





ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 2022-23ನೇ ಸಾಲಿನಲ್ಲಿ ನಡೆಸಿದ ಕರ್ನಾಟಕ ವಿಭಾಗ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯ ಜಾವೆಲಿನ್ ತ್ರೋ ವಿಭಾಗದಲ್ಲಿ ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಒಂಭತ್ತನೇ ತರಗತಿ ವಿದ್ಯಾರ್ಥಿನಿ ರಿಯಾ ಜೆ ರೈಯವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಜಯಪ್ರಸಾದ್ ರೈ ಹಾಗೂ ಹರಿಣಾಕ್ಷಿ ಜೆ ರೈ ರವರ ಪುತ್ರಿ.
















