




ಪುತ್ತೂರು: ಕೋರ್ಟ್‌ರಸ್ತೆಯ ವಿಶ್ವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.









ಸೊಸೈಟಿಯ ಮುಂದಿನ ಚುನಾವಣೆ ತನಕ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಮೊದಲು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ನ್ಯಾಯವಾದಿ ರಾಕೇಶ್ ಮಸ್ಕರೇನ್ಹಸ್‌ರವರು ಸಂಸ್ಥೆಯನ್ನು ಮುನ್ನೆಡೆಸಿದ್ದು, ಮುಂದಿನ ದಿನಗಳಲ್ಲಿ ಅವರು ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ. ಉಪಾಧ್ಯಕ್ಷ ನೋಯಲ್ ಡಿ’ಸೋಜ, ನಿರ್ದೇಶಕರುಗಳಾಗಿ ರೋಯ್‌ಸ್ಟನ್ ಡಾಯಸ್, ಪವನ್ ಮಸ್ಕರೇನ್ಹಸ್, ಗಿಲ್ಬರ್ಟ್ ರೊಡ್ರಿಗಸ್, ಸಿಸಿಲಿಯಾ ರೆಬೆಲ್ಲೋ, ಪ್ರಕಾಶ್ ಸಿಕ್ವೇರಾ, ಅನಿತಾ ಜ್ಯೋತಿ ಡಿ’ಸೋಜ, ಸೊಸೈಟಿ ಕಾರ್ಯದರ್ಶಿಯಾಗಿ ಮೇಬಲ್ ಗ್ರೇಸಿ ಮಾಡ್ತಾ, ಲೆಕ್ಕಿಗ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲ್ಯಾನ್ಸಿ ಮಸ್ಕರೇನ್ಹಸ್‌ರವರು ಸಾಮೆತ್ತಡ್ಕ ದಿ.ಲೂಯಿಸ್ ಮಸ್ಕರೇನ್ಹಸ್ ಹಾಗೂ ಸ್ಟೆಲ್ಲ ಮಸ್ಕರೇನ್ಹಸ್‌ರವರ ಪುತ್ರರಾಗಿ ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾಮೆತ್ತಡ್ಕ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪೂರೈಸಿದ್ದರು. ಪುತ್ತೂರು ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿ, ಎರಡು ಅವಧಿಗೆ ಪುರಸಭಾ ಸದಸ್ಯರಾಗಿ, ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾಗಿ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮ್ಯಾನೇಜ್‌ಮೆಂಟ್ ಸಮಿತಿ ಸದಸ್ಯರಾಗಿ, ಸಂತ ಫಿಲೋಮಿನಾ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಪುತ್ತೂರು ವಲಯಕ್ಕೆ ಸಂಬಂಧಿಸಿದ 12 ಚರ್ಚ್‌ಗಳ ಕಥೋಲಿಕ್ ಸಭಾದ ವಲಯಾಧ್ಯಕ್ಷರಾಗಿ, ಮಾಯಿದೆ ದೇವುಸ್ ಚರ್ಚ್‌ನ ಸಾಮೆತ್ತಡ್ಕ ವಾಳೆಯ ಗುರಿಕಾರರಾಗಿ, ಲಯನ್ಸ್ ಕ್ಲಬ್ ವಲಯ ಒಂದರ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಇದರ ಸ್ಥಾಪಕ ಅಧ್ಯಕ್ಷರಾಗಿರುವ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಪತ್ನಿ ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಮಹಿಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಿಯಲತಾ ಡಿ’ಸಿಲ್ವ, ಪುತ್ರಿಯರಾದ ಲೆರಿಸ್ಸ ಪ್ರಿನ್ಸಿ, ಲಾರಿಯಾ ಪ್ರೀಮಲ್, ಪುತ್ರ ಲ್ಯಾನ್ಸನ್ ಪ್ರೀತ್‌ರವರೊಂದಿಗೆ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ.








