ನೆಹರು ವಿಚಾರ ವೇದಿಕೆಯಿಂದ ನೆಹರು ನೆನಪು ವಿಶೇಷ ಕಾರ್ಯಕ್ರಮ

0

ನೆಹರುರವರನ್ನು ಪಕ್ಷದ ಹೊರತಾಗಿ ತಿಳಿದುಕೊಳ್ಳುವುದು ಆವಶ್ಯಕ-ಅರವಿಂದ ಚೊಕ್ಕಾಡಿ

ಪುತ್ತೂರು: ದೇಶದ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರುರವರನ್ನು ಪಕ್ಷದ ದೃಷ್ಠಿಯಲ್ಲಿ ನೋಡಬಾರದು. ಪಕ್ಷವನ್ನ ಹೊರತು ಪಡಿಸಿ ನೋಡಬೇಕು. ಅವರನ್ನು ಪಕ್ಷದ ಹೊರತಾಗಿ ತಿಳಿದಕೊಳೂವ ಪ್ರಯುತ್ನ ಮಾಡಬೇಕು ಎಂದು ಹಿರಿಯ ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.


ನೆಹರು ವಿಚಾರ ವೇದಿಕೆ ಪುತ್ತೂರು ಇದರ ವತಿಯಿಂದ ನ.14 ರಂದು ಸಂಜೆ ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್‌ನಲ್ಲಿ ನಡೆದ ನೆಹರು ನೆನಪು ವಿಶೇಷ ಕಾರ್ಯಕ್ರಮದಲ್ಲಿ ನವ ಭಾರತ ನೆಹರು ದೂರದೃಷ್ಠಿಯಲ್ಲಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರುರವರ ಬಗ್ಗೆ ಪರ ವಿರೋಧಗಳ ಬಗ್ಗೆ ಚರ್ಚೆ ಬಿಟ್ಟು, ಇತರ ವಿಚಾರಗಳ ಬಗ್ಗೆ ಚರ್ಚೆಗಳಾಗಬೇಕು. ಅವರ ಯೋಜನೆ, ಚಿಂತನೆಗಳು ಅಂದಿನ ಪರಿಸ್ಥಿತಿಗೆ ಬಹಳಷ್ಟು ಸೂಕ್ತವಾಗಿತ್ತು. ಬದಲಾದ ಸಮಯಕ್ಕನುಗುಣವಾಗಿ ಅವುಗಳನ್ನು ಬದಲಾಯಿಸಬೇಕಿತ್ತು. ಸಂಸತ್ ಇರುವುದು ಅದಕ್ಕಾಗಿಯೇ. ಆಧುನಿಕ ಭಾರತದ ಕನಸು ಹೊತ್ತಿದ್ದ ನೆಹರುರವರು ಭಾರತಕ್ಕೆ ಹೊಸ ದಿಕ್ಕು ನೀಡಿದವರು. ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡಿರುವುದು ನೆಹರೂರವರಲ್ಲ. ಅಂದಿನ ಸ್ಥಿತಿಗೆ ಆ ನೀತಿಯು ಆವಶ್ಯಕವಾಗಿತ್ತು. ಏಕತಾ ಭಾವನೆ ಅವರಲ್ಲಿತ್ತು. ಅವರು ಮುಸ್ಲೀಂ ಲೀಗ್‌ನ ವಿರೋಧಿಯಾಗಿದ್ದರು. ದೇಶ ವಿಭಜಿಸುವ ಉದ್ದೇಶ ಅವರಲ್ಲಿರಲಿಲ್ಲ. ಅಂದಿನ ಹಿಂಸಾಚಾರಕ್ಕೆ ಬ್ರಿಟೀಷ್ ವೈಸರಾಯಿ ಓವೆಲ್ ಕಾರಣವಾಗಿದ್ದರು. ನೆಹರುರವರು ದೇಶದ ಸ್ವಾತಂತ್ರ್ಯ ಹೋರಾಟದ ಪೂರ್ಣ ಪ್ರಮಾಣದ ಹೋರಾಟವನ್ನು ನೀಡಿದವರಾಗಿದ್ದಾರೆ. ಕಾರ್ನಾಡು ಸದಾಶಿವ ರಾಯರೊಂದಿಗೆ ಉತ್ತಮ ಸಂಪರ್ಕದಲ್ಲಿದ್ದ ನೆಹರುರವರು ದ.ಕ ಜಿಲ್ಲೆಯೊಂದಿಗೆ ಉತ್ತಮ ಸಂಬಂಧವಿತ್ತು ಎಂದ ಅವರು ಏಕತೆಯನ್ನು ಪ್ರತಿಪಾದಿಸಿದ ನೆಹರೂರವರ ಜಾತ್ಯಾತೀತ ನೀತಿಯಿಂದಾಗಿ ಬಹು ಸಂಖ್ಯಾತರನ್ನು ಧಮನ ಮಾಡುವ ಅಸ್ತ್ರವಾಗಿದೆ. ಇದು ಎಡಪಂಥಿಯರ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು. ನೆಹರೂರವರ ಕೈಗಾರಿಕರಣದಿಂದಾಗಿ ಗ್ರಾಮೀಣ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹೊಡೆತ ಬಿದ್ದಿದೆ ಎಂದು ನೆಹರು ಬಗೆಗಿನ ಟೀಕೆಗಳನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಯುವ ಪೀಳಿಗೆ ಇತಿಹಾಸದ ಪುಟವನ್ನು ಓದಿತಿಳೀದುಕೊಳ್ಳಬೇಕು. ಯಾರೋ ಹೇಳಿದನ್ನು ತಿಳಿದುಕೊಳ್ಳುವುದು ಇತಿಹಾಸದ ಅಧ್ಯಯನವಾಗುವುದಿಲ್ಲ. ಯಾರೋ ಹೇಳಿದನ್ನು ತಿಳಿದು ಕೊಳ್ಳುವುದು ದೇಶಕ್ಕೆ ಅತ್ಯಂತ ದೊಡ್ಡ ಅಪಾಯವಾಗಿದೆ ಎಂದರು. ನೆಹರುರವರ ಪಾರ್ಲಿಮೆಂಟ್ ಕಾರ್ಯದರ್ಶಿಯಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರವರು ಜಿಲ್ಲೆಯಲ್ಲಿ ಪ್ರಮುಖ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರ ಕೊಡುಗೆಯನ್ನು ಜನರು ಒಪ್ಪುತ್ತಾರೆ. ಅವರಷ್ಟೇ ಕೊಡುಗೆಯನ್ನು ನೆಹರೂರವರು ಈ ಜಿಲ್ಲೆಗೆ ನೀಡಿದ್ದರೂ ಜನರು ಅದನ್ನು ಒಪ್ಪುವುದಿಲ್ಲ. ಕೃಷಿಗೆ ಪ್ರೋತ್ಸವಾಹ ನೀಡುವ ನಿಟ್ಟಿನಲ್ಲಿ ಅನೇಕ ಆನೆಕಟ್ಟುಗಳನ್ನು ನೆಹರು ನಿರ್ಮಾಣ ಮಾಡಿದ್ದಾರೆ. ಮಂಗಳೂರಿನಲ್ಲಿರುವ ಈಗಿನ ಕೇಂದ್ರ ಮೈದಾನ ಬ್ರಿಟೀಷರ ಕಾಲದಲ್ಲಿ ಸೆಂಟ್ರಲ್ ಮೈದಾನವಾಗಿತ್ತು. ಬಳಿಕ ಅದನ್ನು ನೆಹರು ಮೈದಾನ ಎಂದು ಹೆಸರಿಡಲಾಗಿತ್ತು. ಅವರ ಹೆಸರನ್ನು ಒಪ್ಪಿಕೊಳ್ಳಲಾಗದ ಕೆಲವರು ಅದನ್ನು ಕೇಂದ್ರ ಮೈದಾನ ಎಂದು ಹೆಸರಿಟ್ಟಿದ್ದಾರೆ ಎಂದ ಅವರು, ಬುದ್ದಿ ಜೀವಿ ಯುವ ಜನಾಂಗ ಇತಿಹಾಸವನ್ನು ಅರ್ಥ ಮಾಡಿಕೊಂಡು ಮುಂದಕ್ಕೆ ಹೆಜ್ಜೆಯಿಡಬೇಕಾದ ಆವಶಯ್ಕತೆಯಿದೆ ಎಂದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ರಮೇಶ್ ದೇಲಂಪಾಡಿ ಮಾತನಾಡಿ, ನೆಹರುರವರು ದೇಶದ ಪ್ರಥಮ ಪ್ರಧಾನಿಯಾಗಿರುವುದು ಮಾತ್ರವಲ್ಲದೆ ದೇಶದ ಆರ್ಥಿಕ ನೀತಿಗೆ ಪ್ರಥಮ ದಿಕ್ಕು ದಿಶೆ ನೀಡಿದವರಾಗಿದ್ದಾರೆ. ಅದೇ ಆಧಾರದಲ್ಲಿ ದೇಶ ಅಭಿವೃದ್ಧಿಯಲ್ಲಿ ಸಾಗುತ್ತಾ ಬಂದಿದೆ. ಅಭಿವೃದ್ಧಿ ವೇಗದಲ್ಲಿ ಹಿಂದಿನ ವೇಗಕ್ಕೂ ಈಗಿನ ವೇಗಕ್ಕೂ ಯಾವುದೇ ಬಿನ್ನಾಭಿಪ್ರಾಯಗಳಿಲ್ಲ ಎಂದರು. ದ.ಕ ಜಿಲ್ಲೆಯ ಅಡಿಕೆ ಆರ್ಥಿಕ ನೀತಿಯ ಮೇಲೆ ನಿಂತಿದೆ. ಅಡಿಕೆ ಧಾರಣೆ ಕುಸಿತವಾದರೆ ಈ ಜಿಲ್ಲೆಯ ವ್ಯಾಪಾರಿಗಳಿಗೂ ಹೊಡೆತ ಬೀಳುತ್ತದೆ. ಹೀಗಾಗಿ ಈ ಜಿಲ್ಲೆಯಲ್ಲಿ ಅಡಿಕೆ ಪ್ರಶ್ನಾತೀತವಾಗಿದ್ದು ಅಡಿಕೆಗೆ ಬರುವ ಮಾರಕ ರೋಗಗಳು, ಮಾರುಕಟ್ಟೆ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬೇಕಾದ ಆವಶ್ಯಕತೆಯಿದೆ ಎಂದರು.

ಪ್ರಗತಿಪರ ಚಿಂತಕ ವಿಲ್ಫ್ರೆಡ್ ಡಿ’ಸೋಜ ಮಾತನಾಡಿ, ಭಾರತದ ಸಂವಿಧಾನದ ಚೌಕಟ್ಟನ್ನು ನೀಡಿರುವ ನೆಹರುರವರು ಸಂವಿಧಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನೆಹರುರವರು ಆಧುನಿಕ ಭಾರತ ನಿರ್ಮಾಣದ ಪ್ರಧಾನ ಶಿಲ್ಪಿಯಾಗಿರುತ್ತಾರೆ. ಆದರೆ ಇಂದು ಕೆಲವರಿಗೆ ಅವರ ಹೆಸರು ಕೇಳಿದರೆ ಆಗದಿರುವ ಸ್ಥಿತಿಗೆ ಬಂದಿದೆ. ಅವರ ಬಗ್ಗೆ ಮಾತನಾಡುವವರೇ ಇಲ್ಲ. ಸ್ವಾತಂತ್ರ್ಯದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದ ಮಧ್ಯೆಯೂ ಆಡಳಿತ ನಡೆಸಿದ್ದಾರೆ. ಅವರ ನೀತಿಗಳು ಅಂದಿನ ಸ್ಥಿತಿ ಹೆಚ್ಚು ಸೂಕ್ತವಾಗಿತ್ತು. ಅವರ ಬಗ್ಗೆ ಬಹಳಷ್ಟು ಚರ್ಚೆಗಳಾಗಬೇಕು. ಅದು ನವೀನ್ ರೈಯವರ ಮೂಲಕ ಪುತ್ತೂರಿನಿಂದ ಆರಂಭವಾಗಿದೆ ಎಂದರು.

ರಾಜಕೀಯ ಉದ್ದೇಶಿತ ಕಾರ್ಯಕ್ರಮ ಅಲ್ಲ:
ಸಹ ಸಂಯೋಜಕ ನವೀನ್ ರೈ ಚೆಲ್ಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಜವಾಹರ್‌ಲಾಲ್ ನೆಹರೂರವರು ಪ್ರಧಾನಿಯಾಗಿ ಭಾರತವನ್ನು ಸುಧೀರ್ಘ ಕಾಲ ಆಳಿದ ನೇತಾರ. ಅವರ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯಬೇಕು. ನೆಹರೂರವರ ದೂರದೃಷ್ಟಿತ್ವದ ಪರಿಕಲ್ಪಣೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನೆಹರು ನೆನಪು ಕಾರ್ಯಕ್ರಮ ಸಂಯೋಜಿಸಲಾಗಿದೆ. ಇದು ಯಾವುದೇ ರಾಜಕೀಯ ಉದ್ದೇಶಿತ ಕಾರ್ಯಕ್ರಮವಾಗಿಲ್ಲ. ಆಡಳಿತದಲ್ಲಿ ನನ್ನಷ್ಟೇ ಶಕ್ತಿಯಿರುವವರು ವಿರೋಧಪಕ್ಷದಲ್ಲಿರಬೇಕು ಎಂದು ನೆಹರು ತಿಳಿದವರು. ನೆಹರು ಮೃತಪಟ್ಟಾಗ ದೇಶದ ಸುಪುತ್ರನನ್ನು ಕಳೆದುಕೊಂಡಿರುವುದಾಗಿ ವಾಜಪೇಯಿಯವರು ಹೇಳಿದ್ದರು. ಅನುದಾನ ತರುವುದೇ ಶಾಸಕರ ಕೆಲಸವಲ್ಲ. ಇಲ್ಲಿನ

ಮೂಲಭೂತ ಸೌಲಭ್ಯಗಳನ್ನು ನೀಡುವ ಶಾಸನವಾಗಬೇಕು. ವ್ಯವಸ್ಥೆ ಗಳಲ್ಲಿರುವ ಲೋಪಗಳನ್ನು ಸರಿಪಡಿಸಬೇಕು ಎಂದು ಹೇಳಿದರು.
ಸಹ ಸಂಯೋಜಕ ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಮೌರೀಸ್ ಮಸ್ಕರೇನಸ್, ಆಲಿಕುಂಞಿ ಕೊರಿಂಗಿಲ, ಮುರಳಿಧರ ರೈ ಮಠಂತಬೆಟ್ಟು ಅತಿಥಿಗಳಿನ್ನು ಹೂ, ಶಾಲು ನೀಡಿ ಸ್ವಾಗತಿಸಿದರು. ಕೃಷ್ಣಪ್ರಸಾದ್ ಆಳ್ವ ವಂದಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಮೌರೀಸ್ ಮಸ್ಕರೇನಸ್, ದಾಮೋಧರ ಭಂಡಾರ್‌ಕಾರ್, ರೋಷನ್ ರೈ ಬನ್ನೂರು, ನ್ಯಾಯವಾದಿಗಳಾದ ಭಾಸ್ಕರ ಕೋಡಿಂಬಾಳ, ಪಿ.ಕೆ ಸತೀಶನ್, ಫಾರೂಕ್, ಐತ್ತಪ್ಪ ಪೇರಲ್ತಡ್ಕ, ಪ್ಯಾಟ್ರಿಕ್ ಸಿಪ್ರಿಯಿನ್, ರವಿ ಕಟೀಲ್ತಡ್ಕ, ಹಮೀದ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here