ಈಶ್ವರಮಂಗಲ: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿ ದಶಮಾನೋತ್ಸವದ ಸವಿನೆನಪಿನ ದಶಪಥ ಸಭಾಂಗಣವನ್ನು ಶಾಸಕರಾದ ಸಂಜೀವ ಮಠಂದೂರು ದೀಪ ಪ್ರಜ್ವಲಿಸಿ ಡಿ.8ರಂದು ಉದ್ಘಾಟಿಸಿದರು. ಆ ಬಳಿಕ ಮಾತನಾಡಿ,ಗ್ರಾಮೀಣ ಪ್ರದೇಶದ ಸರಕಾರಿ ಪ್ರೌಢಶಾಲೆಯಲ್ಲಿ ಉತ್ತಮವಾದ ಶಿಕ್ಷಣ ದೊರಕುತ್ತಿದ್ದು, ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ದೊರಕಿದ್ದು ಅಲ್ಲದೆ ಸಹಪಠ್ಯ ಮತು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಡಿಜಿಟಲ್ ಕ್ಲಾಸು, ಶುದ್ಧ ಕುಡಿಯುವ ನೀರಿನ ಸೌಲಭ್ಯ, ವಿಶೇಷ ಶೌಚಾಲಯ, ಹೊಸ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿದರು.
ಉದ್ಯಮಿ ಕಿಶನ್ ಜೆ. ಶೆಟ್ಟಿ ಮಾತನಾಡಿ, ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನಾವೆಲ್ಲ ಪಡೆಯಬೇಕು. ಸರಕಾರಿ ಶಾಲೆ ಎಂಬ ಕೀಳರಿಮೆ ನಮ್ಮಲ್ಲಿ ಇರಬಾರದು. ನಾನೂ ಸರಕಾರಿ ಶಾಲೆಯಲ್ಲಿ ಕಲಿತವ, ಸಾಧನೆ ಮಾಡಲು ಇಲ್ಲಿತುಂಬಾ ಅವಕಾಶಗಳಿವೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸಭಾ ಅಧ್ಯಕ್ಷರಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ ಅಧ್ಯಕ್ಷತೆ ವಹಿಸಿ, ಶಾಲಾಭಿವೃದ್ಧಿಗೆ ಪೂರಕವಾಗಿ ಎಲ್ಲರೂ ಸಹಕರಿಸಬೇಕು ಎಂದರು. ದಶಪಥ ಸಭಾಂಗಣಕ್ಕೆ ಅನುದಾನ ಒದಗಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಅನಿತಾ ಹೇಮನಾಥ ಶೆಟ್ಟಿ, ಫೌಝಿಯಾ ಇಬ್ರಾಹಿಂ, ಪದ್ಮನಾಭ ರೈ ಬೆದ್ರಾಡಿ, ಶ್ರೀರಾಮ್ ಪಕ್ಕಳ, ವೆಂಕಪ್ಪ ನಾಯ್ಕ, ಶಶಿಕಲಾ ರೈ, ರಾಮ ಮೇನಾಲ, ಪ್ರದೀಪ್ ಕುಮಾರ್, ಚಂದ್ರಹಾಸ ಈಶ್ವರಮಂಗಲ, ಲಲಿತಾ, ಪ್ರಫುಲ್ಲಾ ರೈ, ಸದಾಶಿವ ರೈ ನಡುಬೈಲು, ಸರೋಜಿನಿ ನಾಗಪ್ಪಯ್ಯ, ನಾಗಪ್ಪಯ್ಯ, ಮಹಮ್ಮದ್ ಪಳ್ಳತ್ತೂರು, ಇಬ್ರಾಹಿಂ ಪಳ್ಳತ್ತೂರು, ಪ್ರವೀಣ್ ರೈ ಮೇನಾಲ, ಉಪಸ್ಥಿತರಿದ್ದರು.
ದಶಪಥ ಸಭಾಂಗಣಕ್ಕೆ ಅನುದಾನ ಒದಗಿಸಿದ ಸಂಜೀವ ಮಠಂದೂರು, ಕಿಶನ್ ಜೆ. ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಫೌಝಿಯಾ ಇಬ್ರಾಹಿಂ, ರಮೇಶ್ ರೈ ಸಾಂತ್ಯ, ಅತುಲ್ ಇವರನ್ನು ಗೌರವಿಸಲಾಯಿತು.
ದಶಪಥ ಸಭಾಂಗಣದ ಸವಿನೆನಪಿನಲ್ಲಿ ದಾನಿಗಳನ್ನು, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಹಪಠ್ರ ಮತ್ತು ಕ್ರೀಡೆಯ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ರೈ ಸಾಂತ್ಯ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರೇಮ್ ಕುಮಾರ್ ವರದಿ ವಾಚಿಸಿದರು. ಸಹಪಠ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಾಧಕರ ಪಟ್ಟಿಯನ್ನು ಶಿಕ್ಷಕಿ ಸುನೀತಾ ಬಿ., ಯಶೋಧ ಕೆ., ಮತ್ತು ಜಗದೀಶ ಹೆಚ್.ಜಿ., ಅಮೃತವಲ್ಲಿ ನಿರ್ವಹಿಸಿದರು. ಶಿಕ್ಷಕಿ ಇಂದಿರಾ ಎ. ವಂದಿಸಿದರು. ದೇವಿಪ್ರಕಾಶ್ ಶೆಟ್ಟಿ ಮತ್ತು ಉದಯ ಎಸ್. ಕಾರ್ಯಕ್ರಮ ನಿರೂಪಿಸಿದರು.