ಪುತ್ತೂರು: ಇತಿಹಾಸ ಪ್ರಸಿದ್ದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿ ನೇಮೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಅಧ್ಯಕ್ಷತೆಯಲ್ಲಿ ನ.20 ರಂದು ರಾಮಜಾಲು ಗರಡಿ ವಠಾರದಲ್ಲಿ ನಡೆಯಿತು.
2023 ಜನವರಿ 7 ರಂದು ನಡೆಯುವ ಅದ್ದೂರಿ ನೇಮೋತ್ಸವದ ಬಗ್ಗೆ ಸಭೆಯಲ್ಲಿ ಭಕ್ತಾಧಿಗಳೊಂದಿಗೆ ಚರ್ಚಿಸಿ ವಿವಿಧ ಸಲಹೆಗಳನ್ನು ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಸಂಜೀವ ಪೂಜಾರಿ ಕೂರೇಲುರವರು, ರಾಮಜಾಲು ಗರಡಿಯ ನೇಮೋತ್ಸವಕ್ಕೆ ಜಿಲ್ಲೆಯಲ್ಲೇ ಒಂದು ವಿಶೇಷತೆ ಇದ್ದು ಸಾವಿರಾರು ಮಂದಿ ನೇಮೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವರ್ಷ 15 ನೇ ವರ್ಷದ ನೇಮೋತ್ಸವ ನಡೆಯಲಿದ್ದು ಪ್ರತಿವರ್ಷದಂತೆ ಈ ವರ್ಷವೂ ನೇಮೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸರ್ವರ ಸಹಕಾರ ಅಗತ್ಯ ಎಂದರು.
ನೇಮೋತ್ಸವದಲ್ಲಿ ಸಾಂಸ್ಕೃತಿಕ/ಸಭಾ ಕಾರ್ಯಕ್ರಮಗಳು
15 ನೇ ವರ್ಷದ ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಸಭಾ ಕಾರ್ಯಕ್ರಮ ನಡೆಸುವುದು ಸಭಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿ-2023 ಅನ್ನು ಸಾಧಕರಾದ ರವಿ ಕಕ್ಕೆಪದವುರವರಿಗೆ ಪ್ರದಾನ ಮಾಡುವ ಕಾರ್ಯಕ್ರಮ ನಡೆಯಲಿದೆ.
ಇದಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ 2021 ನೇ ಸಾಲಿನಲ್ಲಿ ನಡೆದ ಎಂ.ಎಸ್ಸಿ (ಪ್ರಾಣಿಶಾಸ್ತ್ರ) ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್‍ಯಾಂಕ್‌ನೊಂದಿಗೆ 2 ಚಿನ್ನದ ಪದಕ ಹಾಗೂ 2 ನಗದು ಪ್ರಶಸ್ತಿಗಳನ್ನು ಪಡೆದುಕೊಂಡ ಹರ್ಷಿತ್ ಕುಮಾರ್ ಕೂರೇಲುರವರಿಗೆ ರಾಮಜಾಲು ಭಕ್ತವೃಂದದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಸುವುದು ಎಂದು ನಿರ್ಣಯಿಸಲಾಯಿತು.
ಭಕ್ತಾಧಿಗಳಿಗೆ ಭಕ್ತಿಯೊಂದಿಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ತುಳು ನಾಟಕ ನಡೆಸುವುದು ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ `ಶಿವಧೂತ ಗುಳಿಗೆ’ ಎಂಬ ತುಳು ನಾಟಕವನ್ನು ಪ್ರದರ್ಶನ ಮಾಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ರಾಮಜಾಲು ಗರಡಿ ನೇಮೋತ್ಸವವಕ್ಕೆ ಪ್ರತಿವರ್ಷವೂ ಊರಪರವೂರಿನ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುತ್ತಿದ್ದು 8 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯುತ್ತಿದೆ. ಈ ವರ್ಷದ ನೇಮೋತ್ಸವದಲ್ಲೂ ಅನ್ನದಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದು ವಿಶೇಷ ಸಿಹಿ ಖಾದ್ಯಗಳೊಂದಿಗೆ ಭಕ್ತಾಧಿಗಳಿಗೆ ಅನ್ನದಾನ ಮಾಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಶಿಬರಗುರಿ ವಿಠಲ ಗೌಡ, ರಾಜೇಶ್ ರೈ ಪರ್ಪುಂಜ, ಕಿರಣ್‌ರಾಜ್ ಮಾಸ್ಟರ್, ನೇಮಾಕ್ಷ ಸುವರ್ಣ, ನವೀನ್ ಮರಿಕೆ, ಕೂರೇಲು ವಿಶ್ವನಾಥ ಪೂಜಾರಿ, ಕೂರೇಲು ಗೋವಿಂದ ಪೂಜಾರಿ, ಕೂರೇಲು ಕುಟುಂಬದ ಕಣಿಯಾರು ಶಾಖೆಯ ಸಹೋದರರು, ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಮಲರಾಯ ಸ್ವಯಂ ಸೇವಕ ವೃಂದ ಕೂರೇಲು ಇದರ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಭಕ್ತಾಧಿಗಳು ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಸ್ವಾಗತಿಸಿ, ಭಕ್ತಾಧಿಗಳಿಂದ ಸಲಹೆಗಳನ್ನು ಪಡೆದುಕೊಂಡು ನೇಮೋತ್ಸವದ ವಿವರಗಳನ್ನು ಸಭೆಯ ಮುಂದಿಟ್ಟರು. ಅರ್ಚಕ ಹರೀಶ್ ಶಾಂತಿ ವಂದಿಸಿದರು.
“ ಇತಿಹಾಸ ಪ್ರಸಿದ್ಧ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ 15 ನೇ ವರ್ಷದ ನೇಮೋತ್ಸವವು 2023 ಜ.07 ರಂದು ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನೇಮೋತ್ಸವ ನಡೆಯಲಿದ್ದು ಭಕ್ತಾಧಿಗಳ ಸಹಕಾರ ಅಗತ್ಯ. ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳು, ಸಂಜೆ ಸಭೆ,ಸನ್ಮಾನ, ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ ಹಾಗೂ ಕಾರಣಿಕ ಪುರುಷರಾದ ಶ್ರೀ ಕೋಟಿ ಚೆನ್ನಯರ ವೈಭವದ ನೇಮೋತ್ಸವ ನಡೆಯಲಿದೆ. ಭಕ್ತಾಧಿಗಳು ಕಾರ್ಯಕ್ರಮವನ್ನು ಯಶಸ್ವಿ ಮಾಡುವುದರ ಜೊತೆಯಲ್ಲಿ ಕಾರಣಿಕ ಪುರುಷರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿ.”
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು ರಾಮಜಾಲು ಗರಡಿ
2023 -ಜ.7 ನೇಮೋತ್ಸವ
ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ 15 ನೇ ವರ್ಷದ ನೇಮೋತ್ಸವವು 2023 ಜ.7ರಂದು ನಡೆಯಲಿದೆ.