ನೆಲ್ಯಾಡಿ: ಶ್ರೀರಾಮ ಶಾಲೆಯಲ್ಲಿ ಸರಸ್ವತಿ ವರ್ತುಲದ ಕಾರ್ಯಗಾರ

0

ನೆಲ್ಯಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇದರ ವತಿಯಿಂದ ಸರಸ್ವತಿ ವರ್ತುಲದ ಕಾರ್ಯಾಗಾರವು ನೆಲ್ಯಾಡಿ ಶ್ರೀರಾಮ ಶಾಲೆಯಲ್ಲಿ ಡಿ.3ರಂದು ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸೂರ್ಯಪ್ರಕಾಶ್ ಉಡುಪರವರು ಮಾತನಾಡಿ, ಶಿಕ್ಷಕನ ಕಲಿಕೆ ನಿರಂತರವಾದಾಗ ಮಾತ್ರ ಯಶಸ್ಸು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ವಿದ್ಯಾಲಯದ ಕಾರ್ಯದರ್ಶಿ ಮೂಲಚಂದ್ರ ಕಾಂಚನರವರು ಕಾರ್ಯಗಾರಕ್ಕೆ ಶುಭ ಹಾರೈಸಿದರು. ಕಡಬ ಸರಸ್ವತಿ ವಿದ್ಯಾಲಯ, ಆಲಂಕಾರು ಶ್ರೀ ಭಾರತಿ ಹಾಗೂ ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಮುಖ್ಯಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವರ್ತುಲ ಪ್ರಮುಖರಾದ ಚಂದ್ರಹಾಸ ಕೆ.ಸಿ. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಮುಖ್ಯಗುರು ಗಣೇಶ್ ವಾಗ್ಲೆ ವಂದಿಸಿದರು. ಭಾಗೀರಥಿ ಕಾರ್ಯಕ್ರಮ ನಿರೂಪಿಸಿದರು.

ಮೊದಲನೆಯ ಅವಧಿಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಕ್ಷೇತ್ರ ಸಮನ್ವಯ ಅಧಿಕಾರಿ ನವೀನ್ ವೇಗಸ್‌ರವರು ” ದೀಕ್ಷಾ ತಂತ್ರಾಂಶದಲ್ಲಿ ನಿಷ್ಠಾ ಕಲಿಕೆ” ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ಎರಡನೇ ಅವಧಿಯಲ್ಲಿ ಸುಳ್ಯದ ಕಲಾ ಶಿಕ್ಷಕ ಪ್ರಸನ್ನ ಐವರ್ನಾಡುರವರು ಕಲೆಯೊಂದಿಗೆ ಕಲಿಕೆ ಎಂಬ ವಿಷಯದ ಕುರಿತು ಚಟುವಟಿಕೆ ಅಧಾರಿತವಾಗಿ ವಿಷಯ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನಿರ್ದೇಶಕ ಶಿವಪ್ರಸಾದ್‌ರವರು ಮಾತನಾಡಿ, ಶಿಕ್ಷಕನು ತಾನು ಜೀವನದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾದ ನಿಯಮದ ಕುರಿತು ತಿಳಿಸಿದರು. ನಿವೃತ್ತ ಮುಖ್ಯಗುರು ಶೀನಪ್ಪ ನಾಯ್ಕ್‌ರವರು ಶಿಕ್ಷಕರಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಲಯದ ಅಧ್ಯಕ್ಷ ಡಾ. ಮುರಳೀಧರರವರು ಶಿಕ್ಷಕರಿಗೆ 12 ವಿಷಯಗಳ ಆದರ್ಶದ ಬಗ್ಗೆ ತಿಳಿಸಿದರು. ಕೋಮಲಾಂಗಿ ಸ್ವಾಗತಿಸಿ, ಸಂಸ್ಥೆಯ ಕಾರ್ಯದರ್ಶಿ ಮೂಲಚಂದ್ರ ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದಲ್ಲಿ ಸರಸ್ವತಿ ವರ್ತುಲದ ಒಟ್ಟು 72 ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here