ಪುತ್ತೂರು: ದೇಶ ಸ್ವಾತಂತ್ರ್ಯ ಪಡೆದ ಬಳಿಕ ಆರ್ಥಿಕ ವ್ಯವಸ್ಥೆ ಸರಿಯಿಲ್ಲದಿದ್ದರೂ ಜನರ ಭವಿಷ್ಯದ ದೃಷ್ಟಿಯಲ್ಲಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದರು ಯುವ ಸಮೂಹ ವಿದ್ಯಾವಂತರಾಗಬೇಕೆಂದು ಐಐಟಿ, ಐಎಎಸ್ ಮಂತಾದ ವಿದ್ಯಾ ಸಂಸ್ಥೆಗಳನ್ನು ಕಟ್ಟಿದರು. ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿದರು. ದೇಶದ ಜನರ ರಕ್ಷಣೆಯನ್ನು ಮಾಡುವ ಎಲ್ಲಾ ಮಜಾಗ್ರತಾ ಕ್ರಮ ಕೈಗೊಂಡರು. ಇಂದು ಪರಿಸ್ಥಿತಿ ಬದಲಾಗಿದೆ. ವ್ಯವಸ್ಥೆಯನ್ನೇ ಹಾಳುಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನೆಹರೂ ಅವರ ನೆನಪು ಮಾಡಿಕೊಳ್ಳುವುದು ಅಗತ್ಯವಿದೆ ಎಂದು ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷರು ಪಾವನರಾಮರು ಹೇಳಿದರು.
ಸೂಜಿ ನಿರ್ಮಾಣಕ್ಕೆ ಸಾಧ್ಯವಿಲ್ಲದ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದ ಪಂಡಿತ್ ಜವಹರಲಾಲ್ ನೆಹರು ಅವರು ಈ ದೇಶದ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಲ್ಲದೆ. ದೇಶದಲ್ಲಿ ಸರ್ವಜನಾಂಗವೂ ಒಂದೇ ಎನ್ನುವ ರೀತಿಯಲ್ಲಿ ಬದುಕಲು ಅವಕಾಶ ನೀಡಿದ್ದರು. ಅವರಿಗೆ ಗೌರವ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಜೆಡಿಎಸ್ ನಾಯಕ ಅಶ್ರಫ್ ಕಲ್ಲೇಗ ಅಭಿಪ್ರಾಯ ಪಟ್ಟರು.
ದೇಶದ ಎಲ್ಲಾ ಸ್ಥರದ ಜನರ ಅಗತ್ಯವಿರುವಂತೆ ಬೇಕಾದ ವ್ಯವಸ್ಥೆಗಳನ್ನು ಮುಂದಾಗಿ ಯೋಚಿಸಿ ಮಾಡುವ ಅಪೂರ್ವ ಮುಂದಾಲೋಚನೆ ಇರುವ ಅಪರೂಪದ ಹಿರಿಯ ನಾಯಕ , ಸ್ವಾತಂತ್ರ್ಯ ಹೋರಾಟಗಾರ, ಪಂಡಿತ್ ಜವಹರಲಾಲ್ ನೆಹರು ಅವರು. ಅವರು ಬರೆದ ಡಿಸ್ಕವರಿ ಆಫ್ ಇಂಡಿಯ ಪುಸ್ತಕ ದೇಶದಲ್ಲಿ ಮುಂದಿನ ಕನಿಷ್ಠ ನೂರು ವರುಷಗಳ ಅಗತ್ಯದೆ ಬದಲಾವಣೆಗಳು ಅಡಗಿದೆ. ಮಕ್ಕಳನ್ನು ಅತಿಯಾಗಿ ಪ್ರೀತಿಸುವ ನೆಹರು ಮಕ್ಕಳ ಪ್ರೀತಿಯ ಚಾಚರ ಜನುಮದಿನ ಮಕ್ಕಳ ದಿನಾಚರಣೆಯಾಗಿ ಆಚರಣೆಯಾಗುತ್ತಿದೆ. ನೆಹರೂ ಅವರ ಸಾಹಸ,ಸಾಧನೆ,ಆಡಳಿತ ನಮಗೆಲ್ಲ ಆದರ್ಶ ಎಂದು ಲಯನ್ ರವಿಪ್ರಸಾದ್ ಶೆಟ್ಟಿ ಹೇಳಿದರು.
ನಿವೃತ್ತ ಸೇನಾನಿ ಕೃಷ್ಣ ನಾಯ್ಕ್ ತೆಂಕಿಲ, ಲಯನ್ ಜಯಪ್ರಕಾಶ್ ರೈ ನೂಜಿಬೈಲು, ಲಯನ್ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಲಯನ್ ಅಬೂಬಕ್ಕರ್ ಮುಲಾರ್, ಲಯನ್ ಹನೀಫ್ ಮುಂಡೂರು, ಅಮರನಾಥ ಗೌಡ ಬಪ್ಪಳಿಗೆ, ಶಂಶುದ್ದೀನ್ ಅಜ್ಜಿನಡ್ಕ, ಗಂಗಾಧರ ಶೆಟ್ಟಿ ಎಲಿಕ, ಹನೀಫ್ ಪುಂಚತ್ತಾರ್ ಸ್ವಾಗತಿಸಿ, ಇಸಾಕ್ ಸಾಲ್ಮರ ವಂದಿಸಿದರು.