ಪ್ರಾಮಾಣಿಕತೆ ಹಾಗೂ ಪಾರದರ್ಶಕ ವ್ಯವಹಾರದಿಂದ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆ ಜಯಾಂಬಿಕ ಸಂಸ್ಥೆಗೆ ಯಾವತ್ತೂ ಜಯ ಇರಲಿ – ಚಿದಾನಂದ ಬೈಲಾಡಿ
ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸಂಸ್ಥೆಯು ಮುಂದೆ ಶತಮಾನೋತ್ಸವವನ್ನು ಆಚರಿಸುವಂತಾಗಲಿ-ಮುರಳೀಕೃಷ್ಣ ಹಸಂತಡ್ಕ
ಪುತ್ತೂರು: ಮಕ್ಕಳ ಎಜುಕೇಶನ್. ಮದುವೆ, ವ್ಯಾಪಾರ-ವ್ಯವಹಾರಕ್ಕೆ ಇನ್ವೆಸ್ಟ್ಮೆಂಟ್ ಹೀಗೆ ಮಧ್ಯಮವರ್ಗದವರ ದೊಡ್ಡ ದೊಡ್ಡ ಕನಸುಗಳಿಗೆ ಸಣ್ಣಹೂಡಿಕೆಯ ರೂಪದಲ್ಲಿ ವರದಾನವಾಗಿರುವುದು ಚಿಟ್ ಫಂಡ್ಗಳು. ತಿಂಗಳ ಸಣ್ಣ ಹೂಡಿಕೆ ಕೆಲವೇ ವರ್ಷಗಳಲ್ಲಿ ಲಾರ್ಜ್ ಸ್ಕೇಲ್ ಇನ್ವೆಸ್ಟ್ಮೆಂಟ್ ಆಗಿ ಪರಿವರ್ತನೆಗೊಳ್ಳುವುದು ಈ ಹೂಡಿಕೆಯ ವಿಶೇಷ. ಈ ವ್ಯವಹಾರದಲ್ಲಿ ನಂಬಿಕೆ ಮತ್ತು ಗ್ರಾಹಕರ ಸಂತೃಪ್ತಿಯೇ ಮುಖ್ಯವಾಗಿರುತ್ತದೆ. ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮತ್ತು ಪುತ್ತೂರು ಹಾಗೂ ಮೂಡುಬಿದಿರೆಯಲ್ಲಿ ಶಾಖೆಗಳನ್ನು ಹೊಂದಿರುವ ‘ಜಯಾಂಬಿಕಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಈ ಭಾಗದ ಗ್ರಾಹಕರ ವಿಶ್ವಾಸಾರ್ಹತೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಪುತ್ತೂರಿನ ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್ನಲ್ಲಿ ಕಚೇರಿಯನ್ನು ಹೊಂದಿರುವ ಜಯಾಂಬಿಕಾ ಚಿಟ್ಸ್ ‘ರಜತ ಮಹೋತ್ಸವ’ ಸಂಭ್ರಮದಲ್ಲಿದೆ. ಈ ಭಾಗದ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿರೂಪವಾಗಿ ಜಯಾಂಬಿಕಾ ಚಿಟ್ಸ್ ‘ವಿಜಯದ ರಜತ ಸಂಭ್ರಮ’ವನ್ನಾಚರಿಸುತ್ತಿದೆ.
ಜಯಾಂಬಿಕ ಚಿಟ್ಸ್ನ ಪುತ್ತೂರು ಶಾಖೆಯ ರಜತ ಸಂಭ್ರಮ ಆಚರಣೆ ಕಾರ್ಯಕ್ರಮ ನ.24ರಂದು ನಡೆಯಿತು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಎ. ಚಂದ್ರಹಾಸ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾರಂಭದಲ್ಲಿ ಹಾಜರಿದ್ದ ಗಣ್ಯರನ್ನು ಸ್ವಾಗತಿಸಿದರು.
ನ್ಯಾಯವಾದಿ ಮತ್ತು ನೋಟರಿ ಚಿದಾನಂದ ಬೈಲಾಡಿ ಮಾತನಾಡಿ, 10 ವರ್ಷಗಳಿಂದ ನಾನು ಈ ಸಂಸ್ಥೆಯ ಗ್ರಾಹಕನಾಗಿದ್ದು, ಈ ಸಂಸ್ಥೆಯನ್ನು ಈ ಕಾಲ ಘಟ್ಟದಲ್ಲಿ ಉದ್ಘಾಟನೆಯನ್ನು ಮಾಡುವಲ್ಲಿ ನಾನು ಒಬ್ಬ ಪಾಲುದಾರನಾಗಿದ್ದೇನೆ ಎನ್ನಲು ಸಂತೋಷವಾಗುತ್ತಿದೆ. ಹೆಸರೇ ಸೂಚಿಸುವಂತೆ ಜಯಾಂಬಿಕ ಸಂಸ್ಥೆಯಲ್ಲಿ ಜಯ ಮತ್ತು ಅಂಬಿಕ ಎರಡೂ ಹೆಸರಿದೆ ಹಾಗಾಗಿ ಈ ಸಂಸ್ಥೆಗೆ ಯಾವತ್ತೂ ಜಯ ಇರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಪ್ರಾಮಾಣಿಕತೆಯಿಂದ ಯಾರು ಕೆಲಸ ನಿರ್ವಹಿಸುತ್ತಾರೋ ಅವರನ್ನು ಇಲ್ಲಿನ ಜನರು ಯಾವತ್ತೂ ಕೈಬಿಟ್ಟಿಲ್ಲ ಹಾಗೆಯೇ ಜಯಾಂಬಿಕ ಸಂಸ್ಥೆಯ ಯಶಸ್ಸಿಗೆ ಪುತ್ತೂರಿನ ಜನತೆಯ ಪರವಾಗಿ ಜಯಾಂಬಿಕ ಚಿಟ್ಸ್ನ ವ್ಯವಸ್ಥಾಪಕರಿಗೆ ಮತ್ತು ಉದ್ಯೋಗಿ ಬಂಧುಗಳಿಗೆ ಹಾರ್ಧಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಇಂದು ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಈ ಸಂಸ್ಥೆಯು ಮುಂದೆ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಅವರು ಶುಭಹಾರೈಸಿದರು.
ವಿನಾಯಕ ಟ್ರೇಡರ್ಸ್ನ ಮಾಲಕ ನವೀನ್ ಕುಮಾರ್ ಶೆಟ್ಟಿ ಮಾತನಾಡಿ, ಇದೇ ಸಂಸ್ಥೆಯಲ್ಲಿ ೧೨ ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದೆನೆ, ಈ ಸಂಸ್ಥೆ ಇನ್ನೂ ಅಭಿವೃದ್ಧಿಯತ್ತ ಸಾಗಲಿ ಎಂದು ಶುಭಹಾರೈಸಿದರು. ಉದ್ಯಮಿ ಉದಯಕುಮಾರ್ ಪೈ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮಕ್ಕೆ ಅಭಿನಂದನೆ ಸಲ್ಲಿಸಿ ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.
ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಎ. ಸುರೇಶ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಡೈರೆಕ್ಟರ್ ಆಫ್ ಅಪರೇಶನ್ ಆಗಿರುವ ವಸಂತ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು. ಪುತ್ತೂರು ಶಾಖಾ ಸಿಬ್ಬಂದಿಗಳಾದ ಕು. ಶಮಿತಾ, ಪ್ರಶಾಂತ್ ಕುಮಾರ್, ಜಗದೀಶ್ ಪಿ.ಕೆ., ಹಾಗೂ ತಿಲಕ್ ರಾಜ್ ಶೆಟ್ಟಿ ಕಾರ್ಯಕ್ರಮದ ಯಶಸ್ಸಿನಲ್ಲಿ ಸಹಭಾಗಿಗಳಾಗಿದ್ದರು.
ಕಳೆದ 25ವರ್ಷಗಳಿಂದ ಪುತ್ತೂರು ಭಾಗದ ಜನತೆಯ ವಿಶ್ವಾಸವನ್ನು ‘ರಜತ’ ಸಾಧನೆಯ ನಗುವನ್ನು ಬೀರಿರುವ ಜಯಾಂಬಿಕಾ ಚಿಟ್ಸ್ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಗ್ರಾಹಕ ಸಂತೃಪ್ತಿ ಸೇವೆ ಸುವರ್ಣ ಸಾಧನೆಯನ್ನು ದಾಖಲಿಸಿ ಅಜೇಯವಾಗಿ ಮುಂದುವರಿಯಲಿ ಎಂದು ಈ ಶುಭ ಸಂದರ್ಭದಲ್ಲಿ ಭಾಗಿಯಾಗಿದ್ದವರೆಲ್ಲರೂ ಸಂಸ್ಥೆಯ ಪ್ರಗತಿಗೆ ಅಭಿನಂದನೆಗಳನ್ನು ಸಲ್ಲಿಸಿದರು.