ಕಿದುವಿನಲ್ಲಿ ಕೃಷಿಕರ ಸಂಭ್ರಮ ಆರಂಭ

0

* ಸಿಪಿಸಿಆರ್‌ಐ ನೇತೃತ್ವದಲ್ಲಿ ಬೃಹತ್ ಕಿಸಾನ್ ಮೇಳಕ್ಕೆ ಚಾಲನೆ
* ನ. 23ರವರೆಗೆ ನಡೆಯಲಿರುವ ಮೇಳ, ಕೃಷಿ ಪ್ರದರ್ಶನ

ಪುತ್ತೂರು: ಕಡಬ ತಾಲೂಕಿನ ಕಿದು ಎಂಬ ಪುಟ್ಟ ಊರಿನಲ್ಲಿ ಕೃಷಿಕರ ಹಬ್ಬ ಶನಿವಾರ ಆರಂಭವಾಗಿದೆ. ಈ ಹಬ್ಬಕ್ಕೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಿಪಿಸಿಆರ್‌ಐ ಬೃಹತ್ ಕಿಸಾನ್ ಮೇಳ ಎಂದೇ ಹೆಸರಿಟ್ಟಿದೆ. ಜೊತೆಗೆ ಕೃಷಿ ಪ್ರದರ್ಶನಗಳು ನಡೆಯುತ್ತಿದೆ.


ಕಡಬ – ಸುಬ್ರಹ್ಮಣ್ಯ ಹೆದ್ದಾರಿಯ ನಡುವೆ ಸಿಗುವ ಸುಂದರ ಊರು ಕಿದು. ಇಲ್ಲಿನ 300 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿದೆ ದೇಶದ ಪ್ರತಿಷ್ಠಿತ ಸಂಸ್ಥೆ ಸಿಪಿಸಿಆರ್‌ಐನ ಅಂಗಸಂಸ್ಥೆ. ಸಸ್ಯಶ್ಯಾಮಲೆಯ ನಡುವೆ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಸಿಪಿಸಿಆರ್‌ಐನ ಆವರಣದಲ್ಲಿ ಇದೀಗ ಕೃಷಿಕರ ಓಡಾಟ ಶುರುವಾಗಿದೆ. ವಿಜ್ಞಾನಿಗಳು ಕಷ್ಟಪಟ್ಟು ಸಂಶೋಧಿಸಿರುವ ಆವಿಷ್ಕಾರಗಳು ಕೃಷಿಕರನ್ನು ಸಮೀಪಿಸಲು ಹವಣಿಸುವಂತಿದೆ. ವಿಜ್ಞಾನಿಗಳು ತಮ್ಮ ಆವಿಷ್ಕಾರವನ್ನು ಕೃಷಿಕರಿಗೆ ನೀಡಿ, ಅವರ ಯಶಸ್ಸಿನಲ್ಲಿ ತಾವು ಸುಖ ಕಾಣುವ ಹಂಬಲದಲ್ಲಿದ್ದಾರೆ. ಇದಕ್ಕೆ ಪುಷ್ಟಿ ನೀಡಿದಂತೆ ವಿಶಾಲ ಸಭಾಂಗಣದ ಸುತ್ತಮುತ್ತ ಹರಡಿರುವ ಸ್ಟಾಲ್ ಅಥವಾ ಮೇಳಗಳು.

ಕಿಸಾನ್ ಮೇಳ ಅಥವಾ ಕೃಷಿ ಮೇಳದಲ್ಲಿ ಸ್ಟಾಲ್‌ಗಳು ಸರ್ವೇಸಾಮಾನ್ಯ. ಕೃಷಿ ಮೇಳ ಎಂದಾಕ್ಷಣ ಒಂದಷ್ಟು ಕೃಷಿ ಸಂಬಂಧಿ ಉದ್ಯಮಗಳು ಆಗಮಿಸುತ್ತವೆ. ಕಿದುವಿನಂತಹ ಪುಟ್ಟ ಊರಿನಲ್ಲೂ ಬೃಹತ್ ಕೃಷಿ ಮೇಳ ಏರ್ಪಡಿಸಿ, ಅಲ್ಲಿಗೆ ರಾಜ್ಯದ ಮೂಲೆಮೂಲೆಯ ಉದ್ಯಮಿಗಳು ಆಗಮಿಸುವಂತೆ ಮಾಡಿರುವುದು ಸಿಪಿಸಿಆರ್‌ಐನ ಸಾಧನೆ. ಈ ಎಲ್ಲಾ ಸ್ಟಾಲ್‌ಗಳನ್ನು ಒಂದೇ ಸೂರಿನಡಿಗೆ ಕರೆಸಿ, ಅವರಲ್ಲಿರುವ ಉತ್ಪನ್ನಗಳನ್ನು ಕೃಷಿಕರಿಗೆ, ಸಾರ್ವಜನಿಕರ ಕೈಗೆಟುಕುವಂತೆ ಮಾಡುವ ಪ್ರಯತ್ನದ ಭಾಗವಾಗಿ ಕಿಸಾನ್ ಮೇಳ ಸಾದಾರಗೊಂಡಿದೆ.


ಯಾವೆಲ್ಲಾ ಸ್ಟಾಲ್‌ಗಳು:
ಕಿಸಾನ್ ಮೇಳದಲ್ಲಿ ಸುಮಾರು 150 ರಷ್ಟು ಸ್ಟಾಲ್‌ಗಳನ್ನು ಗಮನಿಸಬಹುದು. ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಕೃಷಿಕರಿಗೆ ಹತ್ತಿರವಾದದ್ದೇ. ಕೆಲವೆಲ್ಲಾ ನೇರವಾಗಿ ಕೃಷಿಗೆ ಪೂರಕವಾಗಿದ್ದರೆ, ಇನ್ನೊಂದಷ್ಟು ಕೃಷಿಕರ ಅಗತ್ಯತೆಗೆ ಸೇರಿರುವಂತಹದ್ದು. ಇದರ ಜೊತೆಗೆ ನರ್ಸರಿ, ಆಹಾರ ಸ್ಟಾಲ್‌ಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಕಿಸಾನ್ ಮೇಳದಲ್ಲಿ ಕಂಡುಬಂದಿರುವ ಸ್ಟಾಲ್‌ಗಳು – ಹೆಲ್ಪ್ ಡೆಸ್ಕ್, ಸುದ್ದಿ ಉಚಿತ ಮಾಹಿತಿ ಕೇಂದ್ರ, ಎಸ್‌ಆರ್‌ಕೆ ಲ್ಯಾಡರ್‍ಸ್, ಜೈನ್ ಇರಿಗೇಷನ್, ಜೀವವೈವಿಧ್ಯಕ್ಕೆ ಸಂಬಂಧಪಟ್ಟ ಸ್ಟಾಲ್‌ಗಳು, ಕಾಸರಗೋಡು ಸಿಪಿಸಿಆರ್‌ನ ಸಾಧನೆಗಳ ಮೇಳ, ಐಐಎಚ್‌ಆರ್, ಐಐಎಸ್‌ಆರ್, ಸಿಐಎಆರ್‌ಐ, ಐಐಎಂಆರ್, ಐಐಓಪಿಆರ್, ಪುತ್ತೂರು ಡಿಸಿಆರ್‌ನ ಸ್ಟಾಲ್‌ಗಳು, ಕೆವಿಕೆ ಮಂಗಳೂರು ಫ್ಯೂಚರ್ ಬಯೋಟೆಕ್, ಅಶ್ವಿನಿ ಮಲ್ಟಿ ಆಗ್ರೋ, ಕಾಮಧೇನು ಆಗ್ರೋ ಸೇಲ್ಸ್, ನುಅಲ್ಗಿ ನ್ಯಾನೋ ಬಯೋಟೆಕ್, ಕೆನರಾ ಬ್ಯಾಂಕ್, ಅಕ್ಷಾ ಕಾಟೇಜ್ ಇಂಡಸ್ಟ್ರೀ, ನಿತ್ಯಾನಂದ ಆಗ್ರೋ ಲಿ., ಸ್ಯಾನ್‌ಸನ್ ಕೆಮಿಕಲ್ಸ್, ಹೈಟೆಕ್ ಹೆಲ್ತ್ & ಫಿಟ್ನೆಸ್ ಕಂಪೆನಿ, ಅಮರಗೋಲ್ ಹರ್ಬಲ್ಸ್, ಎಲ್‌ಸೋಲ್ ಇರಿಗೇಷನ್ ಸೊಲ್ಯೂಷನ್ಸ್, ಕ್ಷೀರಾ ಎಂಟರ್‌ಪ್ರೈಸಸ್, ಹೆಲ್ತ್ ಕೇರ್ & ಬಾಡಿ ಮಸಾಜ್ ಉಪಕರಣಗಳು, ವೆಜಿಟೇಬಲ್ ಕಟರ್, ಪ್ರಧಮ್ ಸೀಡ್ಸ್, ಸೌತ್ ಕೆನರಾ ಕೊಕೊನಟ್ ಎಫ್‌ಪಿಓ ವಿಟ್ಲ, ಸುರಭಿ ಬುಕ್ಸ್ ಉಡುಪಿ, ನಿಧಿ ಫುಡ್ ಪ್ರಾಡಕ್ಟ್ಸ್, ಪಿಂಗಾರ ಎಫ್‌ಪಿಓ, ವಿಷ್ಣು ಆರ್‍ಗಾನಿಕ್ ಬೆಳಗಾವಿ, ಇನ್ನೋಮೆಕ್ ಟೆಕ್ನಾಲಜಿಸ್, ಆಶೀರ್ವಾದ್ ಸ್ಕೇಲ್ ಬಜಾರ್, ಎಸ್‌ಎನ್‌ಎಪಿ ಇನ್‌ವೆಂಚರ್‍ಸ್, ಪ್ರೊ ಬಿ ಪ್ರಾಡಕ್ಟ್ಸ್ ಬೆಂಗಳೂರು, ಪುರುಷರತ್ನ ಬಯೋಪ್ರೊಡ್ಯೂಸರ್ ಕಂಪೆನಿ, ಆದಿತ್ಯ ಹರ್ಬಲ್ಸ್ ಮಂಗಳೂರು, ಅರಂಭ ಪತ್ರಿಕೆ, ಈಶ್ವರಿ ಫ್ಯಾಬ್ಸ್, ನೇತ್ರಾವತಿ ಕೋಪ್ರಾ ಡ್ರೈಯರ್ ಸ್ಟಾಲ್ (ನೇತ್ರಾವತಿ ನರ್ಸರಿ), ಅರವಿಂದ್ ಹೊರಟ್ಟಿ ಶಂಕರ್ ಹ್ಯಾಂಡ್‌ಲೂಮ್ ಸಾರಿ, ಶ್ರೀಕೃಷ್ಣ ಎಲೆಕ್ಟ್ರಿಕಲ್ಸ್, ಎಸ್‌ಎಸ್ ಸ್ಕೇಲ್ ಕಡಬ, ಎಲ್‌ಎನ್‌ಟಿ ಸ್ಟಾಲ್, ಟಾಟಾ ಮೋಟಾರ್‍ಸ್ ಪುತ್ತೂರು, ಗೋರಕ್ಷಾ ಎಂಟರ್‌ಪ್ರೈಸಸ್, ಬೆಸ್ಟ್ ಕ್ವಾಲಿಟಿ ಸ್ಪ್ರೇ ಏರ್ ಗನ್, ಶ್ರೀ ಸಂಗಮೇಶ್ ಹುಬ್ಬಳ್ಳಿ, ಕ್ವೆಸ್ ಕ್ರಾಪ್ ಲಿಮಿಟೆಡ್, ಶ್ರೀ ಸಾಯಿ ಸೀಡ್ಸ್ ಹುಬ್ಬಳ್ಳಿ, ಗೋವಿಂದ್ರಾಜ್ ಲೆಡ್ ಬಲ್ಬ್, ಲೀ ಟ್ಯಾಮರಿಂಡ್ ಕಾನ್‌ಸಂಟ್ರೇಟ್, ಎಂಜಿಎಸ್ ಅಗ್ರೋ, ಜಲ ಜೀವನ್, ಶಕ್ತಿ ಅಮ್ಮ ಆರ್‍ಗಾನಿಕ್ ಮೆನ್ಯೂರ್ ಡಿಸ್ಟ್ರಿಬ್ಯೂಟರ್, ಟ್ರೋಪೋಸ್ಪೀರ್, ಕೃಷಿಬಿಂಬ ಪತ್ರಿಕೆ ಕಾರ್ಕಳ, ಕೂರ್ಗ್ ನರ್ಸರಿ, ನ್ಯಾಚುರಲ್ ಆರ್‍ಗಾನಿಕ್ಸ್, ಕ್ರಿಜಿನ್ ಅಗ್ರೀ & ಬಯೋಟೆಕ್ ಪ್ರೈ. ಲಿ., ಹುಂಡೈ, ಶ್ರೀ ಬಸವರಾಜ್ ಪಾಟೀಲ್ ಬುಕ್ ಸ್ಟಾಲ್, ಪ್ರಧಮ್ ಸೀಡ್ಸ್, ಮೊಂಡೆಲ್ಜ್ ಇಂಡಿಯಾ ಪ್ರೈ ಲಿ., ಮಾಂಡೋವಿ ಕಡಬ, ಕೆನಾನಿನ್, ಸಾಯ ಎಂಟರ್‌ಪ್ರೈಸಸ್, ಶ್ರೀ ಸತ್ಯನಾರಾಯಣ ನೀರಾ, ಅಡಿಕೆ ಪತ್ರಿಕೆ, ಮಾಸ್ಟರ್ ಗನ್ ಸ್ಟಾಲ್, ವಾಟರ್ ಬಿನ್ ಟೆಕ್ನಾಲಜಿ, ಭಾರತ್ ಆಟೋಕಾರ್‍ಸ್, ಆದಿತ್ಯ ಇ-ಸ್ಕೂಟರ್‍ಸ್, ಜಾಸಿಮ್ ಮಾರ್ಟಿಸ್, ಕಡಬ ಹೋಟೆಲ್, ಶ್ರೀಗಣೇಶ್ ಲೈಮ್ ಸೋಡಾ & ಹೋಟೆಲ್, ಪಾಪ್‌ಕಾರ್ನ್, ರೂಪಾ ಐಸ್‌ಕ್ರೀಮ್, ಜಿಎಂಆರ್, ಸ್ಪ್ರಂಗ್ಲರ್ ಬೇಕರಿ, ಶೋಭಿತ್ ನೆಟ್ಟಣ, ಲೆಮನ್ ಜ್ಯೂಸ್ ಶಾಪ್ ನೆಟ್ಟಣ, ವೈಷ್ಣವಿ ಗೋಭಿ ಹಾಗೂ ನರ್ಸರಿಗಳಾದ ಜ್ಯಾಕ್ ಅನಿಲ್ ಅವರ ಪುತ್ತೂರಿನ ಅದ್ಭುತ ಹಲಸು, ಗ್ರೀನ್ ವುಡ್ ನರ್ಸರಿ, ನೇತ್ರಾವತಿ ನರ್ಸರಿ, ಉಮಾಪತಿ ಕೋಕನಟ್ ಹೈಬ್ರೀಡ್, ನವನೀತ್ ನರ್ಸರಿ. ಇದರೊಂದಿಗೆ ತೋಟಗಾರಿಕಾ ಬೆಳೆಗಳಿಗೆ ಡ್ರೋಣ್ ಮೂಲಕ ಮದ್ದು ಸಿಂಪಡೆಣೆಯ ಪ್ರಾತ್ಯಕ್ಷಿಕೆಯೂ ನಡೆಯುತ್ತಿತ್ತು. ಪಕ್ಕದಲ್ಲೇ ಕುಂಬಾರಿಕೆ ವೃತ್ತಿ ಗಮನ ಸೆಳೆಯುತ್ತಿದ್ದು, ಹಲವು ರೀತಿಯ ಮಡಿಕೆಗಳು ಕೈಬೀಸಿ ಕರೆಯುತ್ತಿವೆ.

ಸುದ್ದಿ ಉಚಿತ ಮಾಹಿತಿ ಕೇಂದ್ರ:
ಸುದ್ದಿ ಬಿಡುಗಡೆಯ ಮಾಹಿತಿ ಕೇಂದ್ರ ಹಾಗೂ ಸುದ್ದಿ ಕೃಷಿ ಕೇಂದ್ರದ ಸ್ಟಾಲ್ ಕೂಡ ಕಿದುವಿನ ಕಿಸಾನ್ ಮೇಳದಲ್ಲಿ ಹಾಕಲಾಗಿದೆ. ಸಿಪಿಸಿಆರ್‌ಐನ ಹೆಲ್ಪ್ ಡೆಸ್ಕ್ ಪಕ್ಕದಲ್ಲೇ ಈ ಸ್ಟಾಲ್ ಹಾಕಲಾಗಿದ್ದು, ಆಗಮಿಸುವ ಸಾರ್ವಜನಿಕರಿಗೆ ಉಚಿತವಾಗಿ ಮಾಹಿತಿ ನೀಡುವ ಕೆಲಸ ನಿರ್ವಹಿಸಲಿದೆ. ಜೊತೆಗೆ ದೂರದೂರಿನಿಂದ ಆಗಮಿಸುವ ಕೃಷಿಕರಿಗೆ, ಸಾರ್ವಜನಿಕರಿಗೆ ಪುತ್ತೂರು, ಸುಳ್ಯ, ಬೆಳ್ತಂಗಡಿಯ ಅಗತ್ಯ ಮಾಹಿತಿಗಳನ್ನು ನೀಡಿ, ಮಾರ್ಗದರ್ಶನ ಮಾಡುವ ಕೆಲಸವನ್ನು ಇಲ್ಲಿ ಮಾಡಲಾಗುವುದು.

ಕೆವಿಕೆಯ ಸ್ವರ್ಣಧಾರ:
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ನಿರ್ದೇಶಕರಾದಿಯಾಗಿ ವಿಜ್ಞಾನಿಗಳು, ಸಿಬ್ಬಂದಿಗಳು ಸ್ಟಾಲ್‌ನಲ್ಲಿ ಕುಳಿತು, ಕೃಷಿಕರೊಂದಿಗೆ ನೇರವಾಗಿ ಸಂವಾದದಲ್ಲಿ ಭಾಗಿಯಾದರು. ಇಲ್ಲಿ ಮೀನಿನ ಚಟ್ನಿಹುಡಿ, ಮೀನಿನ ಚಕ್ಕುಲಿ-ಶುಂಠಿ, ಮೀನಿನ ಚಕ್ಕುಲಿ, ಮೀನಿನ ಸೂಪ್ ಹುಡಿ, ಸೀಗಡಿ ಚಟ್ನಿ ಹುಡಿ, ಅಜೋಲಾ, ಮೀನಿನ ಆಹಾರಗಳು, ಮೇವಿನ ಅಲಸಂಡೆ, ಮೇವಿನ ಮೆಕ್ಕೆಜೋಳ, ವೈವಿಧ್ಯ ತಳಿಯ ಭತ್ತ, ಹೆಸರು ಹಾಗೂ ಭತ್ತದ ತಳಿಯ ಪ್ರದರ್ಶನ ಮಾಡಲಾಗಿತ್ತು. ಇದರೊಂದಿಗೆ ಬಕೆಟ್‌ನಲ್ಲಿ ಮೀನಿನ ಮರಿಗಳಿದ್ದರೆ, ಪಕ್ಕದ ಟೇಬಲ್‌ನಲ್ಲಿ ಸ್ವರ್ಣಧಾರ ಕೋಳಿ ಗಾಂಭೀರ್ಯದಿಂದ ತಲೆಎತ್ತಿ ನಿಂತಿತ್ತು. ಇದರೊಂದಿಗೆ ಕಾಸರಗೋಡು ಸಿಪಿಸಿಆರ್‌ನ ವೈವಿಧ್ಯ ತೆಂಗು ಹಾಗೂ ತೋಟಗಾರಿಕಾ ಬೆಳೆಗಳು ಗಮನ ಸೆಳೆಯುತ್ತಿತ್ತು. ಐಐಎಚ್‌ಆರ್, ಐಐಎಸ್‌ಆರ್, ಸಿಐಎಆರ್‌ಐ, ಐಐಎಂಆರ್, ಐಐಓಪಿಆರ್, ಪುತ್ತೂರು ಡಿಸಿಆರ್‌ನ ಸ್ಟಾಲ್‌ಗಳು ಸದ್ದಿಲ್ಲದೇ ಕೃಷಿಕರ ಸೇವೆಯಲ್ಲಿ ನಿರತವಾಗಿತ್ತು.

ವ್ಯೂ ಪಾಯಿಂಟ್:
ಕಿದು ಸಿಪಿಸಿಆರ್‌ಐನ ಆವರಣದಲ್ಲಿ ವ್ಯೂ ಪಾಯಿಂಟ್ ಗಮನ ಸೆಳೆಯುತ್ತಿದೆ. ಇದನ್ನೇರಿ ನಿಂತರೆ ಸಿಪಿಸಿಆರ್‌ಐ ಆವರಣ ಮಾತ್ರವಲ್ಲ ಸುತ್ತಲಿನ ಹತ್ತೂರು ಕಣ್ಣಿಗೆ ರಸದೌತಣ. ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಹಿಂಬದಿಯಲ್ಲಿರುವ ಕುಮಾರ ಪರ್ವತ ಶೋಭಾಯಾಮಾನವಾಗಿ ವಿಜೃಂಭಿಸುತ್ತಿದೆ. ಇದಕ್ಕೆ ಪೋಣಿಸಿಟ್ಟಂತೆ ಸುತ್ತ ಚಾಚಿರುವ ಬೆಟ್ಟಗುಡ್ಡಗಳು ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಪುಟ್ಟ ಗಾರ್ಡನ್‌ನ ನಡುವೆ ತಲೆಎತ್ತಿರುವ ವ್ಯೂ ಪಾಯಿಂಟ್‌ಗೆ ರೂಪು ನೀಡಿರುವ ಸಿಪಿಸಿಆರ್‌ಐನ ವಿಜ್ಞಾನಿ, ಅಧಿಕಾರಿಗಳು, ನೆರಳಿಗಾಗಿ ಪುಟ್ಟ ಹೆಂಚಿನ ಗುಡಿಸಲನ್ನು ನಿರ್ಮಿಸಿದ್ದಾರೆ.

LEAVE A REPLY

Please enter your comment!
Please enter your name here