ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುಳ್ಯ ಶಾಖೆ ಉದ್ಘಾಟನೆ

0

ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ – ಸೀತಾರಾಮ ರೈ

ಪುತ್ತೂರು: ಕಳೆದ 21 ವರ್ಷಗಳಿಂದ ವ್ಯವಹರಿಸುತ್ತಿರುವ ಸಹಕಾರಿ ಸಂಸ್ಥೆ ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 5 ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಡಿ.8 ರಂದು ನಡೆಯಿತು. ಸುಳ್ಯದ ಮುಖ್ಯ ರಸ್ತೆಯಲ್ಲಿರುವ ರಾಜಾರಾಮ್ ಕಾಂಪ್ಲೆಕ್ಸ್‌ನಲ್ಲಿ ನೂತನ ಶಾಖೆಯನ್ನು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸಿದರು. ಬೆಳಗ್ಗೆ ಪುರೋಹಿತ ಶಿವಪ್ರಸಾದ್ ನಾಗಪಟ್ಟಣ ರವರು ಗಣಪತಿ ಹವನ ನೆರವೇರಿಸಿದರು. ಬಳಿಕ ಶಿವಕೃಪಾ ಕಲಾ ಮಂದಿರದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿದ್ದರು.

ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ :

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ದೀಪ ಬೆಳಗಿಸಿ ಮಾತನಾಡಿ ಒಂದು ಒಳ್ಳೆಯ ಸಮಾರಂಭದಲ್ಲಿ ಬೆಳಗ್ಗಿನ ಹೊತ್ತು ನಾವೆಲ್ಲರು ಒಟ್ಟು ಸೇರಿದ್ದೇವೆ ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ ನನ್ನ ಅಚ್ಚು ಮೆಚ್ಚಿನ ಕ್ಷೇತ್ರ ಕಳೆದ ೫೫ ವರ್ಷಗಳಿಂದ ನನ್ನ ಬದುಕಿನಲ್ಲಿ ಇದು ಹಾಸು ಹೊಕ್ಕಾಗಿದೆ. ಸಹಕಾರಿ ಸಂಘವನ್ನು ಎಲ್ಲಿಯೂ ತೆರೆಯಬಹುದೆಂದು ಸರಕಾರ ತಿಳಿಸಿರುವುದರಿಂದ ನಮ್ಮ ಸಮಾಜದ ಬಡವರನ್ನು ಏಳಿಗೆಗೆ ತರುವ, ಅವರಿಗೆ ಸಹಕರಿಸುವ, ಅವರಲ್ಲಿ ಉಳಿತಾಯದ ಮನೋಭಾವವನ್ನು ಬೇಳೆಸುವ, ಕೃಷಿಕರ ಕಷ್ಟಕ್ಕೆ ಸಹಕರಿಸುವ ಉದ್ದೇಶದಿಂದ ಪ್ರತೀ ಸಮಾಜವು ತಮ್ಮ ಸಮಾಜದ ಹೆಸರಿನಲ್ಲಿ ಸೊಸೈಟಿಯನ್ನು ಪ್ರಾರಂಭ ಮಾಡಿ ಸಮಾಜದ ಬೆಳವಣೆಗೆಗೆ ಪ್ರಯತ್ನಿಸುತ್ತಿದೆ. ಇದಕ್ಕೆ ಸಮಾಜ ಬಾಂಧವರೆಲ್ಲದವರೆಲ್ಲ ಸಹಕರಿಸಬೇಕೆಂದರು. 21 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಪ್ರಾರಂಭವಾದ ಪರಿವಾರ ಕ್ರಡಿಟ್ ಕೋ-ಓಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿದ ನನಗೆ ಇಂದು ಸುಳ್ಯದ ಐದನೇ ಶಾಖೆಯನ್ನು ಉದ್ಘಾಟಿಸುವ ಸೌಭಾಗ್ಯದ ನೀಡಿ ನನ್ನನ್ನು ಸನ್ಮಾನಿಸಿದ್ದೀರಿ. ಇದು ನನಗೆ ಸಂತೋಷದ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿ ಸಂಸ್ಥೆಯು ಇನ್ನೂ ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸಿದರು.

 

ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆ ಸ್ಪರ್ಧಿಸಿ ಬೆಳೆಯ ಬೇಕಾಗಿದೆ:
ಸುಳ್ಯ ನಗರ ಪಂಚಾಯತ್ ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಕಾರಿ ಸಂಘಗಳು ವಿಶ್ವಾಸ, ನಂಬಿಕೆ, ತ್ವರಿತ ಸೇವೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆ ಸ್ಪರ್ಧಿಸಿ ಬೆಳೆಯ ಬೇಕಾಗಿದೆ. ಡೆಪೋಸಿಟ್ ಮತ್ತು ಸಾಲ ಹೀಗೆ ಹಣಕಾಸಿನ ವ್ಯವಹಾರದ ಜೊತೆಗೆ ಇತರ ಕ್ಷೇತ್ರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡು ಸಮಾಜದ ಬೆಂಬಲ, ವಿಶ್ವಾಸವನ್ನು ಪಡೆದು ಸಂಸ್ಥೆಯು ಮುನ್ನಡೆಯಲಿ ಎಂದು ಶುಭಹಾರೈಸಿದರು.

ಪರಿವಾರ ಬಂಟರು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುತ್ತಿದ್ದಾರೆ:
ಉದ್ಯಮಿ ಎಂ.ಬಿ.ಸದಾಶಿವ ರೈ ಮಾತನಾಡಿ ಅತೀ ಕಡಿಮೆ ಜನ ಸಂಖ್ಯೆಯನ್ನು ಹೊಂದಿರುವ ಪರಿವಾರ ಬಂಟ ಸಮಾಜ ಯಾವುದೇ ಸಮೂದಾಯದವರಿಗೂ ತಾವು ಕಡಿಮೆಯಿಲ್ಲ ಎಂಬುದನ್ನು ತಮ್ಮ ಪ್ರತಿಭೆ, ಆತ್ಮವಿಶ್ವಾಸ, ಹಾಗೂ ಸಾಧನೆಯ ಮೂಲಕ ತೋರಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಒಗ್ಗಟ್ಟು ಹಾಗೂ ಪರಿಶ್ರಮ ನಿಮ್ಮ ಸಮಾಜದ ಜೊತೆ ನಾವಿದ್ದೇವೆ. ಸಮಾಜದ ಮುಂದಿನ ಪೀಳಿಗೆಯ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಭವಿಷ್ಯಕ್ಕಾಗಿ ಮಿಸಲಾತಿಗೆ ಪ್ರಯತ್ನಿಸಿ ಎಂದು ತಿಳಿಸಿ ಅಭಿನಂದಿಸಿದರು.

ಇಲ್ಲಿನ ಜನತೆಯ ನಿಯತ್ತಿನಿಂದಾಗಿ ಸಹಕಾರಿ ಕ್ಷೇತ್ರ ಯಶಸ್ವಿಯಾಗಿ ನಡೆಯುತ್ತಿದೆ:
ಸುಳ್ಯ ವಾಣೆಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ ರೈ ಪೆರಾಜೆ ಮಾತನಾಡಿ ಸಹಕಾರಿ ಕ್ಷೇತ್ರ ಯಶಸ್ವಿಯಾಗಿ ನಡೆಯುತ್ತಿರುವುದು ನಮ್ಮ ದ.ಕ ಜಿಲ್ಲೆಯಲ್ಲಿ ಅದಕ್ಕೆ ಕಾರಣ ಇಲ್ಲಿನ ಜನತೆಯ ನಿಯತ್ತು. ಸಾಲ ತಗೊಂಡವ ಸರಿಯಾಗಿ ಮರು ಪಾವತಿ ಮಾಡುತ್ತಿರುವ ಕಾರಣಕ್ಕೆ ಇಲ್ಲಿಯ ಸಹಕಾರಿ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪರಿವಾರ ಕ್ರೆಡಿಟ್ ಸೊಸೈಟಿಗೆ ಸುಳ್ಯದ ವರ್ತಕರ ಸಹಕಾರ ಸದಾ ಇರುತ್ತದೆ ವ್ಯಾಪಾರಿಗಳಿಗೆ ಅನುಕೂಲವಾಗುವಂತಹ ಸಣ್ಣ ಮಟ್ಟದ ಸಾಲ ನೀಡಲು ವ್ಯವಸ್ಥೆ ಮಾಡಿದರೆ ಉತ್ತಮ ಎಂದು ತಿಳಿಸಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಪೈಪೋಟಿ ಇಲ್ಲ ಇಲ್ಲಿ ಇರುವುದು ಸಹಕಾರ:
ಸುಳ್ಯ ಶ್ರೀವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿ ಪರಿವಾರ ಸೊಸೈಟಿ ಬೇರೆ ಬೇರೆ ಸಮಾಜದ ಸಹಕಾರದೊಂದಿಗೆ ಉತ್ತಮವಾಗಿ ಬೆಳೆಯಲಿ. ಉತ್ತಮ ಸೇವೆಯನ್ನು ನೀಡುವ ಸಿಬ್ಬಂದಿಗಳಿರುವುದರಿಂದ ಸಂಸ್ಥೆ ಬೆಳೆಯುತ್ತದೆ. ಜಿಲ್ಲೆಯಾದ್ಯಂತ ಶಾಖೆಗಳು ತೆರೆಯಲಿ ನಮ್ಮ ಸಹಕಾರ ಯಾವತ್ತು ನಿಮಗಿದೆ ಎಂದು ತಿಳಿಸಿದರು.

ಉತ್ತಮ ವ್ಯವಹಾರದ ಜೊತೆಗೆ ಪ್ರಾಮಾಣಿಕ ಸೇವೆ, ಸಲಹೆಯಿಂದ ಸಂಸ್ಥೆ ಬೆಳೆಯುತ್ತದೆ:
ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ರಾಜೀವಿ ಆರ್.ರೈ ಬೆಳ್ಳಾರೆ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕಿನ ತರಹವೇ ಸಹಕಾರಿ ಕ್ಷೇತ್ರಗಳಿಗೆ ಕಟ್ಟು ನಿಟ್ಟಿನ ಹೊಸ ಹೊಸ ಕಾನೂನುಗಳು ಜಾರಿಗೆ ಬರಿತ್ತಿರುವ ಕಾರಣ ಅದಕ್ಕೆ ಸರಿಯಾಗಿ ಹೊಂದಿಕೊಂಡು ಹೋಗಲು ನಾವು ತಯಾರಾಗಬೇಕೆಂದು ತಿಳಿಸಿದರು.

ಸುಳ್ಯ ತಾಲೂಕು ಕ್ರೈಸ್ತ ಅಲ್ಪ ಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ. ನಡುನಿಲಂ ಮಾತನಾಡಿ ಬಹಳಷ್ಟು ಅನುಭವ, ಸಾಮೂಹಿಕ ಪ್ರಯತ್ನದಿಂದಾಗಿ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಒಂದು ಸಮಾಜ ಈ ರೀತಿ ಅಭಿವೃದ್ದಿಹೊಂದಲು ಸಾಧ್ಯ ಎಂದು ತಿಳಿಸಿ ಸಂಸ್ಥೆಯ ಬೆಳವಣೆಗೆಗೆ ನಿಮ್ಮ ಸಹಕಾರ ಸದಾ ಹೀಗೆ ಇರಲಿ ಎಂದರು.

ಸುಳ್ಯ ಅಲ್ಪ ಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎಂ.ಬಾಪು ಸಾಹೇಬ್ ಮಾತನಾಡಿ ಪರಿವಾರ ಸೊಸೈಟಿಯ ಸುಳ್ಯ ಶಾಖೆಯನ್ನು ಗಮನಿಸಿದಾಗ ಬೆಳೆಯ ಸಿರಿಯನ್ನು ಮಳಕೆಯಲ್ಲೆ ನೋಡು ಎಂಬ ಗಾದೆ ಮಾತು ನೆನಪಾಯಿತು. ಜನರ ಮನಸ್ಸನ್ನು ಅರ್ಥಮಾಡಿಕೊಂಡು ವ್ಯವಹಾರವನ್ನು ಮಾಡಿ ಸುಳ್ಯದ ಶಾಖೆ ಉಳಿದೆಲ್ಲ ಶಾಖೆಯನ್ನು ಮೀರಿ ಮುಂಚೂಣಿಯಲ್ಲಿ ಬೆಳೆಯುತ್ತದೆ ಎಂಬ ವಿಶ್ವಾಸ ಇಲ್ಲಿಯ ವಾತಾವರಣವನ್ನು ನೋಡಿ ನನಗನಿಸಿತು ಎಂದು ತಿಳಿಸಿ ಸಂಸ್ಥೆ ಸರ್ವತೋಮುಖ ಅಭಿವೃದ್ದಿ ಹೊಂದಲಿ ಎಂದರು.

ಇಂಜೀನಿಯರ್ ಹಾಗೂ ಕಟ್ಟಡದ ಮಾಲಕ ಕೃಷ್ಣ ರಾವ್ ನಾವೂರು ಮಾತನಾಡಿ ಹುಣ್ಣಿಮೆಯ ಶುಭದಿನದಂದು ಪ್ರಾರಂಭವಾದ ಈ ಸಂಸ್ಥೆ ಪಂಚಮಮ್ ಕಾರ್ಯಸಿದ್ದಿ ಎಂಬಂತೆ ಸುಳ್ಯದಲ್ಲಿ ಉನ್ನತ ವ್ಯವಹಾರವನ್ನು ಮಾಡಿ ಉತ್ತರೋತ್ತರ ಅಭಿವೃದ್ದಿಯನ್ನು ಹೊಂದಲಿ. ಸುಳ್ಯದ ಜನತೆ ಯಾರನ್ನು ಎಂದಿಗೂ ಕೈ ಬಿಟ್ಟಿಲ್ಲ ಆದ್ದರಿಂದ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಕಟ್ಟಡದ ಪರವಾಗಿ, ಸುಳ್ಯದ ಜನತೆಯ ಪರವಾಗಿ ಶುಭ ಹಾರೈಸಿದರು.

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಪರಿವಾರ ಬಂಟರ ಸಂಘ ಸುಳ್ಯ ವಲಯದ ಅಧ್ಯಕ್ಷ ಪಿ.ಕೆ ವಿಠಲ ನಾಕ್ ದೋಣಿ ಮೂಲೆ, ಸಲಹಾ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿಂಜ, ಸಂಘದ ಸಿ.ಇ.ಒ. ಸುಧಾಕರ ಕೆ.ಪಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಠೇವಣಿ ಪತ್ರಗಳ ಬಿಡುಗಡೆ, ನೂತನ ಉಳಿತಾಯ ಖಾತೆಗಳ ಬಿಡುಗಡೆ, ಸಾಲ ಪತ್ರಗಳ ಬಿಡುಗಡೆ ನೆರವೇರಿಸಲಾಯಿತು. ನಿರ್ದೇಶಕ ಕೊಡಂಗೆ ಬಾಲಕೃಷ್ಣ ನಾಕ್‌ಪ್ರಾಸ್ತಾವಿಕ ಮಾತನಾಡಿದರು. ಸಲಹಾ ಸಮಿತಿ ಕಾರ್ಯದರ್ಶಿ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿ.ಇ.ಒ ಸುಧಾಕರ ಕೆ.ಪಿ ವಂದಿಸಿದರು. ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಗೋಪಾಲ ನಾಯ್ಕ್‌, ರಘನಾಥ ನಾಯ್ಕ್‌, ರತ್ನಾಕರ ನಾಯ್ಕ್‌, ಸುದೇಶ್ ಕುಮಾರ್, ಟಿ.ಸದಾಶಿವ ನಾಯ್ಕ್‌, ರಾಕೇಶ್ ಕುಮಾರ್, ಸತೀಶ್ ನಾಯ್ಕ್‌, ದಿನೇಶ್ ಕುಮಾರ್ ,ಗುಲಾಬಿ ಕೆ., ಹೇಮಲತಾ ಎಸ್. ನಾಯ್ಕ್‌, ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು ಹಾಗೂ ಸುಳ್ಯ ಸಲಹಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ಸುಳ್ಯ ಶಾಖಾ ವ್ಯವಸ್ಥಾಪಕರಾದ ಪ್ರೀತಂ ಎನ್., ಸಿಬ್ಬಂದಿಗಳಾದ ಪ್ರೇಮಾನಂದ ನಾಕ್, ನಂದನ್ ಕುಮಾರ್, ತನುಜ, ಪಿಗ್ಮಿ ಸಂಗ್ರಹಕರಾದ ಗೀತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು

ಸಹಕಾರ ರತ್ನ ಕೆ.ಸವಣೂರು ಸೀತಾರಾಮ ರೈ ಯವರಿಗೆ ಸನ್ಮಾನ

ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕ ಸದಸ್ಯ, ಪ್ರಥಮ ಶಾಖೆಯ ಉದ್ಘಾಟಕ, ಪ್ರಥಮ ಠೇವಣಿದಾರ ಸಂಸ್ಥೆಯ ಹಿತೈಷಿಗಳೂ ಮಾರ್ಗದರ್ಶಕರಾದ ಸೀತಾರಾಮ ರೈ ಯವರನ್ನು ಶಾಲು ಹೊದಿಸಿ, ಹಾರಾರ್ಪಣೆ ಮಾಡಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಶಂಕರ ನಾಯ್ಕ್ ಸನ್ಮಾನ ಪತ್ರ ವಾಚಿಸಿದರು.

2001 ರಲ್ಲಿ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಮಂಜುಶ್ರಿ ಕಟ್ಟಡದಲ್ಲಿ ಪ್ರಾರಂಭಗೊಂಡ ಪರಿವಾರ ಕ್ರಡಿಟ್ ಕೋ-ಓಪರೇಟಿವ್ ಸೊಸೈಟಿ ಕಳೆದ 21 ವರ್ಷಗಳಿಂದ ಜನತೆಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದೆ. ಸೊಸೈಟಿಯು ಕಡಬ, ಮಂಗಳೂರು ಹಾಗೂ ಕೊಕ್ಕಡದಲ್ಲಿ ಶಾಖೆಯನ್ನು ಹೊಂದಿದ್ದು ಉತ್ತಮವಾಗಿ ಮುನ್ನಡೆಯುತ್ತಿದೆ. ಇದೀಗ ಸುಳ್ಯದಲ್ಲಿ 5 ನೇ ಶಾಖೆಯನ್ನು ಪ್ರಾರಂಭಗೊಳಿಸಿದ್ದೇವೆ ಇದಕ್ಕೆ ಕಾರಣ ಅನುಭವಸ್ಥ ಸಹಕಾರಿಗಳನ್ನು ಹೊಂದಿರುವ ಆಡಳಿತ ಮಂಡಳಿ, ಸಂಘದ ಸದಸ್ಯರ ಸಹಕಾರ, ಸಿಬಂಧಿಗಳ ಪ್ರಾಮಾಣಿಕ ಸೇವೆ, ವಿಶ್ವಾಸಪೂರ್ಣ ಗ್ರಾಹಕರು, ಹೀಗೆ ಸರ್ವಜನರ ಸಹಕಾರದೊಂದಿಗೆ ಸೊಸೈಟಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದಕ್ಕೆ ಕಾರಣಕಾರ್ತರಾದ ಪ್ರತಿಯೊಬ್ಬರಿಗೂ ನಮ್ಮ ಕೃತಜ್ಷತೆಗಳು. ಸುಳ್ಯ ಶಾಖೆಯ ಶುಭಾರಂಭದ ಪ್ರಯುಕ್ತ ಠೇವಣಿಗಳ ಮೇಲೆ ಡಿ. 31ರ ಒಳಗೆ ಒಂದು ವರ್ಷಕ್ಕೆ ಮೇಲ್ಪಟ್ಟ ಠೇವಣಿಗಳಿಗೆ ಶೇ 9% ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ. 9.5 ಬಡ್ಡಿ ನೀಡಲಾಗುವುದು.

ಎ ಸಂತೋಷ್ ಕುಮಾರ್
ಅಧ್ಯಕ್ಷರು ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ.

LEAVE A REPLY

Please enter your comment!
Please enter your name here