ಸುದಾನ ವಸತಿ ಶಾಲೆಯಲ್ಲಿಯುವ ಮಾರ್ಗದರ್ಶಿ/ ವೃತ್ತಿ ಮಾರ್ಗದರ್ಶಿ ಕಾರ್ಯಕ್ರಮ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನವೆಂಬರ್ 12 ರಂದು ಹತ್ತನೇತರಗತಿಯ ವಿದ್ಯಾರ್ಥಿಗಳಿಗಾಗಿ ಯುವ ಮಾರ್ಗದರ್ಶಿ / ವೃತ್ತಿ ಮಾರ್ಗದರ್ಶಿ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ, ಇಸ್ಟಿಟ್ಯೂಟ್ ಫಾರ್‌ಇಂಡಿವಿಜುವಲ್‌ಡೆವಲಪ್‌ಮೆಂಟ್‌ನ ನಿರ್ದೇಶಕರೂಆದ ಪ್ರೋ.ರೋನಾಲ್ಡ್ ಪಿಂಟೋಅವರು ಭವಿಷ್ಯದಲ್ಲಿ ವೃತ್ತಿಆಧಾರಿತವಾಗಿರುವಉತ್ತಮ ಅವಕಾಶಗಳ ಬಗ್ಗೆ ಮತ್ತುಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿಗಳ ಜೊತೆ ಸಂವಾದವನ್ನೂ ನಡೆಸಿದರು.

ರೊ. ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಅಧ್ಯಕ್ಷರುರೋಟರಿಇಲೈಟ್, ರೊ. ಮೌನೇಶ್ ವಿಶ್ವಕರ್ಮಕೋಶಾಧಿಕಾರಿ, ರೋಟರಿಇಲೈಟ್, ಸುದಾನ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್, ಉಪ ಮುಖ್ಯ ಶಿಕ್ಷಕಿ ಶ್ರೀಮತಿ. ಲವೀನಾ ರೋಸಲೀನ್ ಹನ್ಸ್ ಉಪಸ್ಥಿತರಿದ್ದರು. ಇಂಟ್ಯರಾಕ್ಟ್‌ಆಯೆಶಾತನಾಜ್ (೧೦ನೇ) ಅಭ್ಯಾಗತರನ್ನು ಪರಿಚಯಿಸಿದರು. ಇಂಟ್ಯರಾಕ್ಟ್ ವಿದ್ಯಾರ್ಥಿಅಧ್ಯಕ್ಷೆ ವಿಖ್ಯಾತಿ ಬೆಜ್ಜಂಗಳ (೧೦ನೇ) ಸ್ವಾಗತಿಸಿ ಇಂಟ್ಯರಾಕ್ಟ್ ವಿದ್ಯಾರ್ಥಿ ಕಾರ್ಯದರ್ಶಿ ಅಭಿನವ್ (೯ನೇ) ವಂದಿಸಿದರು. ಅಪೇಕ್ಷಾ ಪೈ (೧೦ನೇ) ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯಇಂಟ್ಯರಾಕ್ಟ್‌ಕ್ಲಬ್?ಸ್ಪಂದನ? ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

 

LEAVE A REPLY

Please enter your comment!
Please enter your name here