ರಾಷ್ಟ್ರೀಯ ಯುವ ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರಮಟ್ಟದ ಸ್ಪರ್ಧೆ: ಶ್ರೀಪ್ರಸಾದ್ ಪಾಣಾಜೆಗೆ ಪ್ರಶಸ್ತಿ

0

ಪುತ್ತೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ದೆಹಲಿಯಲ್ಲಿ ನಡೆದ ‘ಯಂಗ್ ಇಂಡಿಯಾ ಕೆ ಬೊಲ್’ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 280 ಸ್ಪರ್ಧಾಳುಗಳ ಪೈಕಿ ಪುತ್ತೂರು ಯುವಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆರವರು ಅಂತಿಮ ಸುತ್ತು ಪ್ರವೇಶಿಸಿದ 15 ಜನರಲ್ಲಿ ಓರ್ವರಾಗಿದ್ದು ರಾಷ್ಟ್ರೀಯ ನಾಯಕರಿಂದ ಮೆಚ್ಚುಗೆಗೆ ಪಾತ್ರರಾಗಿ ಪ್ರಶಸ್ತಿ ಗಳಿಸಿದ್ದಾರೆ. ಈ ಸ್ಪರ್ಧೆಗೆ ರಾಜ್ಯದಿಂದ ಅರ್ಹತೆ ಪಡೆದ 6 ಜನರಲ್ಲಿ ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಒಬ್ಬರಾಗಿದ್ದರು. ಅತ್ಯಂತ ಕ್ರಿಯಾಶೀಲ ಯುವ ನಾಯಕ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಂದ ಮೆಚ್ಚುಗೆ ಪಡೆದಿದ್ದ ಶ್ರೀಪ್ರಸಾದ್ ಅವರು ಪಾಣಾಜೆ ಗ್ರಾಮದ ನಡುಗಟ್ಟ ನಿವಾಸಿ ಹಿರಿಯ ಕಾಂಗ್ರೆಸ್ಸಿಗರಾಗಿದ್ದ ದಿ. ಶಿವಾನಂದ ಮಣಿಯಾಣಿಯವರ ದ್ವಿತೀಯ ಪುತ್ರರಾಗಿದ್ದು ಗ್ರಾಮೀಣ ಮಟ್ಟದಲ್ಲಿ ಶಿಕ್ಷಕನಾಗಿ, ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಕೊಂಡು ಉತ್ತಮ ಸಂಘಟಕ ಎಂದು ಗುರುತಿಸಿಕೊಂಡಿದ್ದಾರೆ. ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಇದರ ಸಂಚಾಲಕರಾಗಿ, ಯಾದವ ಸಭಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಶ್ರೀಪ್ರಸಾದ್ ಅವರು ಕೊರೊನಾ ಲಾಕ್ಡೌನ್ ಸಮಯದಲ್ಲಿ ಹಲವು ಮನೆಗಳಿಗೆ ಆಹಾರ ಕಿಟ್ ಮತ್ತು ಅಗತ್ಯ ಔಷಧಿ ಪೂರೈಸಿ ಗಮನ ಸೆಳೆದಿದ್ದರು. ದೆಹಲಿಯಲ್ಲಿ ನಡೆದ ಯಂಗ್ ಇಂಡಿಯಾ ಕೆ ಬೊಲ್ ರಾಷ್ಟ್ರೀಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಸುತ್ತಿನಲ್ಲಿ ಹಲವು ರಾಜ್ಯಗಳಿಂದ ಆಯ್ಕೆಯಾಗಿ ಭಾಗವಹಿಸಿದ ಸುಮಾರು 280ಕ್ಕೂ ಅಧಿಕ ಸ್ಪರ್ಧಾಳುಗಳ ಪೈಕಿ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ 15 ಜನರಲ್ಲಿ ಶ್ರೀಪ್ರಸಾದ್ ಕೂಡ ಒಬ್ಬರಾಗಿದ್ದು ರಾಜ್ಯ ಮತ್ತು ರಾಷ್ಟ್ರ ನಾಯಕರಿಂದ ಮೆಚ್ಚುಗೆ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here