ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ಬೆಟ್ಟಂಪಾಡಿ ಇಲ್ಲಿ ಜೆ.ಇ( ಜಪಾನೀಸ್ ಎನ್ ಸೆಫಲೈಟಿಸ್ )ಲಸಿಕಾ ಅಭಿಯಾನ ಕಾರ್ಯಕ್ರಮ ದ. 7 ರಂದು ಹಮ್ಮಿಕೊಳ್ಳಲಾಯಿತು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಾವು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಆರೋಗ್ಯವಂತ ಮಕ್ಕಳನ್ನೇ ಆಸ್ತಿ ಮಾಡೋಣ. ಜೆ.ಇ ಲಸಿಕೆ ಬಗ್ಗೆ ಭಯ ಬೇಡ ಮುಂಜಾಗ್ರತೆ ಇರಲಿ ಎಂದು ಪೋಷಕರಿಗೆ ಸಲಹೆ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಯಶೋಧ ಸಂಪೂರ್ಣ ಲಸಿಕಾ ಮಾಹಿತಿ ನೀಡಿದರು. ಉದ್ಯಮಿ ಸತೀಶ್ ರೈ ಕಟ್ಟಾವು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಕಾರ್ಯಕ್ರಮ ಯಶಸ್ವಿಯಾಗುವಂತೆ ಶುಭ ಹಾರೈಸಿದರು.
ಮುಖ್ಯ ಗುರುಗಳಾದ ರಾಜೇಶ್ ಎನ್. ಸ್ವಾಗತಿಸಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಅಳವಡಿಸಲಾಗಿದೆ ಎಂದರು. ಸಹ ಶಿಕ್ಷಕಿ ಶ್ರೀಮತಿ ಸ್ನೇಹ ಘಾಟೆ ವಂದಿಸಿದರು. ಸಹ ಶಿಕ್ಷಕಿ ಶರ್ಮಿಳಾ ಎಸ್. ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಅಧಿಕಾರಿ ನಿಖಿಲ್ ಕೆಮ್ಮಿಂಜೆ ಲಸಿಕಾ ಅಭಿಯಾನದ ವೇಳೆ ಭೇಟಿ ನೀಡಿದ್ದರು.