ಕಾಸರಗೋಡು : ನಗರದ ನೂತನ ಬಸ್ ನಿಲ್ದಾಣದ ಬಳಿ ಡಿ.12 ರಂದು ನಡೆದ ಸವಾಕ್ ಸಂಘಟನೆಯ ಮಾನವ ಸೌಹಾರ್ದ ಸದಸ್ ಕಾರ್ಯಕ್ರಮ ಅಂಗವಾಗಿ ಭಿತ್ತಿಚಿತ್ರಗಳ ರಚಿಸುವ ಕಾರ್ಯಕ್ರಮದಲ್ಲಿ ಪಚ್ಚಂಬಳ ನಿವಾಸಿಯಾಗಿರುವ ನೂತನ್ ಚಕ್ರವರ್ತಿ ಅವರು ಸ್ಥಳದಲ್ಲೇ ರಚಿಸಿದ ಭಿತ್ತಿಚಿತ್ರಗಳು ಜನಮನವನ್ನು ಸೆಳೆದಿದೆ.
ಇವರು ಮಾತು, ಭಾಷೆಗಳ ಹಂಗಿಲ್ಲದೆ ಚಿತ್ರಗಳಿಂದ ಹಾಗೂ ಅದಕೆ ಬಳಸಿರುವ ವರ್ಣಗಳಿಂದ ಅನೇಕ ವಿಚಾರಗಳನ್ನು ತಿಳಿಸಿದರು. ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು, ಅಹಿಂಸೆಯ ಮೂಲಕ ಸಮಾಜದಲ್ಲಿ ಉಂಟಾಗುವ ಅಶಾಂತಿ ಮುಂತಾದವುಗಳನ್ನು ಚಿತ್ರಗಳ ಮೂಲಕ ತೆರೆದಿಟ್ಟರು. ಮೂಲತಃ ಗ್ರಾಫಿಕ್ ಡಿಸೈನರ್ ಆಗಿರುವ ಇವರು ಕಾಸರಗೋಡಿನ ಚಿನ್ಮಯ ವಿದ್ಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾಂಪ್ರದಾಯಿಕ ಚಿತ್ರ ರಚನೆಯಲ್ಲಿ ಸಿದ್ದ ಹಸ್ತರಾಗಿರುವ ಇವರು ಸವಾಕ್ ಮಂಜೇಶ್ವರ ವಲಯದ ಖಜಾಂಚಿಯಾಗಿದ್ದಾರೆ. ಇವರಿಗೆ ಮಂಜೇಶ್ವರ ಸಾವಕ್ ನ ಸದಸ್ಯರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.