ಪುತ್ತೂರು:ಪರಸಸ್ಪರ ಸ್ನೇಹ, ಮಿತ್ರತ್ವಕ್ಕೆ ಆಟೋ ಚಾಲಕರೇ ಸಾಕ್ಷಿ. ರಿಕ್ಷಾ ಚಾಲಕರಲ್ಲಿರುವಷ್ಟು ಪ್ರಾಮಾಕತೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ತಮ್ಮ ರಿಕ್ಷಾದಲ್ಲಿ ಬಿಟ್ಟು ಹೋದ ಬೆಳೆ ಬಾಳುವ ವಸ್ತು, ನಗದುಗಳನ್ನು ಸಂಬಂಧಪಟ್ಟ ವಾರೀಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕ ಸೇವೆ ಮೆಚ್ಚಲೇಬೇಕು. ಇಂಹತ ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಹೇಳಿದರು.
ಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ಡಿ.೧೧ರಂದು ನಡೆದ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಬೆಳ್ಳಿ ಹಬ್ಬ ಸ್ನೇಹೋತ್ಸವ-೨೦೨೨ನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬದುಕಿನಲ್ಲಿ ಸ್ನೇಹ ಎನ್ನುವ ಪದ ಶ್ರೇಷ್ಠವಾದುದು. ಅದಕ್ಕೆ ಬಹಳಷ್ಟು ವೈಶಿಷ್ಟ್ಯತೆಯಿದೆ. ಸ್ನೇಹದ ಕೊರತೆಯಿಂದ ಆಪತ್ತುಗಳು ಎದುರಾಗುತ್ತಿದೆ. ಪ್ರೀತಿ, ಮಿತ್ರತ್ವವಿದ್ದಾಗ ಸಮಾಜದಲ್ಲಿ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ. ಸ್ನೇಹ ಸಹಕಾರವಿದ್ದಾಗ ಸಂಘಟನಗಳು ಬಲಿಷ್ಠವಾಗಿ ಮುಂದುರಿಯುತ್ತದೆ. ಇಂತಹ ಸ್ನೇಹ, ಮಿತ್ರತ್ವಕ್ಕೆ ಇನ್ನೊಂದು ಹೆಸರೇ ಆಟೋ ಚಾಲಕರಾಗಿದ್ದಾರೆ. ಆಟೋ ಚಾಲಕ ಮ್ಹಾಲಕರು ತಮ್ಮ ಸ್ವಂತಕ್ಕೆ ಮಾತ್ರವಲ್ಲದೆ ಲೋಕದ ಹಿತಕ್ಕೆ ತೊಡಗಿಸಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿ ಸ್ವಾಮಿಜಿಯವರು ಚಾಲಕರಲ್ಲಿಯೂ ದೇಶ, ಪ್ರೇಮವಿದ್ದು ರಾಷ್ಟ್ರೀಯತೆಯನ್ನು ಉಳಿಸುವ ಕಾರ್ಯವಾಗಬೇಕು. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕರ ಸಂಘ ಸುವರ್ಣ ಮಹೋತ್ಸವಕ್ಕೆ ಅಣಿಯಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ಎಲ್ಲಾ ವೃತ್ತಿಯಂತೆ ರಿಕ್ಷಾ ಚಾಲಕರಿಗೂ ತಮ್ಮದೇ ಆದ ವೈಶಿಷ್ಟ್ಯತೆಯಿದೆ. ಎಷ್ಟೇ ಹೊತ್ತಿಗೂ ಕರೆದಾಗಲೂ ಆಗುವುದಿಲ್ಲ ಎನ್ನುವ ಚಾಲಕರಿಲ್ಲ. ಪ್ರಯಾಣಿಕರನ್ನು ಆಕರ್ಷಿಸಲು ಆಟೋಗಳಲ್ಲಿ ವೈಪೈಯಂತಹ ಹೆಚ್ಚುವರಿ ಸೇವೆ ನೀಡಬೇಕು. ಧರ್ಮ ಮಾರ್ಗದಲ್ಲಿ ಸಂಪಾದನೆ ಮಾಡಬೇಕು. ಸ್ವಚ್ಚತೆಗೆ ಮಾದರಿಯಾಗಿರುವ ಸ್ನೇಹ ಸಂಗಮ ಆಟೋ ಚಾಲಕರು ತಮ್ಮ ಆಟೋಗಳಲ್ಲಿ ಡಬ್ಬ ಅಳವಡಿಸುವುದಾರೆ ನೂರು ಮಂದಿ ಚಾಲಕರಿಗೆ ಡಬ್ಬ ನೀಡಲು ನಾನು ಬದ್ದನಾಗಿದ್ದೇನೆ. ಎಂದ ಅವರು ದೇವಸ್ಥಾನದ ಎಲ್ಲಾ ಕಾರ್ಯಗಳಲ್ಲಿ ರಿಕ್ಷಾ ಚಾಲಕರ ಉತ್ತಮ ಸಹಕಾರ ದೊರೆಯುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಮಾತನಾಡಿ, ಕಳೆದ ೨೫ ವರ್ಷಗಳಿಂದ ಸ್ನೇಹ ಸಂಗಮ ರಿಕ್ಷಾ ಚಾಲಕರು ವಿವಿಧ ರೂಪದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ವೈದ್ಯರಂತೆ ಆಪತ್ಬಾಂದವರಾಗಿರುವ ಆಟೋ ರಿಕ್ಷಾ ಚಾಲಕರು ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಂತಹ ಶ್ರಮಜೀವಿಗಳ ಸೇವೆಯನ್ನು ಸಮಾಜ ಗುರುತಿಸಬೇಕು. ಬೆಳ್ಳಿ ಹಬ್ಬ ಆಚರಿಸುತ್ತಿರುವ ಸಂಘವು ಸುವರ್ಣ ಮಹೋತ್ಸವವನ್ನು ಕಾಣುವಂತಾಗಲಿ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಮಾತನಾಡಿ, ಆಟೋ ಚಾಲಕರು ಸಮಾಜ ಸೇವೆಯಲ್ಲಿ ಮುಂಚೂನಿಯಲ್ಲಿರುವವರು. ಸ್ವಚ್ಚತೆ, ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿಯೂ ಉತ್ತಮ ಸಹಕಾರ ನೀಡಿರುತ್ತಾರೆ. ಸಮಾಜಕ್ಕಾಗಿ ದುಡಿಯುವ ಶ್ರಮಜೀವ ಆಟೋ ಚಾಲಕರಿಗೆ ಸಮಾಜದಿಂದ ಏನು ದೊರೆತಿದೆ? ಪ್ರಯಾಣಿಕರನ್ನು ಸುರಕ್ಷಿತಾವಗಿ ಬಿಟ್ಟು ಬಂದರೂ ಅವರಿಗೆ ನೀಡುವ ಬಾಡಿಗೆ ಹಣದಲ್ಲಿ ಚರ್ಚೆ ಮಾಡುವುದು, ಹೀಯಾಳಿಸುವುದು ಸರಿಯಲ್ಲಿ. ಪುತ್ತೂರಿನ ಏಕಮುಖ ರಸ್ತೆ ಸಂಚಾರದಿಂದ ಆಟೋ ಚಾಲಕರಿಗೆ ಅಧಿಕ ಹೊರೆ ಬೀಳುತ್ತಿದೆ. ಪರಿಶ್ರಮಿ ಆಟೋ ಚಾಲಕರಿಗೂ ಸರಕಾರ ಸವಲತ್ತುಗಳನ್ನು ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದಲೂ ಸರಕಾರವನ್ನು ಒತ್ತಾಯಿಸಲಾಗವುದು ಎಂದರು.
ಸಂಘದ ಗೌರವಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೭ ರಲ್ಲಿ ಹತ್ತು ಜನರಿಂದ ಪ್ರಾರಂಭವಾದ ಸಂಸ್ಥೆ ಇಂದು ೮೦೦ಕ್ಕೂ ಅಧಿಕ ಮಂದಿ ಸದಸ್ಯರನ್ನು ಹೊಂದಿದೆ. ನಮ್ಮ ರಿಕ್ಷಾ ಚಾಲಕರು ಕೇವಲ ಸಂಘಟನೆಯಲ್ಲಿ ಮಾತ್ರ ಉಳಿದಲ್ಲಿ. ಸಮಾಜದಲ್ಲಿ ನಾನಾ ರೀತಿಯ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ೨೫ನೇ ವರ್ಷಕ್ಕೆ ಸ್ವಚ್ಚತೆ, ನೊಂದವರಿಗೆ ಸಹಕಾರ ಮೊದಲಾದ ೨೫ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಚಾಲಕರು ವೃತ್ತಿ ಬಿಟ್ಟು ಸ್ವಚ್ಚತಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಸ್ನೇಹ ಸಂಗಮಕ್ಕಿದೆ. ನಮ್ಮ ಸಂಘಟನೆಯು ರಸ್ತೆ, ಪ್ರತಿಭಟನೆಗೆ ನಮ್ಮ ಬೆಂಬಲವಿಲ್ಲ. ಇತರರಿಗೆ ತೊಂದರೆ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹ ಸಂಗಮವೆಂದರೆ ಪೊಲಿಸ್ ಇಲಾಖೆಗೂ ಗೌರವವಿದೆ ಎಂದರು.
ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಕಾಮದೇನು ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಮಾಧವ ಗೌಡ, ಸಂಘದ ಕಾನೂನು ಸಲಹೆಗಾರೆ ಹರಿಣಾಕ್ಷಿ ಜೆ.ಶೆಟ್ಟಿ, ಗೌರವ ಸಲಹೆಗಾರ ಜೋಕಿಂ ಡಿ ಸೋಜ, ಸಂತ ಫಿಲೋಮೊನಾ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಮೌರೀಸ್ ಕುಟಿನ್ಹಾ, ಶಿಕ್ಷಣ ಸಂಪನ್ಮೂಲ ಕೇಂದ್ರದ ಜಿಲ್ಲಾಧ್ಯಕ್ಷೆ ನಯನಾ ರೈ, ನಗರ ಠಾಣಾ ಕಾನ್‌ಸ್ಟೇಬಲ್ ರವಿ ಕುಮಾರ್, ಸಂಘದ ಸ್ಥಾಪಕ ಅಧ್ಯಕ್ಷ ಸುಧಾಕರ ಸಾಮೆತ್ತಡ್ಕ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಸಿಲ್ವೆಸ್ಟರ್ ಡಿ’ಸೋಜ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು, ಉಪಾದ್ಯಕ್ಷ ರಘುನಾಥ ಮಣಿಯ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕರ ಸಂಘದ ಅಧ್ಯಕ್ಷ ಅರವಿಂದ ಪೆರಿಗೇರಿ, ಪ್ರಧಾನ ಕಾರ್ಯದರ್ಶಿ ತಾರಾನಾಥ ಗೌಡ, ಉಪಾಧ್ಯಕ್ಷ ಉಮೇಶ್‌ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಪ್ತಿ ಜೆ. ಶೆಟ್ಟಿ ಪ್ರಾರ್ಥಿಸಿದರು. ಸಮೃದ್ಧಿ ಜೆ. ಶೆಟ್ಟಿಯವರ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಳ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ತಾರಾನಾಥ ಲೀಲಾವತಿ ದಂಪತಿ ಸ್ವಾಮಿಜಿಯವರಿಗೆ ಫಲಪುಷ್ಪಾ ಸಮರ್ಪಿಸಿದರು. ಸಂಘದ ಸದಸ್ಯರಾದ ಶಿವರಾಜ್, ಕೇಶವ, ರೋಹಿತಾಶ್ಚ, ನವೀನ್ ಆಚಾರ್ಯ, ಶಶಿ ಕೊಡಿಪ್ಪಾಡಿ, ಶರತ್ ಪಡೀಲು, ವಿಶ್ವನಾಥ ಶೆಟ್ಟಿ ಮುರ, ರಾಧಾಕೃಷ್ಣ ಹಾರಾಡಿ, ದಿಲೀಪ್ ಮೊಟ್ಟೆತ್ತಡ್ಕ, ದುರ್ಗಾಶ್ರೀ ಅತಿಥಿಗಳಿಗೆ ಹೂ ಹಾಗೂ ಶಾಲು ಹಾಕಿ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಾಟ್ಯ ರಂಜಿನಿ ಕಳಾಯದ ವಿದುಷಿ ಪ್ರಮಿಳಾ ಉದಯಶಂಕರ ಮೊಟ್ಟತ್ತಡ್ಕ ಶಿಷ್ಯವೃಂದದವರಿಂದ ಭರತನಾಟ್ಯ ಹಾಗೂ ಪುನೀತ್ ಆರ್ಕೇಷ್ಟ್ರಾ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.