ಅಂತಿಮ ಪಟ್ಟಿ ಪ್ರಕಟ ; 23 ಮಂದಿ ಮತದಾರರಿಗೆ ಮತದಾನದ ಹಕ್ಕು
ಪುತ್ತೂರು:ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ 2022-25ನೇ ಸಾಲಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ದ.5ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಮತದಾರರ ಅಂತಿಮ ಪಟ್ಟಿ ನ.25ರಂದು ಪ್ರಕಟವಾಗಿದೆ.
ಚುನಾವಣಾಧಿಕಾರಿಯಾಗಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಅವರು ಪುತ್ತೂರು ಪತ್ರಿಕಾ ಭವನಕ್ಕೆ ಆಗಮಿಸಿ ಮತದಾರರ ಅಂತಿಮ ಪಟ್ಟಿಯನ್ನು ಪತ್ರಿಕಾ ಭವನದ ನೊಟೀಸ್ ಬೋರ್ಡ್‌ನಲ್ಲಿ ಅಳವಡಿಸಿದ್ದಾರೆ.
23 ಮತದಾರರು: ಒಟ್ಟು 25 ಮತದಾರರಿದ್ದ ಕರಡು ಪಟ್ಟಿಯನ್ನು ನ.24ರಂದು ಪ್ರಕಟಿಸಲಾಗಿತ್ತು.ಈ ಪೈಕಿ ಹರೀಶ್ ಬಿ.(ಸುದ್ದಿ ಬಿಡುಗಡೆ)ಮತ್ತು ಸುಧಾಕರ ಆಚಾರ್ಯ(ಸುದ್ದಿ ಬಿಡುಗಡೆ)ರವರು ಕಡಬ ತಾಲೂಕು ಸಂಘದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರು ತಾಲೂಕು ಸಂಘದ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಒಟ್ಟು 23 ಮಂದಿ ಮತದಾರರಿರುವ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಶ್ರವಣ್ ಕುಮಾರ್(ವಿಜಯ ವಾಣಿ), ಐ.ಬಿ.ಸಂದೀಪ್ ಕುಮಾರ್(ಹೊಸ ದಿಗಂತ), ಎ.ಸಿದ್ದೀಕ್ ನೀರಾಜೆ(ಪ್ರಜಾವಾಣಿ), ಶಶಿಧರ ರೈ(ವಿಜಯವಾಣಿ), ಯ.ಎಲ್.ಉದಯ ಕುಮಾರ್ (ಹೊಸ ದಿಗಂತ), ದೀಪಕ್ ಬಿ.(ವಿಜಯ ಕರ್ನಾಟಕ), ಎಂ.ಎಸ್.ಭಟ್(ಉದಯವಾಣಿ), ಮಹಮ್ಮದ್ ನಝೀರ್ (ಜಯಕಿರಣ), ಸಂಶುದ್ದೀನ್ ಸಂಪ್ಯ(ವಾರ್ತಾಭಾರತಿ), ಉಮಾಶಂಕರ್(ಸ್ಪಂದನ), ಮೇಘ ಪಾಲೆತ್ತಡಿ(ಸಂಯುಕ್ತ ಕರ್ನಾಟಕ), ಕಿರಣ್ ಪ್ರಸಾದ್ ಕೆ.(ಉದಯವಾಣಿ), ಉಮಾಪ್ರಸಾದ್ ರೈ(ಸುದ್ದಿ ಬಿಡುಗಡೆ), ಸುಧಾಕರ ಕೆ.(ವಿಜಯ ಕರ್ನಾಟಕ), ಅಜಿತ್ ಕುಮಾರ್(ನ್ಯೂಸ್ ೧೮), ಕುಮಾರ್ ಕಲ್ಲಾರೆ(ವಿಜಯ ಕರ್ನಾಟಕ), ಪ್ರವೀಣ್ ಕುಮಾರ್(ವಿಶ್ವವಾಣಿ), ಕೃಷ್ಣಪ್ರಸಾದ್(ವಿಶ್ವವಾಣಿ), ಲೋಕೇಶ್ ಬನ್ನೂರು(ಸುದ್ದಿ ಬಿಡುಗಡೆ), ಶೇಖ್ ಜೈನುದ್ದೀನ್(ಸುದ್ದಿ ಬಿಡುಗಡೆ), ಕರುಣಾಕರ ರೈ ಸಿ.ಎಚ್.(ಸುದ್ದಿ ಬಿಡುಗಡೆ), ಯತೀಶ್ ಉಪ್ಪಳಿಗೆ(ಸುದ್ದಿ ಬಿಡುಗಡೆ) ಮತ್ತು ಶೇಷಪ್ಪ ಕಜೆಮಾರ್(ಸುದ್ದಿ ಬಿಡುಗಡೆ) ಮತಚಲಾಯಿಸುವ ಹಕ್ಕು ಪಡೆದಿರುವ ಮತದಾರರು.
ಪುತ್ತೂರು ತಾ|ಪತ್ರಕರ್ತರ ಸಂಘದ ಪದಾಧಿಕಾರಿಗಳೆಂದು ಘೋಷಿಸಿಕೊಂಡವರ ನಿಲುವು ನಿಗೂಢ !
ತಮ್ಮ ಆಯ್ಕೆಗೆ, ಸಂಘಕ್ಕೆ ತಾವೇ ರಾಜೀನಾಮೆ ಕೊಟ್ಟು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸೇರ್ಪಡೆ ಉಳಿಸಿಕೊಳ್ಳುತ್ತಾರೆಯೇ? ಅಥವಾ ತಮ್ಮ ಸಂಘವನ್ನು, ಪತ್ರಿಕಾ ಭವನವನ್ನು ತಮ್ಮ ಅಧೀನದಲ್ಲಿ ಉಳಿಸಿಕೊಂಡು ರಾಜ್ಯ ಕಾರ್ಯನಿರತ ಸಂಘದವರಿಗೆ ಪ್ರವೇಶವಿಲ್ಲದಂತೆ ಮಾಡುತ್ತಾರೆಯೇ?
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದಲ್ಲಿ ಮತದಾರ ಸದಸ್ಯರಾಗಿರುವವರ ಪೈಕಿ ಐದು ಮಂದಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳೆಂದು ಘೋಷಿಸಿಕೊಂಡಿದ್ದಾರೆ. ನ.19ರಂದು ಐ.ಬಿ.ಸಂದೀಪ್ ಕುಮಾರ್ ಅವರ ನೇತೃತ್ವದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಕೆಲವರು ಸಭೆ ನಡೆಸಿ ಈ ಪೈಕಿ 6 ಮಂದಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳೆಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಐ.ಬಿ.ಸಂದೀಪ್ ಕುಮಾರ್ ಅಧ್ಯಕ್ಷರಾಗಿ, ಕುಮಾರ್ ಕಲ್ಲಾರೆ ಉಪಾಧ್ಯಕ್ಷರಾಗಿ, ಅಜಿತ್ ಕುಮಾರ್ ಕಾರ್ಯದರ್ಶಿಯಾಗಿ, ರಾಜೇಶ್ ಪಟ್ಟೆ ಜತೆ ಕಾರ್ಯದರ್ಶಿಯಾಗಿ, ಕೃಷ್ಣಪ್ರಸಾದ್ ಬಲ್ನಾಡು ಖಜಾಂಜಿಯಾಗಿ ಮತ್ತು ಪತ್ರಿಕಾ ಕಚೇರಿಯ ಮ್ಯಾನೇಜರ್ ಆಗಿ ಪ್ರವೀಣ್ ಕುಮಾರ್ ಅವರು ಆಯ್ಕೆಯಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ನಮ್ಮದು ಸ್ವತಂತ್ರ ಸಂಸ್ಥೆಯಾಗಿದ್ದು ಯಾವುದೇ ಸಂಘಗಳೊಂದಿಗೆ ಮರ್ಜ್ ಆಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಪತ್ರವನ್ನೂ ಬರೆದಿದ್ದಾರೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳೆಂದು ಘೋಷಿಸಿಕೊಂಡಿರುವ ಈ ಆರು ಮಂದಿಯಲ್ಲಿ ರಾಜೇಶ್ ಪಟ್ಟೆ ಹೊರತುಪಡಿಸಿ ಇತರ ಐವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದು ದ.5ರಂದು ನಡೆಯಲಿರುವ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.ಚುನಾವಣೆಯಲ್ಲಿ ಈ ಐದು ಮಂದಿಯ ನಡೆ ಏನೆಂಬುದು ನಿಗೂಢವಾಗಿದೆ. ಚುನಾವಣೆಯಲ್ಲಿ ಇವರು ಭಾಗವಹಿಸುತ್ತಾರೆಯೇ ಅಥವಾ ದೂರ ಉಳಿಯುತ್ತಾರೆಯೇ?. ಒಂದು ವೇಳೆ ಚುನಾವಣೆಯಲ್ಲಿ ಇವರು ಭಾಗವಹಿಸುವುದಾದರೆ, ತಮ್ಮದು ಸ್ವತಂತ್ರ ಸಂಸ್ಥೆ ಎಂದು ಅವರೇ ಹೇಳಿಕೊಂಡಿರುವುದರಿಂದ ಎರಡೆರಡು ಸಂಘಗಳಲ್ಲಿ ಸದಸ್ಯರಾಗಿರಲು ನಿಯಮ ಪ್ರಕಾರ ಅವಕಾಶವಿಲ್ಲ. ಆದ್ದರಿಂದ ಅವರು ‘ಪುತ್ತೂರು ತಾಲೂಕು ಪತ್ರಕರ್ತರ ಸಂಘ’ದ ಪಧಾದಿಕಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮುಂದುವರಿಯಬೇಕು. ಅದರಲ್ಲಿ ಪದಾಧಿಕಾರಿಯಾಗಿ ಆಯ್ಕೆಯಾಗುವ ಅವಕಾಶ ಬಳಸಿಕೊಳ್ಳಬಹುದು. ಹಾಗೆ ಮಾಡಿದರೆ ನಗೆ ಪಾಟಲಿಗೀಡಾಗುವುದು ಖಂಡಿತ ಎಂದು ಭಾವಿಸಿ ಅದನ್ನು ಮಾಡಲು ಮನಸ್ಸು ಒಪ್ಪದಿದ್ದರೆ ತಾವು ಪದಾಧಿಕಾರಿಗಳೆಂದು ಘೋಷಿಸಿಕೊಂಡಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘವೇ ಅಧಿಕೃತ ಸಂಘವೆಂದು ಹೇಳಿಕೊಂಡು ಹೋರಾಟ ನಡೆಸಬೇಕಾದೀತು. ಪತ್ರಿಕಾ ಭವನವನ್ನು ತಮ್ಮ ವಶದಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದೊಂದಿಗೆ, ದ.5ರಂದು ನಡೆಯಲಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಚುನಾವಣೆಗೆ ತಡೆಯಾe ತರಲು ಪ್ರಯತ್ನಿಸಬೇಕಾದೀತು. ಅದರೊಂದಿಗೆ ಈಗ ತಮ್ಮ ಅಧೀನದಲ್ಲಿರುವ ಪತ್ರಿಕಾ ಭವನಕ್ಕೆ ಅವರಿಗೆ ಪ್ರವೇಶವಿಲ್ಲ ತಮ್ಮ ಅಧೀನದಲ್ಲಿದೆ ಎಂಬುದಕ್ಕೆ ಬೇಕಾದ ಕಸರತ್ತು ಮಾಡಬೇಕು. ಇವರ ಬೆಂಬಲಕ್ಕೆ ನಿಂತ ಕೆಲವರೂ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವುದರಿಂದ ಈ ಚುನಾವಣೆಯಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವುದೂ ಕುತೂಹಲ ಮೂಡಿಸಿದೆ. ಈ ಸಂಘದ ಸದಸ್ಯರ ಆಯ್ಕೆ, ಹೋರಾಟಗಳ ಹಿಂದೆ ಖ್ಯಾತ ವಕೀಲ ಬಿ.ನರಸಿಂಹ ಪ್ರಸಾದ್ ಅವರ ಸಲಹೆ ಇರುವುದರಿಂದ ಏನು ಬೇಕಾದರೂ ಆಗಬಹುದು ಎಂಬ ವಿಶ್ವಾಸದಿಂದ ಅದರ ಫಲಿತಾಂಶದ ಬಗ್ಗೆ ಜನರಿಗಿರುವ ಕುತೂಹಲ ಇಮ್ಮಡಿಯಾಗಿದೆ.