ಪುತ್ತೂರು: ಹಾರಾಡಿ ಶಾಲಾ ಬಳಿ ರಸ್ತೆ ದಾಟುತ್ತಿದ್ದ ಹಾರಾಡಿ ಶಾಲೆಯ ವಿದ್ಯಾರ್ಥಿಯೊಬ್ಬರಿಗೆ ಕಾರು ಡಿಕ್ಕಿಯಾದ ಘಟನೆ ಡಿ.16 ರಂದು ನಡೆದಿದ್ದು, ಕಾರು ಶಾಸಕರಿಗೆ ಸೇರಿದ್ದು ಎನ್ನಲಾಗಿದೆ.
ಹಾರಾಡಿ ಶಾಲಾ ವಿದ್ಯಾರ್ಥಿ ಶಾಲೆಯ ಬಳಿ ರಸ್ತೆ ದಾಟುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರು ಆತನಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಹಾರಾಡಿ ಶಾಲಾ ಬಳಿ ಹಮ್ಸ್ ಅಳವಡಿಸಲು ಸಾರ್ವಜನಿಕರ ಆಗ್ರಹ:
ಪುತ್ತೂರು ಉಪ್ಪಿನಂಗಡಿ ರಸ್ತೆಯ ಚತುಷ್ಪಥವಾದ ಬಳಿಕ ವಾಹನ ದಟ್ಟಣೆ ಹೆಚ್ಚಾಗಿದ್ದು ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ರಸ್ತೆ ವಿಭಜಕದಲ್ಲಿ ಗೊಂದಲವುಂಟಾಗಿ ಅತ್ತಿಂದಿತ್ತ ಬರುವ ವಾಹನ ಗಮನಿಸಲಾಗದೆ ಅನೇಕ ಬಾರಿ ಸಣ್ಣಪುಟ್ಟ ಅಪಘಾತಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಹಮ್ಸ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.