ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲಾ ಸಂಪರ್ಕ ರಸ್ತೆಗೆ ಶಾಸಕರಿಂದ ಶಿಲಾನ್ಯಾಸ

0

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮಶಾಲೆಯ ಸುಮಾರು 5 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಶಾಸಕ ಸಂಜೀವ ಮಠಂದೂರು ಡಿ. 7 ರಂದು ಶಿಲಾನ್ಯಾಸ‌ ನೆರವೇರಿಸಿದರು. ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಹಾಗೂ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಂಪರ್ಕ ರಸ್ತೆಗೂ ಇದೇ ವೇಳೆ ಶಿಲಾನ್ಯಾಸ ನೆರವೇರಿಸಿದರು.

ಮೂರು ಶಿಕ್ಷಣ ಸಂಸ್ಥೆಗಳ ರಸ್ತೆಗಳಿಗೆ ತಲಾ 5 ಲಕ್ಷ ರೂ. ಗಳಂತೆ ಒಟ್ಟು 15 ಲಕ್ಷ ರೂ. ಅನುದಾನ ಮಂಜೂರುಗೊಳಿಸಿ ಶಿಲಾನ್ಯಾಸ ನೆರವೇರಿಸಿದ ಶಾಸಕರು ಶುಭ ಹಾರೈಸಿದರು. ಪ್ರಿಯದರ್ಶಿನಿ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಪವಿತ್ರ ,ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಪ್ರಮುಖರಾದ ಆರ್. ಸಿ ನಾರಾಯಣ ರೆಂಜ, ಶಂಭು ಭಟ್, ರವಿಶಂಕರ್ ಶರ್ಮ ಬೊಳ್ಳುಕಲ್ಲು, ವೆಂಕಟರಮಣ ಭಟ್ ಮಂಜುಳಗಿರಿ, ವೆಂಕಟ್ರಾವ್ ಬಿ.,‌ ಡಾ. ಸತೀಶ್ ರಾವ್, ಪ್ರಿಯದರ್ಶಿನಿ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಈ ಅನುದಾನ ಬಿಡುಗಡೆಗೊಳಿಸಲು ಮುತುವರ್ಜಿ ವಹಿಸಿದ್ದ ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರಾದ ಪ್ರಕಾಶ್ ರೈ ಬೈಲಾಡಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ ಉಪಸ್ಥಿತರಿದ್ದರು. ಮುಖ್ಯಗುರು ರಾಜೇಶ್ ಎನ್. ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here