ಪುತ್ತೂರು: ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಎನ್.ಸಿ.ಸಿ, ಆರ್ಮಿ, ನೇವಿ ಮತ್ತು ಏರ್‌ವಿಂಗ್ ದಳಗಳಿಂದ ಎನ್.ಸಿ.ಸಿ ದಿನಾಚರಣೆಯನ್ನು ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ವಿಜ್ಞಾನ ಮಾದರಿ ಪ್ರಾಜೆಕ್ಟ್‌ಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕಿನ ಬಿ.ಇ.ಒ ಲೋಕೇಶ್ ಎಸ್.ಆರ್.ರವರು ಆಗಮಿಸಿ ಎನ್.ಸಿ.ಸಿ ಧ್ವಜಾರೋಹಣಗೈದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹಾ ಉಪಸ್ಥಿತರಿದ್ದರು.
ಎನ್.ಸಿ.ಸಿ ಕೆಡಟ್ಸ್ ಮತ್ತು ಶಾಲಾ ವಾದ್ಯ ವೃಂದದವರಿಂದ ಆಕರ್ಷಕ ಪಥಸಂಚಲನ ನಡೆಯಿತು. ಮನರಂಜನೆಯಾಗಿ ಎನ್.ಸಿ.ಸಿ ಕೆಡೆಟ್ಸ್‌ಗಳು ‘ಮೌನ ಶವಾಯತು’ ಕಾರ್‍ಯಕ್ರಮವನ್ನು ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರನ್ನು ಗೌರವಿಸಿ ಅವರ ದೇಶಸೇವೆಯನ್ನು ಸ್ಮರಿಸಿ, ಸನ್ಮಾನಿಸಲಾಯಿತು. ವಿವಿಧ ಶಾಲೆಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಗಮಿಸಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಾರ್ಮಿನ್ ಪಾಯಿಸ್‌ರವರು ಸ್ವಾಗತಿಸಿದರು. ಎನ್.ಸಿ.ಸಿ ಅಧಿಕಾರಿಗಳಾದ ಫಸ್ಟ್ ಆಫೀಸರ್ ಪೀಟರ್ ನರೇಶ್ ಲೋಬೋ, ಸೆಕೆಂಡ್ ಆಫೀಸರ್ ಕ್ಲೆಮೆಂಟ್ ಪಿಂಟೊ, ಸೆಕೆಂಡ್ ಆಫೀಸರ್ ರೋಶನ್ ಸಿಕ್ವೇರಾ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ವಿವಿಧ ಕಾರ್‍ಯಗಳನ್ನು ನಿರ್ವಹಿಸಿದರು. ಅಟಲ್ ಟಿಂಕರಿಂಗ್ ಲ್ಯಾಬ್‌ನ ವಿದ್ಯಾರ್ಥಿಗಳು ತಾವು ಮಾಡಿದ ವಿಜ್ಞಾನ ಮಾದರಿ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ತದನಂತರ ವಿವಿಧ ಶಾಲೆಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.