ಶಿರಾಡಿ: ಬೈಕ್ ಪಲ್ಟಿ-ಸಹಸವಾರನಿಗೆ ಗಾಯ

0

ನೆಲ್ಯಾಡಿ: ಬೈಕ್ ಪಲ್ಟಿಯಾಗಿ ಸಹ ಸವಾರ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ಡಿ.6ರಂದು ನಡೆದಿದೆ.

ಶಿರಾಡಿಯಿಂದ ಗುಂಡ್ಯಕ್ಕೆ ಸೀನು ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ (ಕೆಎ21 ಡಬ್ಲ್ಯು 6953) ಗುಂಡ್ಯ ಸಮೀಪ ಪಲ್ಟಿಯಾಗಿದೆ. ಘಟನೆಯಲ್ಲಿ ಬೈಕ್‌ನ ಸಹಸವಾರ ಹರಿದಾಸನ್ ಎಂಬವರು ಗಾಯಗೊಂಡಿದ್ದು ಸವಾರ ಸಿನು ಎಂಬವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಅಡ್ಡಹೊಳೆ ನಿವಾಸಿ ಲವೀನ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here