





ನೆಲ್ಯಾಡಿ: ಉಪ್ಪಿನಂಗಡಿಯಿಂದ ಗೋಳಿತ್ತೊಟ್ಟಿಗೆ ಬರುತ್ತಿದ್ದ ಸ್ವಿಫ್ಟ್ ಕಾರೊಂದು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸರಕಾರಿ ಶಾಲೆಯ ಮುಂಭಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ಡಿ.8ರಂದು ಮಧ್ಯಾಹ್ನ ನಡೆದಿದೆ.








ಗೋಳಿತ್ತೊಟ್ಟು ಪಿ.ಎಸ್.ಸ್ಟೋರ್ ಮಾಲಕ ಪಿ.ಎಸ್.ಮಹಮ್ಮದ್ರವರು ತನ್ನ ಸ್ವಿಫ್ಟ್ ಕಾರಿನಲ್ಲಿ ಉಪ್ಪಿನಂಗಡಿಗೆ ಹೋದವರು ಮತ್ತೆ ಹಿಂತಿರುಗಿ ಗೋಳಿತ್ತೊಟ್ಟಿಗೆ ಬರುತ್ತಿದ್ದ ವೇಳೆ ಗೋಳಿತ್ತೊಟ್ಟು ಸರಕಾರಿ ಶಾಲೆಯ ಮುಂಭಾಗ ಹೆದ್ದಾರಿಯಲ್ಲಿ ವಾಹನಕ್ಕೆ ಅಡ್ಡಬಂದ ನಾಯಿಯೊಂದನ್ನು ತಪ್ಪಿಸುವ ಭರದಲ್ಲಿ ಕಾರು ಪಲ್ಟಿಯಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು ಚಾಲಕ ಮಹಮ್ಮದ್ರವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.









