ಶ್ರೀ ರಾಮ ಕ್ಷೇತ್ರ ಹರಿದ್ವಾರ ಸಾಧನಾ ಕುಠಿರದಲ್ಲಿ 6 ನೇ ವಾರ್ಷಿಕೋತ್ಸವ

0

ಧರ್ಮಸ್ಥಳ : ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ  ನಗರದ ಶಾಖಾ ಮಠ ಹರಿದ್ವಾರದ ಸಾಧನಾ ಕುಟೀರದ ಆರನೇ ವರ್ಷದ ವಾರ್ಷಿಕೋತ್ಸವ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಖಾಡ ಅಧ್ಯಕ್ಷ ರವೀಂದ್ರ ಪಂಡಿತ್, ಕಾರ್ಯದರ್ಶಿ ನಿರಂಜನಿ, ಪ್ರೇಮಗಿರಿ ಜಿ. ಮಹಾರಾಜ್, ಅಂತರಾಷ್ಟ್ರೀಯ ಅಧ್ಯಕ್ಷ ಪಂಚದಸ್ನಂ ಜುನ ಅಖಾಡ, ಮಹಾಂತ್ ವಿದ್ಯಾನಂದ ಸರಸ್ವತಿ ಜಿ. ಮಹಾರಾಜ್, ಅಂತರಾಷ್ಟ್ರೀಯ ಉಪಾಧ್ಯಕ್ಷ ಪಂಚದಸ್ನಂ ಜುನ ಅಖಾಡ, ಮಹಾಮಂಡಲೇಶ್ವರ 1008 ಸ್ವಾಮಿ ವಿಜ್ಞಾನಾನಂದ ಸರಸ್ವತೀ ಜೀ,  ವಿಜ್ಞಾನಾನಂದ ಸರಸ್ವತಿ ಜಿ ಮಹಾರಾಜ, ಮಹಾರಾಜ್ ಮಹಾಮಂಡಲೇಶ್ವರ, ಲಲಿತಾನಂದ ಗಿರಿ ಜಿ ಮಹಾರಾಜ್ ಜೈರಾಮ್, ಆಶ್ರಮಗಳ ಸರ್ವೋಚ್ಚ ಅಧ್ಯಕ್ಷ ಬ್ರಹ್ಮಸ್ವರೂಪ ಬ್ರಹ್ಮಚಾರಿ ಜಿ, ಮಹಾರಾಜ್ ಶ್ರೀಮಹಾಂತ್ ದೇವಾನಂದ ಸರಸ್ವತಿ ಜಿ. ಮಹಾರಾಜ್,  ಶ್ರೀಮಹಾಂತ್ ಮಹೇಶ್ ಪುರಿ ಜಿ ಮಹಾರಾಜ್ , ಶ್ರೀಮಹಾಂತ್ ಇಂದ್ರಾನಂದ್ ಸರಸ್ವತಿ ಮಹಾರಾಜ್ ಮೊದಲಾದ ಸಂತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂತರುಗಳು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಗೌರವಿಸಿದರು. ರಾಜಸ್ಥಾನದ ಉದ್ಯಮಿ ಭಗವತಿ ಪ್ರಸಾದ್ ದಂಪತಿ ಪಾದುಕ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಠದ ಟ್ರಷ್ಟಿಗಳಾದ ತುಕಾರಾಮ ಸಾಲಿಯಾನ್,ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಅರ್ಲ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ದ. ಕ. ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್, ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಗೌಡ ಅಶೋಕ್ ಕುಮಾರ್ ಕಡಿರುದ್ಯಾವರ, ವಿನಯ ಕುಮಾರ್ ಮಿತ್ತಬಾಗಿಲು, ಗೋವಿಂದ ನಾಯ್ಕ ಭಟ್ಕಳ, ಸೀತಾರಾಮ ಬಿ. ಎಸ್. ಬೆಳಾಲು, ಪುರುಷೋತ್ತಮ ಸಾಲಿಯಾನ್, ಇನ್ನಿತರ ಭಕ್ತ ರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here