ಮೋದಿ ಪ್ರದಾನಿಯಾದ ಬಳಿಕ ನಡೆದ ಕೋಮು ಸಂಘರ್ಷಕ್ಕೆ ಯಾವ ಪದ ಪ್ರಯೋಗಿಸಬೇಕು – ಅಮಳ ರಾಮಚಂದ್ರ ಪ್ರಶ್ನೆ
ಪುತ್ತೂರು: ಇತ್ತೀಚೆಗೆ ಸಚಿವ ಸಿ.ಟಿ. ರವಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಎಂದು ಕರೆದಿದ್ದು, ಈ ಶಬ್ದ ಪ್ರಯೋಗದ ಹಿಂದು ಕೋಮು ಪ್ರಚೋದಕವಾದ ದೊಡ್ಡ ಎಜೆಂಡಾ ಇದೆ. ಇದೊಂದು ವ್ಯಯಕ್ತಿಕ ದ್ವೇಷದ ಜೊತೆಗೆ ಜನಾಂಗೀಯ ನಿಂದನೆ ಮತ್ತು ದೇಶದ್ರೋಹದ ಹೇಳಿಕೆಯಾಗಿದೆ. ಮೋದಿ ಪ್ರದಾನಿಯಾದ ಬಳಿಕ ಕಾಶ್ಮೀರ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಕೋಮು ಸಂಘರ್ಷ ನಡೆಯುತ್ತಿದೆ. ಇವರನ್ನು ಹೇಗೆ ಕರೆಯಬೇಕು ಎಂಬುದನ್ನು ಸಿಟಿ ರವಿ ಅವರು ಸ್ಪಷ್ಟಪಡಿಸಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಆರೋಪಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಿಟಿ ರವಿ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದೂಗಳ ಹತ್ಯೆ ನಡೆದಿದೆ. ಅದಕ್ಕಾಗಿ ಅವರನ್ನು ಹಾಗೆ ಕರೆದಿದ್ದೇನೆ ಎಂಬ ಹೇಳಿಕೆಯನ್ನು ನೀಡಿ ಬಳಿಕ ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ಜೊತೆಗೆ ಮುಸ್ಲಿಮರನ್ನು ಗುರಿ ಮಾಡುವುದು ಅವರ ಹೇಳಿಕೆಯ ಉದ್ದೇಶವಾಗಿದೆ. ಇಂತಹ ಹೇಳಿಕೆ ನೀಡಿ ಮುಸ್ಲಿಮರು ಮತ್ತು ಹಿಂದೂಗಳನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದಾರೆ. ಮೋದಿ ಪ್ರದಾನಿಯಾದ ಬಳಕ ಕಾಶ್ಮೀರ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಕೋಮು ಸಂಘರ್ಷ ನಡೆಯುತ್ತಿದೆ. ಇವರನ್ನು ಹೇಗೆ ಕರೆಯಬೇಕು ಎಂಬುದನ್ನು ಸಿಟಿ ರವಿ ಅವರು ಸ್ಪಷ್ಟಪಡಿಸಬೇಕು ಎಂದ ಅವರು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೋಮು ಶಕ್ತಿಗಳು ಸದೃಡವಾಗುತ್ತಿದೆ. ಅವರಿಗೆ ಪೊಲೀಸರ ಬಯವಿಲ್ಲ.
ಬಿಜೆಪಿಗೆ ಗಲಭೆ ನಡೆದಷ್ಟು ಹೆಚ್ಚು ಸಂತೋಷವಾಗುತ್ತಿದೆ. ಅಲ್ಲಲ್ಲಿ ಕಾರ್ನರ್ ಕೋಮು ಗಲಭೆ ನಡೆಸಿ ಅಲ್ಪಸಂಖ್ಯಾತರ ಮತ್ತು ಬಹುಸಂಖ್ಯಾತರ ನಡುವೆ ದ್ರುವೀಕರಣ ಮಾಡುತ್ತಾ ಅದರಿಂದ ಲಾಭ ಪಡೆಯುತ್ತಿದ್ದಾರೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದ ಇಂತಹ ಕೋಮು ಶಕ್ತಿಯನ್ನು ಮಣಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಸಾಮಾಜಿಕ ಜಾಲತಾಣದ ಸಿದ್ದೀಕ್ ಸುಲ್ತಾನ್ ಉಪಸ್ಥಿತರಿದ್ದರು.