ವಿವಿಧ ಸಂಘ-ಸಂಸ್ಥೆಗಳಿಂದ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ವಾಕಥಾನ್ ಜಾಥಾ, ಉಚಿತ ಮಧುಮೇಹ ತಪಾಸಣೆ, ಮಾಹಿತಿ ಶಿಬಿರ

0

ಜೀವನಶೈಲಿಯಲ್ಲಿ ಬದಲಾವಣೆಯಾದ್ರೆ ಮಧುಮೇಹ ನಿಯಂತ್ರಣ-ಡಾ.ನಝೀರ್ ಅಹಮ್ಮದ್

ಪುತ್ತೂರು: ಮಧುಮೇಹ ಬಾರದಂತೆ ಜಾಗೃತಿ ವಹಿಸುವುದು ಮುಖ್ಯ. ಒಮ್ಮೆ ಮಧುಮೇಹ ದೇಹಕ್ಕೆ ಭಾದಿಸಿದ್ರೆ ಅದನ್ನು ನಿಯಂತ್ರಣದಲ್ಲಿಡುವುದು ನಮ್ಮ ಆದ್ಯ ಕರ್ತವ್ಯ. ಜನರು ತನ್ನ ಜೀವನಶೈಲಿಯಲ್ಲಿ ಬದಲಾವಣೆ ತಂದ್ರೆ, ನಿತ್ಯ ವ್ಯಾಯಾಮ ಮಾಡುತ್ತಿದ್ರೆ ಡಯಾಬಿಟಿಸ್‌ನಿಂದ ನಿಯಂತ್ರಣ ಹೊಂದಬಹುದು ಎಂದು ಕಲ್ಲಾರೆ ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್‌ನ ವೈದ್ಯ ಡಾ.ನಝೀರ್ ಅಹಮ್ಮದ್‌ರವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಯುವ, ಕಲ್ಲಾರೆ ಡಾ.ನಝೀರ್ ಡಯಾಬಿಟಿಸ್ ಸೆಂಟರ್, ಇನ್ನರ್‌ವೀಲ್ ಕ್ಲಬ್ ಪುತ್ತೂರು, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ನ.14 ರಂದು ಮಹಾವೀರ ವೆಂಚರ್‍ಸ್‌ನಲ್ಲಿ ಜರಗಿದ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ವಾಕಥಾನ್, ಉಚಿತ ಮಧುಮೇಹ ತಪಾಸಣೆ ಮತ್ತು ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಮಧುಮೇಹ ಎನ್ನುವ ರೋಗವು ಬಹಳಷ್ಟು ಜನರಲ್ಲಿ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಜಾಸ್ತಿಯಾಗಲೂಬಹುದು. ಮಧುಮೇಹದಲ್ಲಿ ಭಾರತ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದು ಮುಂದಿನ ದಿನಗಳಲ್ಲಿ ಇದು ಪ್ರಥಮ ಸ್ಥಾನವನ್ನು ಅಲಂಕರಿಸಬಹುದು. ಡಯಾಬಿಟಿಸ್ ಬಗ್ಗೆ ಜನರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸುವುದು ಈ ದಿನಾಚರಣೆಯ ಉದ್ಧೇಶ ಎಂದ ಅವರು ಡಯಾಬಿಟಿಸ್ ಒಂದು ಜೀವನ ಶೈಲಿ ಆಧಾರಿತ ರೋಗವಾಗಿದ್ದು, ರೋಗದ ಬಗ್ಗೆ ಸಂಪೂರ್ಣವಾಗಿ ವೈಜ್ಞಾನಿಕವಾದ ಮಾಹಿತಿಯನ್ನು ಅರಿತಿರುವುದರಿಂದ ಮಾತ್ರ ಮಧುಮೇಹ ರೋಗವನ್ನು ನಿಯಂತ್ರಿಸಲು ಅಥವಾ ಬಾರದಂತೆ ತಡೆಗಟ್ಟಲು ಸಾಧ್ಯ ಎಂದು ಅವರು ಹೇಳಿದರು.
ಕಲ್ಲಾರೆ ಡಾ.ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಜರಗಿದ ಮಾಹಿತಿ ಕಾರ್ಯಾಗಾರದಲ್ಲಿ ಮಧುಮೇಹದಿಂದ ಮುಕ್ತಿ ಹೊಂದಿದ ಫಲಾನುಭವಿಯೋರ್ವರು, ಮಧುಮೇಹದಿಂದ ತಮ್ಮ ಜೀವನಶೈಲಿಯನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಾಗ ಯಾವುದೇ ಔಷಧಿಯ ಸೇವನೆ ಅಗತ್ಯವಿಲ್ಲ. ತಾನು ಕಳೆದ ಹಲವು ವರ್ಷಗಳಿಂದ ಯಾವುದೇ ಔಷಧಿಯನ್ನು ತೆಗೆದುಕೊಳ್ಳದೆ ವೈದ್ಯರ ಸಲಹೆಯಂತೆ ತನ್ನ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿ ಇದೀಗ ತಾನು ಮಧುಮೇಹದಿಂದ ಮುಕ್ತ ಹೊಂದಿದ್ದೇನೆ ಎಂದು ಕಾರ್ಯಾಗಾರದಲ್ಲಿ ಅನುಭವ ಹಂಚಿಕೊಂಡರು.
ಟೈಪ್ 1 ಡಯಾಬಿಟಿಸ್ ಹೊಂದಿರುವ ಫಲಾನುಭವಿ ವಿಷ್ಣುಕೀರ್ತಿರವರು ಮಾಹಿತಿ ನೀಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ಚೇತನಾ ಆಸ್ಪತ್ರೆಯ ಡಾ.ಜೆ.ಸಿ ಅಡಿಗ, ಇನ್ನರ್‌ವೀಲ್ ಕ್ಲಬ್ ಪುತ್ತೂರು ಅಧ್ಯಕ್ಷೆ ಟೈನಿ ದೀಪಕ್, ತಾ|ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ಗಣೇಶ್ ಕಲ್ಲರ್ಪೆ ಸಹಿತ ವಿವಿಧ ರೋಟರಿ ಸಂಸ್ಥೆಗಳ, ಇನ್ನರ್‌ವೀಲ್, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು, ಕನ್ನಡ ಸಾಹಿತ್ ಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು, ಫಾ|ಪತ್ರಾವೋ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿ, ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ವಂದಿಸಿದರು.

ವಾಕಥಾನ್ ಜಾಥಾ..
ಆರಂಭದಲ್ಲಿ ಬೆಳಿಗ್ಗೆ ದರ್ಬೆ ಜಂಕ್ಷನ್‌ನಲ್ಲಿ ನಡೆಸಲ್ಪಟ್ಟ ವಾಕಥಾನ್ ನಡಿಗೆಯನ್ನು ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್‌ರವರು ತೆಂಗಿನಕಾಯಿ ಒಡೆಯುವ ಮೂಲಕ ನಡಿಗೆಗೆ ಚಾಲನೆಯಿತ್ತರು. ಬಳಿಕ ವಾಕಥಾನ್ ಜಾಥಾವು ವಾಕಥಾನ್ ಟೀ-ಶರ್ಟ್‌ಗಳನ್ನು ಧರಿಸಿ ಮುಖ್ಯರಸ್ತೆ ಮೂಲಕ ಸಾಗಿ ಬೊಳುವಾರು ಮಹಾವೀರ ವೆಂಚರ್‍ಸ್‌ನಲ್ಲಿ ಸಮಾಪ್ತಿಗೊಂಡಿತು. ಡಾ.ನಝೀರ್ ಅಹಮದ್ ಕ್ಲಿನಿಕ್‌ನಲ್ಲಿ 27 ಮಂದಿ ಫಲಾನುಭವಿಗಳಿಗೆ ಉಚಿತ ಕೊಲೆಸ್ಟ್ರಾಲ್ ಹಾಗೂ ಪರೀಕ್ಷೆಯನ್ನು ಮಾಡಲಾಯಿತು.

ಪ್ರಾಜೆಕ್ಟ್ ಸ್ವೀಟ್ ಚೈಲ್ಡ್-ಮಕ್ಕಳ ಸಮ್ಮಿಲನ..
ಮಧುಮೇಹಿ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ|ನಝೀರ್ ಡಯಾಬಿಟಿಕ್ ಸೆಂಟರ್ ಮತ್ತು ಇಡಿಆರ್‌ಟಿ ಬೆಂಗಳೂರು ಇವರ ಸಹಯೋಗದೊಂದಿಗೆ ಟೈಪ್-1ಮಧುಮೇಹದಿಂದ ಬಳಲುತ್ತಿರುವ ಅರ್ಹ ಫಲಾನುಭವಿ ಮಕ್ಕಳಿಗೆ ವರ್ಷಕ್ಕೆ ರೂ.೮೫ ಸಾವಿರ ಬೆಲೆ ಬಾಳುವ ಇನ್ಸುಲಿನ್ ಮತ್ತು ಗ್ಲುಕೋಮೀಟರ್ ಅನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಾ ಬಂದಿದ್ದು, ಈ ಸಂದರ್ಭದಲ್ಲಿ ಈ ಸರಣಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಮತ್ತು ಟೈಪ್ 1 ಡಯಾಬಿಟೀಸ್ ರೋಗ ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳು ಮತ್ತು ಪೋಷಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

LEAVE A REPLY

Please enter your comment!
Please enter your name here