





ಪುತ್ತೂರು: 75 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳು ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಡಾ|ಡಿ. ವೀರೇಂದ್ರ ಹೆಗ್ಗಡೆಯವರನ್ನು ದ.ಕ.ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ವತಿಯಿಂದ ಹಾರಾರ್ಪಣೆ ಮಾಡಿ, ಫಲ ಪುಷ್ಪ ನೀಡಿ ಗೌರವಿಸಲಾಯಿತು.








ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಕಾಣಿಯೂರು, ಗೌರವಾಧ್ಯಕ್ಷರಾದ ನಲ್ಕ ಗೋಪಾಲಕೃಷ್ಣ ಆಚಾರ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರಮೀಳಾ ಜನಾರ್ದನ, ಕಾರ್ಯಾಧ್ಯಕ್ಷರಾದ ಪ್ರಭಾ ಹರೀಶ್, ಗೌರವ ಸಲಹೆಗಾರರಾದ ಪ್ರಭಾಕರ ಆಚಾರ್, ಕಾರ್ಯದರ್ಶಿ ಕೆ.ಅರ್ ಸಂಜೀವ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಗದೀಶ ಅಚಾರ್ಯ, ಸುರೇಂದ್ರ ಆಚಾರ್ಯ, ಕಿಶೋರ್ ಅಚಾರ್ಯ, ಪ್ರಶಾಂತ್ ಆಚಾರ್ಯ ಸುಳ್ಯ, ಜ್ಯೋತ್ಸ್ನಾಶ್ರೀ ಅಬೀರ ಉಪಸ್ಥಿತರಿದ್ದರು.


 
            