














ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.ಯು. ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಶಾಂತಿನಗರ ಕ್ಷೇತ್ರದೊಡೆಯನೇ’ ಕನ್ನಡ ಫ್ಯೂಷನ್ ಸಾಂಗ್ ನ ಪೋಸ್ಟರ್ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು.
ಚಿದು ಪಾಂಗಲ್ಪಾಡಿ ಸಾಹಿತ್ಯ ಬರೆದಿದ್ದು ತೇಜಸ್ವಿನಿ ಕುಕ್ಕಿಲ ಹಾಡಿದ್ದಾರೆ. ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ್ ಶೆಟ್ಟಿ ಮತ್ತು ಅಶ್ವಥ್ ಛಾಯಾಗ್ರಹಣ ಮಾಡಿದ್ದು ಹಿತೇಶ್ ಪಮ್ಮನಮಜಲು ಅವರು ಸಂಕಲನ ಮಾಡಿದ್ದಾರೆ.
ಕೀರ್ತಿರಾಜ್ ಕೆ . ಸಂಗೀತ ನೀಡಿದ್ದು ಅಚಲ್ ಉಬರಡ್ಕ ನಿರ್ದೇಶನ ಮಾಡಿದ್ದಾರೆ. ತಲಕಾವೇರಿಯ ಅನುವಂಶಿಕ ಅರ್ಚಕ ಟಿ. ಎಸ್. ಸುಧೀರ್ ಆಚಾರ್ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧ, ಅರ್ಚಕ ನಾಗರಾಜ ಭಟ್, ಸಾಯಿಗೀತ, ದಿವ್ಯ ಸುಧೀರ್, ಸುಜಿತ್ ಶಾಂತಿನಗರ, ಶ್ಯಾಮಲ ನಾಗರಾಜ್ ಉಪಸ್ಥಿತರಿದ್ದರು.







