿಮೆಣಸಿನಕಾಯಿ – 2
- ಕರಿಬೇವು – ಸ್ವಲ್ಪ
- ಗೋಡಂಬಿ – 8 ರಿಂದ 10
- ಸಾಸಿವೆ – ಅರ್ಧ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಹಸಿಮೆಣಸಿನ ಪುಡಿ – ಅರ್ಧ ಚಮಚ
- ಅರಿಶಿನ – ಸ್ವಲ್ಪ
- ಎಣ್ಣೆ ಅಥವಾ ತುಪ್ಪ – 2 ಚಮಚ
ಮಾಡುವ ವಿಧಾನ
- ಮೊದಲು ಅಕ್ಕಿಯನ್ನು ಬೇಯಿಸಿ ತಣ್ಣಗಾಗಲು ಬಿಡಿ.
- ಒಂದು ಪ್ಯಾನ್ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಸಾಸಿವೆ, ಕರಿಬೇವು, ಗೋಡಂಬಿ ಹಾಕಿ ಬಣ್ಣ ಬದಲಾದರೆ ಬದಿಗೆ ತೆಗೆದಿಟ್ಟುಕೊಳ್ಳಿ.
- ಅದೇ ಪ್ಯಾನ್ಗೆ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಅನಾನಸ್ ತುಂಡುಗಳು, ಉಪ್ಪು, ಅರಿಶಿನ, ಹಸಿಮೆಣಸಿನ ಪುಡಿ ಹಾಕಿ 3-4 ನಿಮಿಷ ಹುರಿಯಿರಿ.
- ಕೊನೆಯಲ್ಲಿ ಅನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಗೋಡಂಬಿ ಹಾಕಿ ಹುರಿದರೆ ರುಚಿಯಾದ ಪೈನಾಪಲ್ ರೈಸ್ ಸವಿಯಲು ಸಿದ್ಧ










