




ಪುತ್ತೂರು: ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಅಪಘಾತಗೊಂಡು ಬಲಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರ್ಮಿಕ ಬೆಟ್ಟಂಪಾಡಿಯ ಅರುಣ್ ಕುಮಾರ್ ಅವರ ಕುಟುಂಬಕ್ಕೆ ನಿಡ್ಪಳ್ಳಿ ಜೈ ಭೀಮ್ ಟ್ರಸ್ಟ್ನಿಂದ ಆರ್ಥಿಕ ನೆರವು ಸಹಿತ ದಿನಸಿ ಸಾಮಾಗ್ರಿ ಪೂರೈಸಿ ಸಂತೈಸಲಾಯಿತು.




ಕಾರ್ಮಿಕರಾಗಿರುವ ಅರುಣ್ ಕುಮಾರ್ ಬಡಕುಟುಂಬದವಾಗಿದ್ದರೂ ಅವರಿಗೆ ಬಿಪಿಎಲ್ ಪಡಿತರ ಚೀಟಿ ಬದಲು ಎಪಿಎಲ್ ಪಡಿತರ ಚೀಟಿಹೊಂದಿದ್ದು, ಅರ್ಹ ಫಲಾನುಭವಿಯಾಗಿದ್ದರೂ ಸರಕಾರದ ಸವಲತ್ತಿನಿಂದ ವಂಚಿತರಾಗಿದ್ದಾರೆ. ಇದೀಗ ಅಪಘಾತದಿಂದ ತೀವ್ರ ಜೀವನದ ಸಮಸ್ಯೆ ಎದುರಿಸುತ್ತಿರುವ ಅರುಣ್ ಕುಟುಂಬಕ್ಕೆ ನಿಡ್ಪಳ್ಳಿ ಜೈ ಭೀಮ್ ಟ್ರಸ್ಟ್ನಿಂದ ರೂ. 5ಸಾವಿರ ನಗದು ಮತ್ತು 50 ಕೆ.ಜಿ ಅಕ್ಕಿ, ದಿನಸಿ ಸಾಮಾಗ್ರಿ ನೀಡಲಾಯಿತು.





ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಮಹೇಶ, ಉಪಾಧ್ಯಕ್ಷ ಶೇಖರ, ಕಾರ್ಯದರ್ಶಿ ಗುರುವ, ಸದಸ್ಯರಾದ ಅಣ್ಣು ಕತ್ತಲೆಕಾನ, ಮೋನಪ್ಪ, ಸುಂದರ ನುಳಿಯಾಲು, ರಮೇಶ್ ನುಳಿಯಾಲು, ಬಾಬು ಕತ್ತಲೆಕಾನ ಉಪಸ್ಥಿತರಿದ್ದರು.








