ರಾಮಕೃಷ್ಣ ಪ್ರೌಢ ಶಾಲೆ, ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್‌ನಿಂದ ಸಂವಿಧಾನ ದಿನಾಚರಣೆ

0

ಪುತ್ತೂರು: ರಾಮಕೃಷ್ಣ ಪ್ರೌಢ ಶಾಲೆ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯು ನ.26 ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಭಾರತ ಸಂವಿಧಾನ ಬಹಳಷ್ಟ ಶ್ರೇಷ್ಠವಾದುದು. ಪಡೆದುಕೊಂಡ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ದೇಶವನ್ನು ಮುನ್ನಡೆಸಲು ಸಂವಿಧಾನ ಆವಶ್ಯಕ. ಸಂವಿಧಾನವಿಲ್ಲದಿದ್ದರೆ ನಾವು ಪ್ರಾಣಿ ಪಕ್ಷಿಗಳಿಗಿಂತ ಕಡೆ. ಸಂವಿಧಾನ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ. ಇಂತಹ ಶ್ರೇಷ್ಠ ಸಂವಿಧಾನವು ಸರಿಯಿಲ್ಲ. ಬದಲಾಯಿಸುತ್ತೇವೆ ಎನ್ನುವ ಮೂಲಕ ಅಧಿಕಾರ, ಅವಕಾಶಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ದೇಶ ಎತ್ತ ಕಡೆ ಹೋಗುತ್ತಿದೆ ಎಂದು ಹೇಳಿದ ಅವರು ಎಲ್ಲಾ ಕಾನೂನುಗಳು ಸಂವಿಧಾನದಲ್ಲಿ ಅಡಕವಾಗಿದ್ದು ಸಂವಿಧಾನದ ಆಶಯಗಳನ್ನು ಅನುಸರಿಸಿಕೊಂಡು ಹೋದಾಗ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಬಿ.ಎಂ ಭಟ್ ಮಾತನಾಡಿ, ನಮ್ಮ ಜೀವನದಲ್ಲಿ ಒಂದು ರೀತಿ, ನಿಯಮಗಳನ್ನು ಅಳವಡಿಸಿಕೊಂಡಂತೆ ದೇಶವನ್ನು ಮುನ್ನಡೆಸಲು ಸಂವಿಧಾನದಲ್ಲಿ ಎಲ್ಲಾ ನೀತಿ, ನಿಯಮಗಳನ್ನು ಒಳಗೊಂಡಿದೆ. ಭಾರತದ ಸಂವಿಧಾನ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿದೆ. ಜೀವನದ ಪ್ರತಿ ಹಂತದಲ್ಲಿಯೂ ಸಂವಿಧಾನದ ನಿಯಮಗಳು ಅನ್ವಯವಾಗುತ್ತಿದೆ. ಇವುಗಳನ್ನು ಅರ್ಥಮಾಡಿಕೊಂಡಾಗ ಅದರ ಮಹತ್ವ ಅರಿವಾಗುವುದು. ನಮ್ಮ ನೆಮ್ಮದಿಯ ಜೀವನಕ್ಕೆ ಸಂವಿಧಾನ ಮುಖ್ಯ. ನಮಗೆ ಸುಂದರ ಬದುಕು ಕೊಡುವ ಸಂವಿಧಾನ ಟೀಕೆ ಮಾಡುವಾಗ ರೋಷ ಬರಬೇಕು. ಇದನ್ನು ರಕ್ಷಣೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು

ಬಂಟವರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ದುರ್ಗಾ ಪ್ರಸಾದ ರೈ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲಾ ಜಾತಿ, ಧರ್ಮ, ಪಂಥದವರನ್ನು ಒಟ್ಟು ಸೇರಿಸುವ ಕಾರ್ಯ ಸಂವಿಧಾನದಿಂದ ಸಾಧ್ಯವಾಗಿದೆ. ಶ್ರೇಷ್ಠವಾದ ಸಂವಿಧಾನವನ್ನು ಒಪ್ಪಿಕೊಂಡು,ಅಪ್ಪಿಕೊಂಡು ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಭಾರತ ಮಾತೆಯ ಅತೀ ದೊಡ್ಡ ಸೇವೆಯಾಗಿದೆ ಎಂದರು.

ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ರವೀಂದ್ರ ಪೈ, ರವಿಪ್ರಸಾದ್ ಶೆಟ್ಟಿ, ನ್ಯಾಯವಾದಿ ಪಿ.ಕೆ ಸತೀಶನ್, ಪೂವರಿ ತುಳು ಪತ್ರಿಕೆ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಭಾರ ಮುಖ್ಯ ಶಿಕ್ಷಕಿ ಸುನೀತಾ ಸ್ವಾಗತಿಸಿದರು. ಈಶ್ವರಿ ಮುಂಡೂರು ಆಶಯ ಗೀತೆ ಹಾಡಿದರು. ಶಿಕ್ಷಕಿಯರಾದ ಗಾಯತ್ರಿ ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು.

LEAVE A REPLY

Please enter your comment!
Please enter your name here