ಪುತ್ತೂರು : ಭಾರತದಾದ್ಯಂತ 230 ಶೋರೂಮ್‌ಗಳನ್ನೊಳಗೊಂಡಿರುವ ಪುರುಷರ ರೆಡಿಮೇಡ್ ಉಡುಪುಗಳ ಸುಪ್ರಸಿದ್ಧ ಸಂಸ್ಥೆ ‘ಕಾಟನ್ ಕಿಂಗ್’ ಹೊಸ ಶೋ ರೂಂ ಪುತ್ತೂರು ಜಿ.ಎಲ್. ಕಾಂಪ್ಲೆಕ್ಸ್‌ನಲ್ಲಿ ಡಿ.16 ರಂದು ಬೆಳಿಗ್ಗೆ ಗಂಟೆ 10.15ಕ್ಕೆ ಶುಭಾರಂಭಗೊಳ್ಳಲಿದೆ.
ನೂರು ಶೇಕಡ ಭಾರತೀಯ ಉದ್ಪಾತನೆಯಾಗಿರುವ ಮತ್ತು ಶೇ.100 ಉತ್ಕೃಷ್ಟ ದರ್ಜೆಯ ಹತ್ತಿ ಬಟ್ಟೆಯಿಂದ ತಯಾರಿಸುವ ಕಾಟನ್‌ಕಿಂಗ್ ರೆಡಿಮೇಡ್ ಡ್ರೆಸ್ ಮಳಿಗೆಯನ್ನು ಫ್ಯಾಶನ್‌ಕಿಂಗ್ ಬ್ರ್ಯಾಂಡ್ ಪ್ರೈ ಲಿ.ನ ನಿರ್ದೇಶಕ ಕೌಶಿಕ್ ಮೆಹ್ತಾ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಜಿ.ಎಲ್ ಆಚಾರ್ಯ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕಾಟನ್‌ಕಿಂಗ್‌ನ ಏರಿಯ ಮೆನೇಜರ್ ಅತುಲ್ ಮನ್‌ವಿಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಶೂರೋಮ್‌ನ ಪಾಲುದಾರರಾದ ಪ್ರಸನ್ನ ಕೆ.ಆರ್ ಮತ್ತು ಪ್ರವೀಣ್ ಕೆ.ಆರ್ ತಿಳಿಸಿದ್ದಾರೆ.
ಕಾಟನ್‌ಕಿಂಗ್ ವಿಶೇಷತೆ:
ನೂರು ಶೇಕಡ ಭಾರತೀಯ ಉತ್ಪನ್ನದ ಜೊತೆಗೆ ನೂರು ಶೇಕಡ ಹತ್ತಿ ಬಟ್ಟೆಯಿಂದ ತಯಾರಿಸಿದ ಸಿದ್ದ ಉಡುಪುಗಳಲ್ಲಿ ಹಲವು ವಿಶೇಷತೆಯನ್ನು ಒಳಗೊಂಡಿದೆ. ಯಾವುದೇ ಕಲೆ ಉಳಿಯದಂತಹ ಆಂಟಿ ಸ್ಟೇನ್ ಶರ್ಟ್ ಮತ್ತು ಪ್ಯಾಂಟ್ ಇನ್ನೂ ವಿಶೇಷತೆಯನ್ನೊಳಗೊಂಡಿದೆ.