ಬುಕ್ ಮಾಡಿದ್ದು ಚೂಡಿದಾರ ಸೆಟ್, ಬಂದದ್ದು ಹಳೆಯ ಪ್ಯಾಂಟಿನ ಒಂದು ಕಾಲು

0

ಮೀಸೊ ಆನ್‌ಲೈನ್ ಶಾಫಿಂಗ್‌ನಲ್ಲಿ ಹೀಗೊಂದು ಮೋಸ…!?

ಪುತ್ತೂರು: ಜನ ಆನ್‌ಲೈನ್ ಶಾಫಿಂಗ್‌ನತ್ತ ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿದ್ದಂತೆ ಅತ್ತ ಆನ್‌ಲೈನ್ ಶಾಫಿಂಗ್‌ನಲ್ಲೂ ಗ್ರಾಹಕರನ್ನು ಮೋಸ ಮಾಡುವ ತಂತ್ರಗಳೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನೇರವಾಗಿ ಫ್ಯಾಕ್ಟರಿಯಿಂದಲೇ ಕಡಿಮೆ ದರದಲ್ಲಿ ಐಟಮ್‌ಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುತ್ತೇವೆ ಎನ್ನುವ ಹಲವು ಆನ್‌ಲೈನ್ ಶಾಫಿಂಗ್ ಆಪ್‌ಗಳನ್ನು ನಂಬಿದ ಜನರು ತಮಗೆ ಗೊತ್ತಿಲ್ಲದೆ ಮೋಸಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ನೂರಾರು ಆನ್‌ಲೈನ್ ಶಾಫಿಂಗ್ ಆಪ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಲಭ್ಯವಿದ್ದು ಮನೆಯಲ್ಲೇ ಕೂತುಕೊಂಡು ಬೆರಳ ತುದಿಯಲ್ಲೇ ತಮಗೆ ಬೇಕಾದ ವಸ್ತುಗಳನ್ನು ಬುಕ್ಕಿಂಗ್ ಮಾಡುವ ಅವಕಾಶವನ್ನು ನೀಡುತ್ತಿವೆ. ಇದಲ್ಲದೆ ಬುಕ್ಕಿಂಗ್ ಮಾಡಿದ ವಸ್ತುಗಳಿಗೆ ಆನ್‌ಲೈನ್‌ನಲ್ಲೇ ಪೇಮೆಂಟ್ ಮಾಡಬಹುದಾದ ಅವಕಾಶ ಕೂಡ ಇದ್ದು ಅಥವಾ ವಸ್ತುಗಳನ್ನು ಪಡೆದುಕೊಳ್ಳುವ ಸಮಯದಲ್ಲೂ ಹಣ ಪಾವತಿಸುವ ವ್ಯವಸ್ಥೆಯೂ ಇದೆ. ಆದ್ದರಿಂದ ಜನರು ಆನ್‌ಲೈನ್ ಶಾಫಿಂಗ್‌ನತ್ತ ಮುಖಮಾಡುತ್ತಿದ್ದರೂ ತಮಗೆ ಗೊತ್ತಿಲ್ಲದಂತೆ ಮೋಸಕ್ಕೂ ಬಲಿಯಾಗುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಭಾರೀ ಸದ್ದು ಮಾಡುತ್ತಿರುವ ಮೀಸೊ ಆನ್‌ಲೈನ್ ಶಾಫಿಂಗ್ ಆಪ್ ಮೂಲಕ ಚೂಡಿದಾರ ಬುಕ್ ಮಾಡಿದ ಮಹಿಳೆಯೋರ್ವರಿಗೆ, ಚೂಡಿದಾರದ ಬದಲು ಹಳೆಯ ಪ್ಯಾಂಟ್ ಅನ್ನು ತುಂಡು ಮಾಡಿ ಪ್ಯಾಂಟಿನ ಒಂದು ಕಾಲನ್ನು ಮಾತ್ರ ಕಳುಹಿಸಿದ ಘಟನೆ ವರದಿಯಾಗಿದೆ. ಸರಕಾರಿ ಉದ್ಯೋಗಿ ಮಮತಾ ಎಂಬವರು ಮೀಸೊ ಆಪ್ ಮೂಲಕ ರೂ.664 ಬೆಲೆಯ ಚೂಡಿದಾರ ಸೆಟ್ ಅನ್ನು ಬುಕ್ ಮಾಡಿದ್ದು ಆನ್‌ಲೈನ್‌ನಲ್ಲೇ ಪೇಮೆಂಟ್ ಕೂಡ ಮಾಡಿದ್ದರು. ಅದರಂತೆ ಅವರಿಗೆ ಪಾರ್ಸೆಲ್ ಕೂಡ ಬಂದಿತ್ತು. ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಅದರಲ್ಲಿ ಹಳೆಯ ಪ್ಯಾಂಟಿನ ಒಂದು ಕಾಲು ಮಾತ್ರ ಇತ್ತು. ಪ್ಯಾಂಟಿನ ಒಂದು ಕಾಲನ್ನು ಕತ್ತರಿಸಿ ಪಾರ್ಸೆಲ್ ಮಾಡಿ ಕಳುಹಿಸಲಾಗಿತ್ತು. ಜನಪ್ರಿಯವಾಗಿರುವ ಮೀಸೊ ಆನ್‌ಲೈನ್ ಶಾಫಿಂಗ್‌ನಲ್ಲೂ ಈ ರೀತಿಯ ಮೋಸ ಮಾಡುತ್ತಿರುವ ಬಗ್ಗೆ ಸಂಸ್ಥೆ ಗಮನ ಹರಿಸಬೇಕಾಗಿದೆ. ಆನ್‌ಲೈನ್ ಶಾಫಿಂಗ್ ಮಾಡುವ ಮುನ್ನ ಜನರೂ ಯೋಚಿಸಬೇಕಾಗಿದೆ.

LEAVE A REPLY

Please enter your comment!
Please enter your name here