




ಪುತ್ತೂರು: ಬನ್ನೂರು ಪಂಚಾಯತ್ ವ್ಯಾಪ್ತಿಯ ಕಜೆ ಬೇರಿಕೆ ಅಂಗನವಾಡಿ ಮಕ್ಕಳ ಮತ್ತು ಪೋಷಕರ ಸಮ್ಮಿಲನ ಹಾಗು ಮಕ್ಕಳ ಕಲಿಕಾ ಸಾಮಾಗ್ರಿಗಳ ವಿತರಣೆಯು ಡಿ.17 ರಂದು ಸೇಡಿಯಾಪು ಕೋಸ್ಟಲ್ ಕೋಕೊನಟ್ ಇಂಡಸ್ಟ್ರಿಯಲ್ಲಿ ಜರುಗಲಿದೆ.



ಅಂಗನವಾಡಿ ಬಾಲವಿಕಾ ಸಮಿತಿ, ಅಂಗನವಾಡಿ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ಪೋಷಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಜೆ ಬೇರಿಕೆ ಅಂಗನವಾಡಿ ಕೇಂದ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷ ಡೆನ್ನಿಸ್ ಮಸ್ಕರೇನಸ್ ಮತ್ತು ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯ ಅವರು ತಿಳಿಸಿದ್ದಾರೆ.













