ಅರಿಯಡ್ಕ : ಗ್ರಾಮ ಪಂಚಾಯತ್ 2022-23 ನೇ ಸಾಲಿನ ದೂರ ದೃಷ್ಟಿ ಯೋಜನೆ ಸಿದ್ಧ ಪಡಿಸುವ ಬಗ್ಗೆ ವಿಶೇಷ ಗ್ರಾಮ ಸಭೆ ಮತ್ತು 2022-23ನೇ ಸಾಲಿನ ವಿಕಲ ಚೇತನರ ಸಮನ್ವಯದ ವಿಶೇಷ ಗ್ರಾಮ ಸಭೆಯೂ ಡಿ 14 ರಂದು ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುತ್ತೂರು ಇದರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಮತ್ತು ತಾಲೂಕು ವಿಕಲ ಚೇತನರ ವಿವಿಧೋದ್ದೇಶ ಪುನರ್ವಸತಿಯ ನವೀನ್ ಕುಮಾರ್ ಭಾಗವಹಿಸಿ ಮಾಹಿತಿ ನೀಡಿದರು.
ಕುಂಬ್ರ ಮೆಸ್ಕಾಂ ಜೂನಿಯರ್ ಇಂಜಿನಿಯರ್ ರವೀಂದ್ರ, ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿಯ ಮುಖ್ಯೋಪಾಧ್ಯಾಯ ಮೋನಪ್ಪ ಪೂಜಾರಿ ಮತ್ತು ಗ್ರಾಮ ಲೆಕ್ಕಿಗ ಗೋಪಿನಾಥ್ ಇಲಾಖಾ ಮಾಹಿತಿ ನೀಡಿದರು.ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರಾಜೇಶ್ ಎಚ್ ತ್ಯಾಗರಾಜೆ,ಸಲ್ಮಾಅಮ್ಚಿನಡ್ಕ, ಪುಷ್ಪ ಲತಾ ಮರತ್ತಮೂಲೆ, ಮೀನಾಕ್ಷಿ ಪಾಪೆಮಜಲು, ಜಯಂತಿ ಪಟ್ಟು ಮೂಲೆ,ಉಷಾರೇಖಾರೈ ಅಮೈ, ರೇಣುಕಾ ಸತೀಶ್ ಮಡ್ಯಂಗಳ, ಅನಿತಾ ಆಚಾರಿ ಮೂಲೆ, ಭಾರತಿ ವಸಂತ್ ಕೌಡಿಚ್ಚಾರು, ಮತ್ತು ಸದಾನಂದ ಮಣಿಯಾಣಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿಕಲಚೇತನರು, ಪಂಚಾಯತ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಶಿವರಾಮ ಮೂಲ್ಯ ವಂದಿಸಿದರು.