





ರಾಮಕುಂಜ: ಕಡಬ ಸೈಂಟ್ ಆನ್ಸ್ ಶಾಲಾ ಕ್ರೀಡಾಂಗಣದಲ್ಲಿ ನ.9 ಹಾಗೂ 10 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಆತೂರು ಬದ್ರಿಯಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.


7ನೇ ತರಗತಿ ವಿದ್ಯಾರ್ಥಿ ಹಸನ್ ಮುಬಿನ್‌ರವರು ಉದ್ದಜಿಗಿತದಲ್ಲಿ ಪ್ರಥಮ ಹಾಗೂ ಎತ್ತರಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಕುಂಡಾಜೆ ಮಹಮ್ಮದ್ ಮತ್ತು ಶಾಹಿನಾ ದಂಪತಿ ಪುತ್ರ. ಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿ ಅಮಿಲಾ ಗುಂಡುಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಎಲ್ಯಂಗ ನಿವಾಸಿ ಅಹಮ್ಮದ್ ಬಾವ ಮತ್ತು ಯನ್.ಹಾಜಿರ ದಂಪತಿ ಪುತ್ರಿ. ವಿದ್ಯಾರ್ಥಿಗಳಿಗೆ ಶಾಲೆಯ ಸಂಚಾಲಕ ಆದಂ ಹಾಜಿ ಪಿ., ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಮಲ್ಲಿಕಾ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಅಮಿತಾರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ದಿವ್ಯಾ ಪಿ.ಎನ್.ರವರು ತರಬೇತಿ ನೀಡಿದ್ದರು.












