




ಪುತ್ತೂರು: ಆಮ್ ಆದ್ಮಿ ಪಕ್ಷದ ವತಿಯಿಂದ ಸೊರಕೆ ಅಂಗನವಾಡಿ ಪರಿಸರ ಹಾಗೂ ಸೊರಕೆ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಸುತ್ತಮುತ್ತ ಹಾಗೂ ರಸ್ತೆಯ ಇಕ್ಕೆಲೆಗಳಲ್ಲಿ ಬೆಳೆದಿದ್ದ ಹುಲ್ಲು ಗಿಡಗಮಟಿ ಪೊದರುಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಮಾಡಲಾಯಿತು.








ಆಮ್ ಆದ್ಮಿ ಪಕ್ಷದ ಮುಖಂಡ, ಮುಂಡೂರು ಗ್ರಾ.ಪಂ ಸದಸ್ಯರೂ ಆಗಿರುವ ಮಹಮ್ಮದ್ ಆಲಿ ನೇರೋಳ್ತಡ್ಕ, ಮಂಜುನಾಥ ಪ್ರಸಾದ್ ಕಟ್ಟತ್ತಡ್ಕ, ಹಮೀದ್ ನೇರೊಳ್ತಡ್ಕ, ಯೂಸುಫ್ ಸೊರಕೆ, ಪದ್ಮನಾಭ ನಾಯ್ಕ ಸೊರಕೆ ಮೊದಲಾದವರು ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದ್ದರು. ಆಮ್ ಆದ್ಮಿ ಪಕ್ಷದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









