ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಶಾಸಕರ ರೂ.10ಲಕ್ಷ ಅನುದಾನದಲ್ಲಿ ನಡೆಯಲಿರುವ ಕಾಂಕ್ರಿಟೀಕರಣ ಕಾಮಗಾರಿಗೆ ಡಿ.4ರಂದು ಶಂಕುಸ್ಥಾಪನೆ ನೆರವೇರಿತು.
ಶಾಸಕ ಸಂಜೀವ ಮಠಂದೂರು ಶಂಕುಸ್ಥಾಪನೆ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ನಗರ ಸಭಾ ಸದಸ್ಯ ಶೀನಪ್ಪ ನಾಯ್ಕ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಕಾರ್ಯದರ್ಶಿ ರಮೇಶ್ ರೈ ಮೊಟ್ಟೆತ್ತಡ್ಕ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ,ಎಸ್., ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಡಳಿತ ನಿರ್ದೇಶಕ ಸೋಮಶೇಖರ್ ರೈ ಇಳಂತಾಜೆ, ಸತೀಶ್ ಕುಲಾಲ್, ರವಿನಾಥ ಗೌಡ ಬೈಲಾಡಿ, ವೇಣುಗೋಪಾಲ್ ಶೆಟ್ಟಿ, ರಾಜೇಶ್ ರೈ ಸಂಪ್ಯ, ನವೀನ್ ಕುಕ್ಕಾಡಿ, ತೇಜಸ್ ಯು.ಎಸ್., ರಮಾನಾಥ ಗೌಡ ಬೈಲಾಡಿ, ಗಂಗಾಧರ ಅಮೀನ್, ಉಮೇಶ್ ಎಸ್.ಕೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ವಂದಿಸಿದರು.