ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಪೆಲತ್ತಿಲ ನಿವಾಸಿ, ಪುತ್ತೂರು ಎಪಿಎಂಸಿ ಮಾಜಿ ಸದಸ್ಯ ಗೋವಿಂದ ನಾಯ್ಕ್(55ವ.) ಅವರು ಡಿ.2ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಗೋವಿಂದ ನಾಯ್ಕ್ರವರು ನ.30ರಂದು ಬೆಳಿಗ್ಗೆ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು ಅದೇ ದಿನ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಡಿ.1ರಂದು ಮನೆಗೆ ಬಂದಿದ್ದರು. ಡಿ.2ರಂದು ಮುಂಜಾನೆ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಗೋವಿಂದ ನಾಯ್ಕ್ರವರು ಕೃಷಿ ಹಾಗೂ ಕೂಲಿ ಕಾರ್ಮಿಕರಾಗಿದ್ದರು. ಮೃತರು ತಾಯಿ ಕಮಲ, ಪತ್ನಿ ಕೌಕ್ರಾಡಿ ಗ್ರಾ.ಪಂ.ಸದಸ್ಯೆ ಪುಷ್ಪಾ ಹಾಗೂ ಪುತ್ರಿ ಕೃತಿ ಅವರನ್ನು ಅಗಲಿದ್ದಾರೆ.