ಪುತ್ತೂರು: ಸರ್ವೇ ಕಾರ್ಯದ ವೇಳೆ ಪುತ್ತೂರು ಪೇಟೆಯಲ್ಲಿ ಅನಧಿಕೃತ ಗೂಡಂಗಡಿಗಳು ಬೆಳಕಿಗೆ ಬಂದಿದ್ದು, ಈ ಅನಧಿಕೃತ ಗೂಡಂಗಡಿಗಳನ್ನು ನಗರಸಭೆಯ ಅಧಿಕಾರಿಗಳು ನ.19ರಂದು ತೆರವುಗೊಳಿಸಿದ್ದಾರೆ.
ಪುತ್ತೂರು: ಸರ್ವೇ ಕಾರ್ಯದ ವೇಳೆ ಪುತ್ತೂರು ಪೇಟೆಯಲ್ಲಿ ಅನಧಿಕೃತ ಗೂಡಂಗಡಿಗಳು ಬೆಳಕಿಗೆ ಬಂದಿದ್ದು, ಈ ಅನಧಿಕೃತ ಗೂಡಂಗಡಿಗಳನ್ನು ನಗರಸಭೆಯ ಅಧಿಕಾರಿಗಳು ನ.19ರಂದು ತೆರವುಗೊಳಿಸಿದ್ದಾರೆ.
ಕೆಲವೊಂದು ಗೂಡಂಗಡಿಗಳನ್ನು ಒಳಬಾಡಿಗೆಗೆ ಕೊಟ್ಟಿರುವುದು ಮತ್ತು ಕೆಲವೊಂದು ಕಡೆ ಅನಧಿಕೃತವಾಗಿ ತಲೆ ಎತ್ತಿದ ಕಬ್ಬಿನ ಹಾಲಿನ ಜ್ಯೂಸ್ ಅಂಗಡಿ ಸಹಿತ ಹಲವು ಅಂಗಡಿಗಳನ್ನು ತೆರವುಗೊಳಿಸಿದರು. ಹಾರಾಡಿ, ಮಂಜಲ್ಪಡ್ಪು ಸಹಿತ ಹಲವು ಕಡೆ ಕಾರ್ಯಾಚರಣೆ ನಡೆಸಲಾಯಿತು. ನಗರಸಭೆ ಎಫ್‌ಡಿಎ ಉಮಾನಾಥ್, ಹಿರಿಯ ಆರೋಗ್ಯ ನಿರೀಕ್ಷಕಿ ವರಲಕ್ಷ್ಮೀ, ಜಯಲಕ್ಷ್ಮೀ, ಸಮತೋಷ್, ರಾಧಾಕೃಷ್ಣ ಮತ್ತು ಸ್ಯಾನಿಟಿರಿ ಸೂಪರ್‌ವೈಸರ್ ಅಮಿತ್, ನಾಗೇಶ್, ಐತ್ತಪ್ಪ, ವಾಹನ ಚಾಲಕರು, ಸಿಬ್ಬಂದಿಗಳು, ಪೌರ ಕಾರ್ಮಿಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.