ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು ಕಾರ್ಯಕ್ರಮ : ಡಾ. ನಾ. ಸೋಮೇಶ್ವರಜೊತೆ ವಿಶೇಷ ಸಂವಾದ

0

ಪುತ್ತೂರು: ನ 12: ಮಗು ಹುಟ್ಟಿದಕ್ಷಣದಿಂದ ಹೊಸ ಹೊಸ ವಿಚಾರಗಳನ್ನು ಕಲಿತುಕೊಂಡು ಹೋಗುತ್ತದೆ. ಬಾಲ್ಯದಿಂದಲೇಒಳ್ಳೆಯದು ಹಾಗೂ ಕೆಟ್ಟದನ್ನು, ಹಿತಕರ ಮತ್ತುಅಹಿತಕರವಾದ ಸೂಕ್ಷ್ಮ ವಿಚಾರಗಳನ್ನು ಗ್ರಹಿಸುವ ಸಾಮರ್ಥ್ಯ ಮಗುವಿಗೆ ಇರುತ್ತದೆ.ವಿದ್ಯಾರ್ಥಿಗಳು ತಮ್ಮಗುರಿ ಸಾಧನೆಗಾಗಿಸದಾಜಾಗೃತರಾಗಬೇಕುಎಂದುದೂರದರ್ಶನದಚಂದನವಾಹಿನಿಯಖ್ಯಾತರಸಪ್ರಶ್ನೆ?ಥಟ್‌ಅಂತ ಹೇಳಿ?ಕಾರ್ಯಕ್ರಮ ನಿರೂಪಕಡಾ. ನಾ. ಸೋಮೇಶ್ವರ ಹೇಳಿದರು.


ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ಹತ್ತನೇತರಗತಿ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆ ನೀಡುವ ಕನಸುಗಳು-೨೦೨೨ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ವಿಶೇಷ ಸಂವಾದಕಾರ್ಯಕ್ರಮದಲ್ಲಿ ಮಾತನಾಡಿದರು.

ಹುಟ್ಟಿನಿಂದಲೇ ನಾವು ಬುದ್ದಿವಂತರು .ಆದರೆ ನಾವು ಬೆಳೆಯುವ ಪರಿಸರದ ಆಧಾರದ ಮೇಲೆ ನಮ್ಮಗುಣ, ನಡತೆ ಮತ್ತು ವರ್ತನೆ ಬದಲಾವಣೆಯಾಗುತ್ತದೆ .ಜಂಕ್ ಫುಡ್ ಗಳನ್ನು ತ್ಯಜಿಸಿ, ಆರೋಗ್ಯಕ್ಕೆ ಹಿತಕರವಾದ ಆಹಾರವನ್ನು ಸೇವಿಸಬೇಕು. ವಿದ್ಯಾರ್ಥಿಗಳು ಓದುವುದರಜೊತೆಗೆಇನ್ನಿತರಚಟುವಟಿಕೆಯನ್ನು ರೂಢಿಸಿಕೊಳ್ಳಬೇಕು. ನಿರಂತರವಾಗಿ ಅಧ್ಯಯನ ಮಾಡುವುದರ ಮೂಲಕ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು. ವಿದ್ಯಾರ್ಜನೆ ವಿದ್ಯಾರ್ಥಿಯ ಬದುಕಿನ ಏಕೈಕ ನಿರ್ಧಾರವಾಗಬೇಕೆಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್‌ರೈಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಭಾಗ್ಯಶ್ರೀ ನಿರೂಪಿಸಿದರು.

LEAVE A REPLY

Please enter your comment!
Please enter your name here