ಪುತ್ತೂರು: ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೃತಿ ಅವರನ್ನು ಬನ್ನೂರು ಮನೆಯಲ್ಲಿ ಬಾಂಧವ್ಯ ಒಕ್ಕಲಿಗ ಸ್ವ ಸಹಾಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೃತಿ ಅವರು ವಿದ್ಯಾಭಾರತಿ ಕರ್ನಾಟಕ ಇವರು ನಡೆಸಿದ ಸ್ಪರ್ಧೆಗಳಲ್ಲಿ ಜಿಲ್ಲೆ, ರಾಜ್ಯ, ವಿಭಾಗ ಮತ್ತು ರಾಷ್ಟ್ರಮಟ್ಟದ 400 ಮೀಟ, 6೦೦ ಮೀಟರ್ ಮತ್ತು ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿ ವಿಭಾಗದಲ್ಲೂ ಸ್ಥಾನಗಳನ್ನು ಪಡೆದು ಕೊಂಡು ಎಸ್ಜಿಎಫ್ಐ ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ರತ್ನಾವತಿ ದಯಾನಂದ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಅಮರನಾಥ ಅಭಿನಂದನಾ ಭಾಷಣವನ್ನು ಮಾಡಿದರು. ಒಕ್ಕೂಟದ ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣರವರು ಶುಭ ಹಾರೈಸಿದರು. ಕೃತಿ ಮತ್ತು ಆಕೆಯ ತಂದೆ ಕೊರಗಪ್ಪ ಗೌಡ, ತಾಯಿ ವನಿತಾ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಬಾಂಧವ್ಯ ಸ್ವ ಸಹಾಯ ಸಂಘದ ಸದಸ್ಯರಾದ ಭಾರತಿ, ಮೀನಾಕ್ಷಿ, ಮಾಲ, ವಾರಿಜ, ಯಮುನಾ, ಕೆಸಿಡಿಸಿ ನಿವೃತ್ತ ನೌಕರ ದಯಾನಂದ ಬನ್ನೂರುಪಟ್ಟೆ, ಕು.ಕೃಪಾ ಮತ್ತಿತರರು ಉಪಸ್ಥಿತರಿದ್ರು. ಅಮೃತಾ ಪ್ರಾರ್ಥಿಸಿದರು. ಒಕ್ಕೂಟದ ಸದಸ್ಯೆ ಶಿಕ್ಷಕಿ ಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.