ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ಗೌಡರಿಂದ ಸಬಳೂರು ಶಾಲೆಗೆ ಗ್ರಂಥಾಲಯ ಕಪಾಟುಗಳು, ಪುಸ್ತಕಗಳ ಕೊಡುಗೆ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿ, ಶಾಲೆಯ ಹಿರಿಯ ವಿದ್ಯಾರ್ಥಿ, ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ಗೌಡ ಸಬಳೂರು ಅವರು ತಮ್ಮ ತಾಯಿ ದಿ.ಎಲ್ಯಕ್ಕ ಅವರ ಸವಿನೆನಪಿಗಾಗಿ 60,270 ರೂ. ವೆಚ್ಚದಲ್ಲಿ ಪ್ರತಿ ತರಗತಿಗೊಂದರಂತೆ 7 ಗ್ರಂಥಾಲಯ ಕಪಾಟುಗಳು ಹಾಗೂ ಪ್ರತಿ ತರಗತಿಗೆ ರೂ.1 ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಯಕ್ಷತಾ, ಸದಸ್ಯರಾದ ಕೊರಗಪ್ಪ, ಮುಖ್ಯಗುರು ವಾರಿಜಾರವರು ಕೊಡುಗೆ ಸ್ವೀಕರಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here