ನೆಲ್ಯಾಡಿ: ಸಿ ಮತ್ತು ಡಿ ದರ್ಜೆ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಡಿ.19ರಂದು ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಕ.ರಾ.ಗ್ರಾ.ಪಂ.ನೌ.ಶ್ರೇ.ಸಂಘದ(ಆರ್.ಡಿ.ಪಿ.ಆರ್.) ವತಿಯಿಂದ ನಡೆಯುವ ಹೋರಾಟದಲ್ಲಿ ಭಾಗವಹಿಸಲು ಅನುಮತಿ ಮತ್ತು ರಜೆ ಮಂಜೂರುಗೊಳಿಸುವಂತೆ ಕೋರಿ ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರಿಗೆ ಕ.ರಾ.ಗ್ರಾ.ಪಂ.ನೌ.ಶ್ರೇಯೋಭಿವೃದ್ಧಿ ಸಂಘದ ಕಡಬ ತಾಲೂಕು ಸಮಿತಿ ವತಿಯಿಂದ ಡಿ.15ರಂದು ಪುತ್ತೂರು ತಾ.ಪಂ.ಕಚೇರಿಯಲ್ಲಿ ಮನವಿ ಮಾಡಲಾಯಿತು.
ಕಡಬ ತಾಲೂಕು ಸಮಿತಿ ಅಧ್ಯಕ್ಷೆ ಪುಷ್ಪಲತಾ ಗೋಳಿತ್ತೊಟ್ಟು, ಉಪಾಧ್ಯಕ್ಷ ಗಿರೀಶ್ ಕುಮಾರ್ ನೆಲ್ಯಾಡಿ, ದ.ಕ. ಜಿಲ್ಲಾ ಸಮಿತಿ ಪದಾಧಿಕಾರಿ ಮಮತಾ ಬೆಳಂದೂರು, ಕಾಣಿಯೂರು ವಲಯ ಸಮಿತಿ ಅಧ್ಯಕ್ಷ ತಿಮ್ಮಪ್ಪ ಕಾಣಿಯೂರು, ಕಾರ್ಯದರ್ಶಿ ಪ್ರಮೋದ್ ಸವಣೂರು, ಆಲಂಕಾರು ಗ್ರಾ.ಪಂ.ಸಿಬ್ಬಂದಿ ಹೇಮಾವತಿಯವರು ಉಪಸ್ಥಿತರಿದ್ದರು.