ಒಳಮೊಗ್ರು ಗ್ರಾಮದಲ್ಲಿ ಎರಡು ಕೋಟಿ ರೂ ರಸ್ತೆ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ: ಪ್ರತೀ ಮನೆ ಮನೆಗೆ ತೆರಳುವ ರಸ್ತೆಗಳೂ ಅಭಿವೃದ್ದಿಯಾಗಬೇಕೆಂಬುದೇ ನಮ್ಮ ಉದ್ದೆಶ: ಮಠಂದೂರು

ಪುತ್ತೂರು; ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಇನ್ನೂ ಬಹುತೇಕ ಗ್ರಾಮೀಣ ರಸ್ತೆಗಳು ಅಭಿವೃದ್ದಿಯಾಗಿಲ್ಲ, ಗ್ರಾಮೀಣ ರಸ್ತೆಗಳು ಸಂಪರ್ಕಕೊಂಢಿಯಂತಿದ್ದರೂ ಅವುಗಳನ್ನು ಜನೋಪಯೋಗಿ ರಸ್ತೆಯಾಗಿ ಮಾಡಬೇಕಾಗಿದ್ದು ಪಟ್ಟಣದಂತೆ ಹಳ್ಳಿಯ ರಸ್ತೆಗಳೂ ಅಭಿವೃದ್ದಿಯಾಗುವುದು ಮಾತ್ರವಲ್ಲದೆ ಪ್ರತೀ ಮನೆ ಮನೆಗೆ ತೆರಳುವ ರಸ್ತೆಯೂ ಕಾಂಕ್ರೀಟ್ ಆಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಹೇಳಿದರು.

ಅವರು ನ.೧೮ ರಂದು ಒಳಮೊಗ್ರು ಗ್ರಾಮದ ವಿವಿಧ ವಾರ್ಡುಗಳ ಒಟ್ಟು ೧೫ ಗ್ರಾಮೀಣ ರಸ್ತೆಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ನಮ್ಮ ಮನೆಗೆ ಬರುವ ರಸ್ತೆ ಚೆನ್ನಾಗಿರಬೇಕು, ಕಾಂಕ್ರೀಟ್ ಆಗಿರಬೇಕು ಎಂಬುದು ಪ್ರತೀಯೊಬ್ಬರ ಆಸೆಯಾಗಿದೆ ಈ ಆಸೆಯನ್ನು ನೆರವೇರಿಸಲು ಶಾಸಕನಾದ ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಕಳೆದ ನಾಲ್ಕೂವರೆ ವರ್ಷದಲಲ್ಲಿ ೧೧೦೦ ಕೋಟಿ ರೂ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಎಲ್ಲಾ ಗ್ರಾಮಗಳಿಗೂ ಸಮಾನ ಪ್ರಮಾಣದಲ್ಲಿ ಹಂಚಿಕೆ ಮಾಡಿದ್ದೇನೆ. ಹಳೆಯ ಕಾಲದಿಂದಲೇ ಬೇಡಿಕೆ ಇದ್ದ ಕೆಲವು ರಸ್ತೆಗಳು ಕಳೆದ ಬಾರಿ ಸ್ವಲ್ಪ ಮಟ್ಟಿಗೆ ಕಾಂಕ್ರೀಟ್ ಮಾಡಲಗಿದೆ. ಉಳಿದ ರಸ್ತೆಗಳಿಗೆ ಕಾಂಕ್ರೀಟ್ ಮಾಡಲು ಈ ಬಾರಿ ಒಳಮೊಗ್ರು ಗ್ರಾಮಕ್ಕೆ ೨ ಕೋಟಿ ಅನುದಾನವನ್ನು ನೀಡಿದ್ದೇನೆ. ಆಧ್ಯತೆ ಮೇರೆಗೆ ಅನುದಾನವನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಗ್ರಾಮದ ಪ್ರತೀಯೊಂದು ರಸ್ತೆಯನ್ನೂ ಅಭಿವೃದ್ದಿ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿದ್ದ ಶಾಸಕ ಸಂಜೀವ ಮಠಂದೂರು ನಾನು ಗೆದ್ದಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದರು. ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ- ಮಗಿರೆ ರಸ್ತೆ, ಬಿಜಲ ರಸ್ತೆಗೆ ಇದುವರೆಗೂ ಕಾಂಕ್ರೀಟ್ ಆಗಿರಲಿಲ್ಲ. ಈ ಬಾರಿ ಶಾಸಕರ ಅನುದಾನದಿಂದ ರಸ್ತೆ ಕಾಂಕ್ರೀಟ್ ಆಗುತ್ತಿದ್ದು ಗ್ರಾಮಸ್ಥರು ಶಾಸಕರಿಗೆ ಹೂವಿನ ಮಾಲೆ ಹಾಕಿ ಗೌರವಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು.

ಯಾವ ರಸ್ತೆಗೆ ಎಷ್ಟು ಅನುದಾನ?
ಕಾಪಿಕಾಡು ಮಿನಿಪದವು ರಸ್ತೆ ರೂ ೫೦ ಲಕ್ಷ, ಅಜ್ಜಿಕಲ್ಲು ಕಟ್ಟೆಜಾಲು ರಸ್ತೆ ರೂ ೧೦ ಲಕ್ಷ, ಕಿರನಡ್ಕ- ಮೊಡಪ್ಪಾಡಿ ರಸ್ತೆ ೧೦ ಲಕ್ಷ, ಕೈಕಾರ- ಎರ್ಮೆಟ್ಟಿ ರಸ್ತೆ ೧೫ ಲಕ್ಷ, ಪರ್ಪುಂಜ- ಗುರಿಕುಮೇರು ರಸ್ತೆ ೧೦ ಲಕ್ಷ, ಪರ್ಪುಂಜ- ಮುರುವ ರಸ್ತೆ ೧೦ ಲಕ್ಷ, ಪರ್ಪುಂಜ ಜನತಾ ಕಾಲನಿ ರಸ್ತೆ ೧೦ ಲಕ್ಷ, ಪಪುಂಜ-ಪಿದಪಟ್ಲ ರಸ್ತೆ ೧೦ ಲಕ್ಷ, ಕೊಯಿಲತ್ತಡ್ಕ- ಮಗಿರೆ ರಸ್ತೆ ೧೦ ಲಕ್ಷ, ಕುಂಬ್ರ ಬೊಳ್ಳಾಡಿ ರಸ್ತೆ ೧೦ ಲಕ್ಷ, ಮುಡಾಲಮೂಲೆ ರಸ್ತೆ ೧೦ ಲಕ್ಷ, ಕಲ್ಲಡ್ಕ ತೋಟದ ಮೂಲೆ ರಸ್ತೆ ೧೦ ಲಕ್ಷ, ಗೋವಿಂದ ಮೂಲೆ -ನೀರ್ಪಾಡಿ ರಸ್ತೆ ೧೦ ಲಕ್ಷ, ಕೈಕಾರ ಬಾನಬೆಟ್ಟು ರಸ್ತೆ ೧೦ ಲಕ್ಷ, ಮುಂಡೋವುಮೂಲೆ ಶೌಚಾಲಯ ರಚನೆ, ಕುಂಬ್ರ ಬಿಜಲ ರಸ್ತೆ , ದರ್ಬೆತ್ತಡ್ಕ ಕುಕ್ಕುತ್ತಡಿ ರಸ್ತೆ ರೂ ೧೫ ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಸ ಚನಿಲತಿಮ್ಮಪ್ಪ ಶೆಟ್ಟಿ, ಒಳಮೊಗ್ರು ಗ್ರಾಪಂ ಪಿಡಿಒ ಅವಿನಾಶ್, ಒಳಮೊಗ್ರು ಗರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ , ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಭೂನ್ಯಾಮಂಡಳಿ ಸದಸ್ಯ ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ನಳಿನಾಕ್ಷಿ, ರೇಖಾ, ಪ್ರದೀಪ್,ಬೂತ್ ಅಧ್ಯಕ್ಷರುಗಳಾದ ಮಾದವ ರೈ ಕುಂಬ್ರ,ರಾಕೇಶ್ ರೈ, ಪುರಂದರ ಶೆಟ್ಟಿ ಮುಡಾಲ, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ಪ್ರವೀಣ್ ಪಲ್ಲತ್ತಾರು, ಸಂತೋಷ್ ರೈ ನಾಯಿಲ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸಂತೋಷ್ ರೈ ಕೈಕಾರ, ಉಷಾ ನಾರಾಯಣ, ಬೂತ್ ಕಾರ್ಯದರ್ಶಿಗಳಾದ ರಾಜೇಶ್ ಪೂಜಾರಿ ಪಿದಪಟ್ಲ, ಶ್ರೀನಿವಾಸ, ಜಯರಾಂ ಆಚಾರ್ಯ, ಅರುಣ ರೈ ಬಿಜಲ, ಕರುಣಾ ರೈ ಬಿಜಲ, ವಸಂತಗೌಡ ಉರುವ, ಕೊರಗಪ್ಪ ಪೂಜಾರಿ ಉರುವ, ಶ್ಯಾಂಸುಂದರ್ ರೈ ಕೊಪ್ಪಳ, ಮಹಮ್ಮದ್ ಮುಸ್ಲಿಯಾರ್ ಡಿಂಬ್ರಿ, ಅಬ್ದುಲ್ಲ ಹಾಜಿ ಡಿಂಬ್ರಿ, ಯೂಸುಫ್ ಮುಸ್ಲಿಯಾರ್ ಡಿಂಬ್ರಿ, ಶಿವಪ್ರಸಾದ್ ಡಿಂಬ್ರಿ, ಭುಜಂಗ ಆಚಾರ್ಯ ಮಗಿರೆ, ಅನಿಲ್ ಡಿಂಬ್ರಿ, ಪ್ರವೀಣ್ ಡಿಂಬ್ರಿ, ಗ್ರಾಪಂ ಸದಸ್ಯ ಲತೀಫ್ ಕುಂಬ್ರ, ರಾಮಯ್ಯ ಗೌಡ ಬೊಳ್ಳಾಡಿ, ಅಬ್ದುಲ್‌ರಹಿಮಾನ್ ಅರಿಯಡ್ಕ, ಉಮೇಶ್ ಗೌಡ, ನಿವೃತ್ತ ಶಿಕ್ಷಕ ಸುಧಾಕರ ರೈ, ಸುಧಾಕರ ಆಳ್ವ ಕಲ್ಲಡ್ಕ , ಚಂದ್ರಕಲಾ, ಸುಶ್ಮಾ ಸತೀಶ್ ಕೋಡಿಬೈಲು ಮೊದಲಾದವರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯರಾದ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.