ಪುತ್ತೂರು ಮೂಲದ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಅನುಮಾನಾಸ್ಪದ ಸಾವು- ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ವಿಹಿಂಪ, ವೈದ್ಯರ ಸಹಯೋಗದಲ್ಲಿ ಪ್ರತಿಭಟನೆ

0

ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ

ವೈದ್ಯರ ಕೊಲೆ ಪ್ರೋಫೆಷನ್ ಜಿಹಾದ್ – ಡಾ.ಕೃಷ್ಣಪ್ರಸನ್ನ
ಹತ್ಯೆಯೇ, ಆತ್ಮಹತ್ಯೆಯೇ ಆಗಿರಲಿ ತನಿಖೆಯಾಗಬೇಕು – ಡಾ.ಸುರೇಶ್ ಪುತ್ತೂರಾಯ
ಇದು ಆತ್ಮಹತ್ಯೆಯಲ್ಲ ಕೊಲೆ – ಡಾ.ಗಣೇಶ್ ಪ್ರಸಾದ್ ಮುದ್ರಾಜೆ
ಎನ್ ಐ ಎ ತನಿಖೆಯಾಗಲಿ – ಶಿವಶಂಕರ್ ಭಟ್
ಪ್ರತಿಭಟನೆಗೆ ಎಲ್ಲಾ ಧರ್ಮ ಸಾಮಾರಸ್ಯ ತೋರಿಸಬೇಕು – ಕೇಶವಪ್ರಸಾದ್ ಮುಳಿಯ
ಸೂಕ್ತ ತನಿಖೆಯಾಗಲಿ -ವಿದ್ಯಾಗೌರಿ
ಹತ್ಯೆ ಮಾಡಿದ ಜಹಾದಿ ಮಾನಸಿಕೆಯುಳ್ಳವರನ್ನು ಗಲ್ಲಿಗೇರಿಸುವ ತನಕ ಹೋರಾಟ -ಮುರಳಿಕೃಷ್ಣ ಹಸಂತಡ್ಕ

ಪುತ್ತೂರು:ಪುತ್ತೂರು ಮೂಲದವರಾಗಿದ್ದು ಬದಿಯಡ್ಕದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ವೈದ್ಯರ ಸಹಯೋಗದೊಂದಿಗೆ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ನ.14ರಂದು ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಕಪ್ಪು ಪಟ್ಟಿ ಧರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯರ ಕೊಲೆ ಪ್ರೊಫೆಷನ್ ಜಿಹಾದ್:
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಮಾತನಾಡಿ ಜಿಹಾದ್ ಮಾನಸಿಕತೆ ಮೂಲಕ ಇವತ್ತು ಇಡೀ ಪ್ರಪಂಚವನ್ನು ಒಂದು ಮತಕ್ಕೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಸಾವು ಅನುಮಾನಾಸ್ಪದ ಆದರೂ ಅದೊಂದು ಹತ್ಯೆ ಆಗಿದೆ.ಯಾಕೆಂದರೆ ಅವರು ಆತ್ಮಹತ್ಯೆ ಮಾಡಲು ಸಾಧ್ಯವಿಲ್ಲ.ಇದು ಜಿಹಾದಿ ಮಾನಸಿಕತೆಯಿಂದ ನಡೆದಿರುವ ಹತ್ಯೆಯಾಗಿದ್ದು, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಿಜಾಬ್ ಜಿಹಾದ್‌ನಂತೆ ಇದೊಂದು ಪ್ರೊಫೆಷನ್ ಜಿಹಾದ್ ಆಗಿದೆ.ಈ ನಿಟ್ಟಿನಲ್ಲಿ ಮುಂದಿನ ದಿನ ನಾವು ಒಗ್ಗಟ್ಟಾಗದಿದ್ದಲ್ಲಿ ನಾಳೆ ಪುತ್ತೂರಿನಲ್ಲೂ ಇಂತಹ ಕೃತ್ಯ ನಡೆಯಬಹುದಾಗಿದ್ದು ಮುಂದಿನ ದಿನ ಇಂತಹ ಕೃತ್ಯ ಆಗದಂತೆ ನಾವು ನಮ್ಮ ಧ್ವನಿಯನ್ನು ದೇಶಾದ್ಯಂತ ಕೇಳಿಸಬೇಕಾಗಿದೆ.ರಾಜಕೀಯ ರಹಿತವಾಗಿ ಹಿಂದುಗಳು ಈ ಧ್ವನಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಹತ್ಯೆಯಾಗಿರಲಿ, ಆತ್ಮಹತ್ಯೆಯೇ ಆಗಿರಲಿ ತನಿಖೆಯಾಗಬೇಕು:
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ ಎಲ್ಲೋ ದೂರದ ವಿದೇಶದಲ್ಲಿ ನಾವು ನೋಡದ ಏನಾದರೂ ವಿಚಾರಗಳಿಗೆ ಇಲ್ಲಿ ಪತಾಕೆ ಹಿಡಿದು ಧರಣಿ ಕೂತುಕೊಳ್ಳುವ ಬುದ್ದಿ ಜೀವಿಗಳು ನಮ್ಮ ದೇಶದಲ್ಲೇ ಸ್ಥಳೀಯವಾಗಿ ಒಂದು ಅನ್ಯಾಯ ನಡೆದಾಗ ಅದನ್ನು ಪ್ರತಿಭಟಿಸಲು ಬಾರದೆ ಎಲ್ಲಿ ಹೋಗಿದ್ದಾರೆ ಎಂದು ಇವತ್ತು ಅರ್ಥ ಮಾಡಿಕೊಳ್ಳಬೇಕು.ಯಾಕೆಂದರೆ ನಮಗೆ ಕಷ್ಟಕಾಲ ಬಂದಾಗ ನಮಗೆ ಸಹಾಯ ಮಾಡಲಿಕ್ಕಿರುವವರು ನಮ್ಮದೇ ಬಾಂಧವರು.ಸಮಾಜಕ್ಕೆ ಅನೇಕ ವರ್ಷಗಳಿಂದ ಸೇವೆ ನೀಡಿದ ಸಜ್ಜನ ವ್ಯಕ್ತಿ ಡಾ.ಕೃಷ್ಣಪ್ರಸಾದ್ ಸರ್ಪಂಗಳ ಅವರ ಮೃತ್ಯು ಹತ್ಯೆ ಆಗಿರಲಿ ಇಲ್ಲವೇ ಆತ್ಮಹತ್ಯೆಯೇ ಆಗಿರಲಿ ಇದರ ಸರಿಯಾದ ತನಿಖೆ ಆಗಬೇಕು.ಸತ್ಯಾಂಶ ಬೆಳಕಿಗೆ ಬರಬೇಕು.ಆತ್ಮಹತ್ಯೆಯೇ ಆದರೂ ಅದಕ್ಕೆ ದುಷ್ಪ್ರೇರಣೆ ನೀಡುವುದು ಹತ್ಯೆಗೆ ಸಮಾನ ಎಂದರಲ್ಲದೆ, ದೂರದಲ್ಲೇನೋ ಆಗುತ್ತದೆ ಎಂದು ನಾವು ದಪ್ಪ ಚರ್ಮದ ಎಮ್ಮೆಯಂತಾಗುವುದು ಬೇಡ.ಮೊಳಕೆಯಲ್ಲೇ ಚಿವುಟುವ ಗಟ್ಟಿತನ ಬೇಕು.ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಆತ್ಮಕ್ಕೆ ಶಾಂತಿಯ ಜೊತೆಗೆ ನ್ಯಾಯ ಸಿಗಬೆಕೆಂದು ಆಗ್ರಹಿಸಿದರು.

ಇದು ಆತ್ಮಹತ್ಯೆಯಲ್ಲ ಕೊಲೆ:
ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕದ ಕಾರ್ಯದರ್ಶಿ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಅವರು ಮಾತನಾಡಿ, ಅನೇಕ ಅನುಮಾನಾಸ್ಪದ ವಿಚಾರಗಳು ಈ ಕೊಲೆಯ ಸುತ್ತ ಇದೆ.ಇದು ಅನುಮಾನಾಸ್ಪದ ಸಾವು ಎಂದು ಹೇಳಲಾಗುತ್ತಿದ್ದರೂ ಇದು ಖಂಡಿತಾ ಆತ್ಮಹತ್ಯೆಯಲ್ಲ ಕೊಲೆ ಆಗಿದೆ ಎಂದರು.

ಎನ್‌ಐಎಯಿಂದಲೇ ತನಿಖೆಯಾಗಲಿ:
ಹವ್ಯಕ ಸಮಾಜದ ಪ್ರಮುಖರಾದ ಶಿವಶಂಕರ್ ಭಟ್ ಬೋನಂತಾಯ ಅವರು ಮಾತನಾಡಿ ಈ ಹಿಂದೆ ಸೌಮ್ಯ ಕೊಲೆ ಪ್ರಕರಣದಲ್ಲಿ ಇಡೀ ಹಿಂದು ಸಮಾಜ ಈ ಪುಟ್ಟ ಬ್ರಾಹ್ಮಣ ಸಮಾಜದೊಂದಿಗೆ ಸೇರಿ ಇಡೀ ಪುತ್ತೂರಿನಲ್ಲೇ ನ್ಯಾಯ ಸಿಕ್ಕಿತ್ತು.ಆದರೆ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.ಈ ಬಾರಿ ಹಾಗೆ ಆಗಬಾರದು.ಎನ್.ಐ.ಎಯಿಂದಲೇ ಈ ಪ್ರಕರಣದ ತನಿಖೆ ಆಗಬೇಕು.ಯಾಕೆಂದರೆ ಕೇರಳದ ಸರಕಾರ ಕನ್ನಡಿಗರ ಪರವಾಗಿ ಇಲ್ಲ.ನಮಗೆ ಕೇರಳದಲ್ಲಿ ನ್ಯಾಯ ಸಿಗುವ ಧೈರ್ಯವಿಲ್ಲ ಎಂದರು.

ಪ್ರತಿಭಟನೆಗೆ ಎಲ್ಲಾ ಧರ್ಮ ಸಾಮರಸ್ಯ ತೋರಿಸಬೇಕು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ಎಲ್ಲ ಧರ್ಮದವರು ಸಾಮರಸ್ಯ ಸಾಮರಸ್ಯ ಎಂದು ಹೇಳುತ್ತಾರೆ. ಇಂತಹ ಪ್ರತಿಭಟನೆಯಲ್ಲಿ ಸಾಮರಸ್ಯ ತೋರಿಸಬೇಕು.ಎಲ್ಲ ಧರ್ಮದವರು ಒಗ್ಗಟ್ಟಾಗಿ ಬಂದು ಈ ಹತ್ಯೆಯನ್ನು ಖಂಡಿಸಿ ತನಿಖೆ ಮಾಡಬೇಕೆಂದು ಒತ್ತಡ ತಂದಾಗ ಸಾಮರಸ್ಯ ಕಾಣಲು ಸಾಧ್ಯ. ಯಾಕೆಂದರೆ ಜಾತಿ, ಧರ್ಮ ನೋಡಿ ಯಾವ ವೈದ್ಯರೂ ಚಿಕಿತ್ಸೆ ನೀಡುತ್ತಿಲ್ಲ.ಆದರೆ, ಜಾತಿ ಧರ್ಮ ಮೀರಿ ಈ ಪ್ರತಿಭಟನೆಯಲ್ಲಿ ಭಾಗವಹಿಸದವರು ಮುಂದೆ ಸಾಮರಸ್ಯದ ಕುರಿತು ಮಾತನಾಡುವುದು ಬೇಡ ಎಂದರು.
ಸೂಕ್ತ ತನಿಖೆಯಾಗಲಿ: ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ಜಿಹಾದ್‌ಗೆ ಕೇರಳವೇ ಉದಾಹರಣೆ.ನಾವು ಬಿಜೆಪಿ ಪಕ್ಷದಿಂದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಕೆಲಸ ಮಾಡಿದಾಗ ಅಲ್ಲಿನ ಹಿಂದುಗಳಿಗೆ ಯಾವುದು ಕೂಡಾ ಮನವರಿಕೆ ಆಗುತ್ತಿರಲಿಲ್ಲ.ಆದರೆ ಇವತ್ತು ಇಂತಹ ಕೃತ್ಯಗಳು ಹಿಂದುಗಳ ಮನಸ್ಸಿಗೆ ನೋವು ತಂದಿದೆ.ವೈದ್ಯರ ಸಾವಿನ ಕುರಿತು ಸೂಕ್ತ ತನಿಖೆ ಆಗಬೇಕಂದು ಆಗ್ರಹಿಸಿದರು.

ಹತ್ಯೆ ಮಾಡಿದ ಜಿಹಾದಿ ಮಾನಸಿಕತೆಯುಳ್ಳವರನ್ನು ಗಲ್ಲಿಗೇರಿಸಬೇಕು:
ಬಜರಂಗದಳ ಕರ್ನಾಟಕ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ವೈದ್ಯೋ ನಾರಾಯಣ ಹರೀಃ ಎಂಬ ವಾಕ್ಯಕ್ಕೆ ಅನುಗುಣವಾಗಿ ಅಕ್ಷರಶಃ ಸೇವೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ.ಇದೊಂದು ವ್ಯವಸ್ಥಿತ ಕೊಲೆ.ಇದು ಜಿಹಾದಿಗಳ ಕೃತ್ಯ ಎಂದರು.ಜಿಹಾದಿಗಳು ಆರಂಭದಲ್ಲಿ ಲವ್ ಜಿಹಾದ್, ಸೆಕ್ಸ್ ಜಿಹಾದ್, ಲ್ಯಾಂಡ್ ಜಿಹಾದ್ ಅಲ್ಲದೆ ಹಿಜಾಬ್ ಜಿಹಾದ್ ಹೆಸರಲ್ಲಿ ವಿದ್ಯಾದೇಗುಲದಲ್ಲೂ ಜಿಹಾದ್ ಮಾನಸಿಕತೆ ತಂದಿದ್ದಾರೆ.ಇವತ್ತು ಪ್ರೊಫೆಷನ್ ಜಿಹಾದ್ ಆರಂಭಿಸಿದ್ದಾರೆ.ಇದು ಬದಿಯಡ್ಕದಲ್ಲಿ ಡಾ.ಕೃಷ್ಣಮೂರ್ತಿಯವರ ಹತ್ಯೆ ಮೂಲಕ ಆರಂಭವಾಗಿದೆ.ಈ ನಿಟ್ಟಿನಲ್ಲಿ ಹಿಂದು ಸಮಾಜ ಕ್ಷಾತ್ರ ತೇಜಸ್ಸನ್ನು ಪ್ರಕಟಿಸಬೇಕಾದ ಅವಶ್ಯಕತೆ ಇದೆ. ಹಾಗಾಗಿ ಡಾ.ಕೃಷ್ಣಮೂರ್ತಿಯವರನ್ನು ಹತ್ಯೆ ಮಾಡಿದ ಜಿಹಾದಿ ಮಾನಸಿಕತೆಯುಳ್ಳವರನ್ನು ಗಲ್ಲಿಗೇರಿಸುವ ತನಕ ಹಿಂದು ಸಮಾಜದ ಹೋರಾಟ ನಿರಂತರ ಮುಂದುವರಿಯಲಿದೆ ಎಂದರು.

ಪ್ರತಿಭಟನೆ ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.ಕೊನೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಸಹಿ ಪಡೆದು ಸಹಾಯಕ ಕಮಿಷನರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ನರಸಿಂಹ ಕಾನಾವು, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ಅಮೃತಾ ಕೆ.ಪಿ, ಡಾ. ಕೃಷ್ಣಪ್ರಸಾದ್, ಡಾ.ಗೋಪಿನಾಥ್ ಪೈ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಪತಿ ರಾವ್, ಆದರ್ಶ ಆಸ್ಪತ್ರೆಯ ಡಾ.ಸುಬ್ರಾಯ ಭಟ್, ಡಾ.ಅನಿಲ್ ಬೈಪಡಿತ್ತಾಯ, ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಶಿವಪ್ರಸಾದ್, ಮಕ್ಕಳ ತಜ್ಞ ಡಾ.ಮಂಜುನಾಥ್ ರೈ, ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಭಾಸ್ಕರ್, ಆಯುರ್ವೇದ ಜಿಲ್ಲಾ ಆಯುಷ್ ವಿಭಾಗದ ಡಾ.ನಾರಾಯಣ ಅಸ್ರ, ಡಾ.ಸುಧೀರ್, ಡಾ.ಶಶಿಕಧರ್ ಕಜೆ, ಸುಶ್ರುತ ಆಸ್ಪತ್ರೆಯ ಡಾ.ರವಿಶಂಕರ್ ಪೆರುವಾಜೆ, ವಿಟ್ಲದ ಡಾ.ಪದ್ಮರಾಜ್ ಸಹಿತ ಹಲವಾರು ಮಂದಿ ವೈದ್ಯರು ಮತ್ತು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಶ್ರೀಧರ್ ತೆಂಕಿಲ, ಹರೀಶ್ ದೋಳ್ಪಾಡಿ, ಹಿಂದು ಜಾಗರಣ ವೇದಿಕೆಯ ಮನೀಶ್ ಕುಲಾಲ್, ಮನೀಶ್ ಬಿರ್ವ, ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮುಗೇರ, ಹರಿಪ್ರಸಾದ್ ನೆಲ್ಲಿಕಟ್ಟೆ, ದುರ್ಗಾ ವಾಹಿನಿಯ ಮೋಹಿನಿ ದಿವಾಕರ್, ಶರಾವತಿ, ಜಯಂತಿ, ಪ್ರಭಾವತಿ, ಜ್ಯೋತಿ ಆರ್ ನಾಯಕ್, ವಾಮನ್ ಪೈ, ನ್ಯಾಯವಾದಿ ಮಾಧವ ಪೂಜಾರಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಹಿಂಪ ನಗರ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಸ್ವಾಗತಿಸಿದರು.ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here