ವಿಟ್ಲ: ವಿಟ್ಲ ಕೇಂದ್ರೀಯ ತೋಟದ ಬೆಳೆಗಳ ಪ್ರಾದೇಶಿಕ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ)ಯ ಆಶ್ರಯದಲ್ಲಿ ಕಲ್ಲಿಕೋಟೆ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ ಜಿಲ್ಲೆ ಸಹಭಾಗಿತ್ವದಲ್ಲಿ ಅಡಿಕೆ ತಳಿಗಳು ಮತ್ತು ಅಡಿಕೆಯಲ್ಲಿ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ಡಿ.23ರಂದು ವಿಟ್ಲ ಸಿಪಿಸಿಆರ್‌ಐನಲ್ಲಿ ನಡೆಯಲಿದೆ.
ಬೆಳಿಗ್ಗೆ ರೈತರ ನೋಂದಣಿ ಕಾರ್ಯಕ್ರಮದ ಬಳಿಕ ಉದ್ಘಾಟನೆ ನಡೆಯಲಿದೆ. ಅನಂತರ ರೈತರಿಗೆ ಸಂಸ್ಥೆಯ ಹಿರಿಯ ವಿಜ್ಞಾನಿ ಗಳಿಂದ ತರಬೇತಿ, ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರಗತಿಪರ ಕೃಷಿಕರ ಅನಿಸಿಕೆ, ಬೋರ್ಡೋ ದ್ರಾವಣ ತಯಾರಿಕಾ ಪ್ರಾತ್ಯಕ್ಷಿಕೆ, ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಪ್ರಕಟಣೆ ತಿಳಿಸಿದೆ.